ಆ್ಯಪ್ನಗರ

ಬೋರ್‌ವೆಲ್‌ ಕೊರೆಯಲು ಹೈಕೋರ್ಟ್‌ ನಿಶಾನೆ

ದೇವರಾಜು ಅರಸು ಹಿಂದುಗಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ ಗಂಗಾಕಲ್ಯಾಣ ಯೋಜನೆಯಡಿ ರಾಜ್ಯಾದ್ಯಂತ ಸುಮಾರು ಆರು ಸಾವಿರ ಬೋರ್‌ವೆಲ್‌

Vijaya Karnataka 24 Apr 2019, 5:00 am
ಬೆಂಗಳೂರು: ದೇವರಾಜು ಅರಸು ಹಿಂದುಗಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ ಗಂಗಾಕಲ್ಯಾಣ ಯೋಜನೆಯಡಿ ರಾಜ್ಯಾದ್ಯಂತ ಸುಮಾರು ಆರು ಸಾವಿರ ಬೋರ್‌ವೆಲ್‌ ಕೊರೆಯಿಸುವ ಟೆಂಡರ್‌ ಅಂತಿಮಗೊಳಿಸಲು ಇದ್ದ ಅಡ್ಡಿ ನಿವಾರಣೆಯಾಗಿದೆ.
Vijaya Karnataka Web boarwel


ಶಿಢ್ಲಘಟ್ಟದ ಶ್ರೀಲಕ್ಷ್ಮೇ ವೆಂಕಟೇಶ್ವರ ಬೋರ್‌ವೆಲ್ಸ್‌ ಸಲ್ಲಿಸಿದ್ದ ಮೇಲ್ಮನವಿಯನ್ನು ಹಂಗಾಮಿ ಸಿಜೆ ಎಲ್‌. ನಾರಾಯಣಸ್ವಾಮಿ ಮತ್ತು ನ್ಯಾ.ಪಿ.ಎಸ್‌. ದಿನೇಶ್‌ ಕುಮಾರ್‌ ಅವರಿದ್ದ ವಿಭಾಗೀಯ ಪೀಠ ಮಂಗಳವಾರ ವಜಾಗೊಳಿಸಿತ್ತು.

ಟೆಂಡರ್‌ ನಿಯಮಗಳನ್ನು ಪ್ರಶ್ನಿಸಿ ಅರ್ಜಿದಾರರು ಸಲ್ಲಿಸಿದ್ದ ಅರ್ಜಿಯನ್ನು ಏಕಸದಸ್ಯಪೀಠ 2019ರ ಫೆ.22ರಂದು ವಜಾಗೊಳಿಸಿತ್ತು.ಅದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ಕುರಿತು ಸರಕಾರ ಹಾಗೂ ಅರ್ಜಿದಾರರ ವಾದ ಆಲಿಸಿದ ಬಳಿಕ ಈ ತೀರ್ಪು ನೀಡಿದೆ.

''ಇದು ನೀತಿ ನಿರ್ಧಾರದ ವಿಷಯ,ಇದರಲ್ಲಿ ಸರಕಾರವೇ ಸೂಕ್ತ ತೀರ್ಮಾನ ಕೈಗೊಳ್ಳಲಿದೆ. ಅದರಲ್ಲಿ ನ್ಯಾಯಾಲಯ ಹಸ್ತಕ್ಷೇಪ ಮಾಡುವುದಿಲ್ಲ, ಏಕಸದಸ್ಯಪೀಠದ ಆದೇಶ ಸರಿ ಇದೆ ''ಎಂದು ವಜಾಗೊಳಿಸಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ