ಆ್ಯಪ್ನಗರ

ವಿಧಾನಸಭೆ ಮೊಗಸಾಲೆಯಲ್ಲಿ ಬಿಜೆಪಿ ಧರಣಿ

ವಿಶ್ವಾಸಮತ ಯಾಚನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸದೆ ಸದನವನ್ನು ಮುಂದೂಡುವ ಹಿಂದೆ ಆಡಳಿತ ಪಕ್ಷದ ಕೈವಾಡವಿದೆ ಎಂದು ಆರೋಪಿಸಿ ಬಿಜೆಪಿ ಸದಸ್ಯರು ವಿಧಾನಸಭೆ ಮೊಗಸಾಲೆಯಲ್ಲೇ ಗುರುವಾರ ರಾತ್ರಿ ಧರಣಿ ನಡೆಸಿದರು.

Vijaya Karnataka 19 Jul 2019, 5:00 am
ಬೆಂಗಳೂರು : ವಿಶ್ವಾಸಮತ ಯಾಚನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸದೆ ಸದನವನ್ನು ಮುಂದೂಡುವ ಹಿಂದೆ ಆಡಳಿತ ಪಕ್ಷದ ಕೈವಾಡವಿದೆ ಎಂದು ಆರೋಪಿಸಿ ಬಿಜೆಪಿ ಸದಸ್ಯರು ವಿಧಾನಸಭೆ ಮೊಗಸಾಲೆಯಲ್ಲೇ ಗುರುವಾರ ರಾತ್ರಿ ಧರಣಿ ನಡೆಸಿದರು.
Vijaya Karnataka Web bjp protest


ಪ್ರತಿಪಕ್ಷ ನಾಯಕ ಯಡಿಯೂರಪ್ಪ, ಉಪನಾಯಕ ಆರ್‌.ಅಶೋಕ್‌ ಸಹಿತ ಪಕ್ಷದ ಎಲ್ಲ ಶಾಸಕರು ಅಹೋರಾತ್ರಿ ಧರಣಿಯಲ್ಲಿ ಪಾಲ್ಗೊಂಡರು. ವಿಧಾನಸಭೆ ಸಚಿವಾಲಯವು ಶಾಸಕರಿಗೆ ರಾತ್ರಿ ಊಟ ಸರಬರಾಜು ಮಾಡಿತು. ಸ್ಪೀಕರ್‌ ಸೂಚನೆಯಂತೆ ಮಲಗಲು ದಿಂಬು, ಬೆಡ್‌ಶೀಟ್‌ನ್ನು ಒದಗಿಸಿಕೊಡಲಾಯಿತು.

ಊಟದ ಬಳಿಕ ವಿಶ್ವಾಸಮತ ಯಾಚನೆ ಕುರಿತು ಹಿರಿಯ ಶಾಸಕರಿಂದ ಚಿಂತನ-ಮಂಥನವೂ ನಡೆಯಿತು. ಶುಕ್ರವಾರ ಸಮ್ಮಿಶ್ರ ಸರಕಾರ ಪತನಗೊಂಡು ಒಂದೆರಡು ದಿನಗಳಲ್ಲಿ ಹೊಸ ಸರಕಾರ ರಚನೆ ಕುರಿತು ಬಿಸಿ ಬಿಸಿ ಚರ್ಚೆ ನಡೆದು ಮಧ್ಯರಾತ್ರಿ ಬಳಿಕ ಶಾಸಕರು ನಿದ್ರೆಗೆ ಜಾರಿದರು.

ಶಾಸಕರ ಜತೆ ಸಚಿವಾಲಯದಲ್ಲಿರುವ ವೈದ್ಯ ಸಿಬ್ಬಂದಿ ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ