ಆ್ಯಪ್ನಗರ

8 ಸ್ಥಾನಗಳನ್ನೂ ಗೆಲ್ಲದೆ ಸಂಕಷ್ಟಕ್ಕೆ ಸಿಲುಕಲಿದೆ ಬಿಜೆಪಿ: ಸಿದ್ದರಾಮಯ್ಯ ಭವಿಷ್ಯವಾಣಿ

ಉಪಚುನಾವಣೆಯಲ್ಲಿ ಬಿಜೆಪಿಯವರು 8 ಸ್ಥಾನಗಳನ್ನ ಕೂಡ ಗೆಲ್ಲೋಲ್ಲ. ಉಪಚುನಾವಣೆ ನಂತರ ಬಿಜೆಪಿಗೆ ಸಂಕಷ್ಟ ಇದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಭವಿಷ್ಯ ನುಡಿದಿದ್ದಾರೆ. ಜತೆಗೆ ಅನರ್ಹ ಶಾಸಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Vijaya Karnataka Web 16 Nov 2019, 11:21 am
ಮೈಸೂರು: ಬಿಜೆಪಿಯವರು ಡಿಸೆಂಬರ್ 5ರಂದು ನಡೆಯಲಿರುವ ವಿಧಾನಸಭೆ ಉಪಚುನಾವಣೆಯಲ್ಲಿ 8 ಸ್ಥಾನಗಳನ್ನು ಕೂಡ ಗೆಲ್ಲುವುದಿಲ್ಲ. ಉಪಚುನಾವಣೆ ನಂತರ ಬಿಜೆಪಿಗೆ ಸಂಕಷ್ಟ ಇದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಭವಿಷ್ಯ ಹೇಳಿದ್ದಾರೆ.
Vijaya Karnataka Web siddaramaih
ಸಿದ್ದರಾಮಯ್ಯ


ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯವರು ಉಪಚುನಾವಣೆಯಲ್ಲಿ ಅಕ್ರಮ ಮಾಡಲು ಸಜ್ಜಾಗಿದ್ದಾರೆ. ಮೈಸೂರಿನಲ್ಲಿ ಯೋಗೇಶ್ವರ್ ಪೋಟೋ ಇರೋ ಸೀರೆಗಳು ಸಿಕ್ಕಿವೆ. ಇದೆಲ್ಲ ಚುನಾವಣಾ ಅಕ್ರಮವನ್ನ ಎತ್ತಿ ತೋರಿಸುತ್ತಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಬಯಲಾಗ್ತಿದೆ ‘ಆಪರೇಷನ್ ಕಮಲದ’ ಸೀಕ್ರೆಟ್ ! ಮೆಗಾ ಸ್ಕೆಚ್‌ನ ಅಸಲಿ ಕಹಾನಿ ಬಿಚ್ಚಿಟ್ಟ ರಮೇಶ್

ಅಪರೇಷನ್ ಕಮಲ ರಹಸ್ಯ ಕುರಿತು:
ಕೋರ್ಟ್ ತೀರ್ಪು ಬಂದ ನಂತರ ಒಬ್ಬೊಬ್ಬರೇ ಸತ್ಯ ಬಾಯಿ ಬಿಡುತ್ತಿದ್ದಾರೆ. ಜನರಿಗೆ ಅದು ಈಗ ಅರ್ಥವಾಗುತ್ತಿದೆ. ಅವರು ಏನೇ ಕಥೆ ಹೇಳಿರೂ ಅನರ್ಹತೆ ಪಟ್ಟಿಯಲ್ಲೆ ಜನರ ಮುಂದೆ ಹೋಗಬೇಕು. ಎಂದಿಗೂ ಅವರಿಗೆ ಅಂಟಿರುವ ಅನರ್ಹರ ಪಟ್ಟ ಹೋಗಿಲ್ಲ. ರಮೇಶ್ ಜಾರಕಿಹೋಳಿಯಂತವರ ಮಾತುಗಳಿಗೆ ಕಿಮ್ಮತ್ತಿಲ್ಲ‌. ಅನರ್ಹರಾಗಿರುವ ಕಾರಣ ಏನೇನೋ ಮಾತನಾಡುತ್ತಿದ್ದಾರೆ.

ಹಳ್ಳಿ ಹಕ್ಕಿ ‘ಆಪರೇಷನ್’ ಹೇಗಾಯ್ತು ? ರಹಸ್ಯ ಬಿಚ್ಚಿಟ್ಟ ಎಚ್. ವಿಶ್ವನಾಥ್

ಸಿಎಂ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು.
ಅನರ್ಹರೆಲ್ಲ ತ್ಯಾಗಿಗಳಲ್ಲ, ಇವರೆಲ್ಲ ಸ್ವಾರ್ಥಿಗಳು. ಇವರೇನು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದಾರಾ. ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಈ ಮೂಲಕ ಅನರ್ಹರನ್ನು ಸಚಿವರಾಗಿ ಮಾಡುವ ಕುರಿತ ಸಿಎಂ ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದರು.

ಇದು ಚುನಾವಣೆ ನೀತಿ ಸಂಹಿತೆ ವ್ಯಾಪ್ತಿಗೆ ಬರುವುದಿಲ್ಲವಾ? ಬಿಜೆಪಿಗೆ ಯಾವುದೇ ನೀತಿ ಸಂಹಿತೆ ಅಡ್ಡಿ ಇರುವುದಿಲ್ಲವಾ.? ಬಿಜೆಪಿ ಇಂತಹ ಮಾತು ಅಕ್ರಮಗಳಿಂದ ಚುನಾವಣೆ ಎದುರಿಸಲು ಸಜ್ಜಾಗಿದೆ ಎಂದು ಸಿದ್ದರಾಮಯ್ಯ ಕಿಡಿ ಕಾರಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ