ಆ್ಯಪ್ನಗರ

ಬಿಎಸ್‌ವೈ ಸಂಪುಟದಲ್ಲಿ 28 ಸಚಿವರು, ಯಾರ ಬಳಿಯಿದೆ ಯಾವ ಖಾತೆ ? ಪೂರ್ಣ ವಿವರ ಇಲ್ಲಿದೆ

ಬಿ.ಎಸ್‌ ಯಡಿಯೂರಪ್ಪ ಸಂಪುಟಕ್ಕೆ ನೂತನವಾಗಿ ಸೇರ್ಪಡೆಗೊಂಡ 10 ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ಆರ್‌. ಅಶೋಕ್ ಸೇರಿದಂತೆ ಕೆಲವು ಸಚಿವರ ಹೆಚ್ಚುವರಿ ಖಾತೆಗಳನ್ನು ವಾಪಸ್‌ ಪಡೆದುಕೊಳ್ಳಲಾಗಿದ್ದು ಅವುಗಳನ್ನು ನೂತನ ಸಚಿವರಿಗೆ ನೀಡಲಾಗಿದೆ.

Vijaya Karnataka Web 10 Feb 2020, 5:23 pm
ಬೆಂಗಳೂರು: ಬಿ.ಎಸ್‌ ಯಡಿಯೂರಪ್ಪ ಸಂಪುಟ 34 ಸಚಿವ ಸ್ಥಾನಗಳ ಪೈಕಿ ನೂತನ 10 ಸಚಿವರ ಸೇರ್ಪಡೆಯೊಂದಿಗೆ ಸದ್ಯ 28 ಸಚಿವರ ಬಲವನ್ನು ಹೊಂದಿದೆ. ಸೋಮವಾರ ನೂತನ ಸಚಿವರಿಗೆ ಬಿಎಸ್‌ವೈ ಖಾತೆ ಹಂಚಿಕೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸಚಿವರಲ್ಲಿದ್ದ ಹೆಚ್ಚುವರಿ ಖಾತೆಗಳನ್ನು ನೂತನ ಸಚಿವರಿಗೆ ನೀಡಲಾಗಿದೆ.
Vijaya Karnataka Web bs yeddyurappa cabinet new ministers portfolio details
ಬಿಎಸ್‌ವೈ ಸಂಪುಟದಲ್ಲಿ 28 ಸಚಿವರು, ಯಾರ ಬಳಿಯಿದೆ ಯಾವ ಖಾತೆ ? ಪೂರ್ಣ ವಿವರ ಇಲ್ಲಿದೆ


ಡಿಸಿಎಂ ಲಕ್ಷ್ಮಣ ಸವದಿಯಲ್ಲಿದ್ದ ಹೆಚ್ಚುವರಿ ಖಾತೆಯನ್ನು ಬಸವರಾಜ್‌ ಬೊಮ್ಮಾಯಿವಯರಿಗೆ ನೀಡಲಾಗಿದೆ. ಸಚಿವ ಕೆ.ಎಸ್‌ ಈಶ್ವರಪ್ಪ ಅವರ ಬಳಿ ಇದ್ದ ಹೆಚ್ಚುವರಿ ಖಾತೆಯಾದ ಕ್ರೀಡೆ ಹಾಗೂ ಯುವಜನ ಸೇವೆಯನ್ನು ವಾಪಸ್‌ ಪಡೆದುಕೊಂಡು ಸಚಿವ ಸಿಟಿ ರವಿಯವರಿಗೆ ನೀಡಲಾಗಿದೆ. ಶಶಿಕಲಾ ಜೊಲ್ಲೆಯವರಲ್ಲಿದ್ದ ಹೆಚ್ಚುವರಿ ಖಾತೆ ಆಹಾರ, ನಾಗರಿಕ ಪೂರೈಕೆ ಹಾಗೂ ಗ್ರಾಹಕ ಸೇವೆಯನ್ನು ವಾಪಸ್‌ ಪಡೆದುಕೊಳ್ಳಲಾಗಿದೆ.

ವಸತಿ ಸಚಿವ ವಿ. ಸೋಮಣ್ಣ ಅವರ ಬಳಿಯಿದ್ದ ಹೆಚ್ಚುವರಿ ಖಾತೆ ತೋಟಗಾರಿಕೆ ಹಾಗೂ ರೇಶ್ಮೆಯನ್ನು ಹೆಚ್ಚುವರಿ ಖಾತೆಯಾಗಿ ಸಚಿವ ನಾರಾಯಣ ಗೌಡ ಅವರಿಗೆ ನೀಡಲಾಗಿದೆ. ನೂತನ ಶಾಸಕರ ಪೈಕಿ ನಾರಾಯಣ ಗೌಡ ಹೊರತಾಗಿ ಉಳಿದ ಯಾರಿಗೂ ಹೆಚ್ಚುವರಿ ಖಾತೆಯನ್ನು ನೀಡಲಾಗಿಲ್ಲ. ಬೆಂಗಳೂರು ನಗರಾಭಿವೃದ್ದಿ, ಇಂಧನದಂತಹ ಪ್ರಮುಖ ಖಾತೆಗಳನ್ನು ಸಿಎಂ ಬಿ.ಎಸ್‌ ಯಡಿಯೂರಪ್ಪ ತಮ್ಮ ಬಳಿ ಇಟ್ಟುಕೊಂಡಿದ್ದಾರೆ.

'ಡಾಕ್ಟರ್‌' ಸುಧಾಕರ್‌ಗೆ ವೈದ್ಯಕೀಯ ಶಿಕ್ಷಣ, SSLC ಓದಿದ ಹೆಬ್ಬಾರ್‌ಗೆ ಕಾರ್ಮಿಕ ಖಾತೆ; ಉಳಿದವರ ವಿವರ ಹೀಗಿದೆ

ಡಾ. ಸಿಎಸ್‌ ಅಶ್ವಥನಾರಾಯಣ - ಉನ್ನತ ಶಿಕ್ಷಣ, ಐಟಿ ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ

ಹೆಚ್ಚುವರಿ ಖಾತೆ -ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ

ಲಕ್ಷ್ಮಣ ಸವದಿ - ಸಾರಿಗೆ

ಗೋವಿಂದ್ ಕಾರಜೋಳ - ಲೋಕೋಪಯೋಗಿ

ಹೆಚ್ಚುವರಿ ಖಾತೆ - ಸಮಾಜ ಕಲ್ಯಾಣ

ಬಸವರಾಜು ಬೊಮ್ಮಾಯಿ
- ಗೃಹ

ಹೆಚ್ಚುವರಿ - ಕೃಷಿ

11 ಚುನಾವಣೆ ಗೆದ್ದ ನಾಯಕ ಖರ್ಗೆ, ಬಿಜೆಪಿಯಲ್ಲಿ ಯಾರಾದರೂ ಗೆದ್ದಿದ್ದರೆ ಹೇಳಿ: ಕಟೀಲ್‌ಗೆ ಮುನಿಯಪ್ಪ ತಿರುಗೇಟು

ಕೆ.ಎಸ್‌ ಈಶ್ವರಪ್ಪ - ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್

ಆರ್‌. ಅಶೋಕ್ - ಕಂದಾಯ

ಜಗದೀಶ್ ಶೆಟ್ಟರ್ - ಕೈಗಾರಿಕೆ

ಹೆಚ್ಚುವರಿ ಖಾತೆ - ಸಾರ್ವಜನಿಕ ಉದ್ದಿಮೆ

ಎಸ್‌. ಸುರೇಶ್ ಕುಮಾರ್ - ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ

ಬಿ. ಶ್ರೀರಾಮುಲು- ಆರೋಗ್ಯ ಮತ್ತು ಕುಟುಂಬ ಕಲ್ಯಾಣ

ಹೆಚ್ಚುವರಿ ಖಾತೆ- ಹಿಂದುವಳಿದ ವರ್ಗಗಳ ಕಲ್ಯಾಣ

ಸಿ.ಟಿ ರವಿ - ಪ್ರವಾಸೋದ್ಯಮ

ಹೆಚ್ಚುವರಿ ಖಾತೆ- ಸಕ್ಕರೆ, ಕನ್ನಡ ಮತ್ತು ಸಂಸ್ಕೃತಿ , ಕ್ರೀಡೆ ಹಾಗೂ ಯುವಜನ ಸೇವೆ

ವಿ. ಸೋಮಣ್ಣ
- ವಸತಿ

ಜೆ. ಸಿ ಮಾಧುಸ್ವಾಮಿ
- ಕಾನೂನು ಹಾಗೂ ಸಂಸದೀಯ ವ್ಯವಹಾರ

ಹೆಚ್ಚುವರಿ: ಸಣ್ಣ ನೀರಾವರಿ

ಸಿ.ಸಿ ಪಾಟೀಲ - ಗಣಿ, ಪರಿಸರ ಮತ್ತು ಜೀವಿಶಾಸ್ತ್ರ

ಎಚ್‌. ನಾಗೇಶ್
- ಅಬಕಾರಿ

ಶಶಿಕಲಾ ಜೊಲ್ಲೆ
- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ

ಪ್ರಭು ಚೌವ್ಹಾಣ್ - ಪಶುಸಂಗೋಪನೆ

ಹೆಚ್ಚುವರಿ ಖಾತೆ - ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್

ರಮೇಶ್ ಜಾರಕಿಹೊಳಿ - ಜಲಸಂಪನ್ಮೂಲ

ಮೋದಿ 1000 ವೋಲ್ಟ್‌ನ ಹ್ಯಾಲೋಜಿನ್‌ ಲೈಟ್‌ ಇದ್ದ ಹಾಗೆ: ನಳಿನ್‌ ಕುಮಾರ್‌ ಕಟೀಲ್‌

ಬಿ.ಸಿ ಪಾಟೀಲ್‌ - ಅರಣ್ಯ

ಶ್ರೀಮಂತ ಪಾಟೀಲ್‌ -ಜವಳಿ

ನಾರಾಯಣ ಗೌಡ - ಪೌರಾಡಳಿತ

ಹೆಚ್ಚುವರಿ ಖಾತೆ: ತೋಟಗಾರಿಕೆ ಹಾಗೂ ರೇಶ್ಮೆ

ಎಸ್‌.ಟಿ ಸೋಮಶೇಖರ್ - ಸಹಕಾರ

ಆನಂದ್‌ ಸಿಂಗ್ -ಆಹಾರ ಮತ್ತು ನಾಗರಿಕ ಪೂರೈಕೆ

ಗೋಪಾಲಯ್ಯ - ಸಣ್ಣ ಕೈಗಾರಿಕೆ

ಶಿವರಾಂ ಹೆಬ್ಬಾರ್‌
- ಕಾರ್ಮಿಕ

ಕೆ. ಸುಧಾಕರ್ - ವೈದ್ಯಕೀಯ ಶಿಕ್ಷಣ

ಬೈರತಿ ಬಸವರಾಜ್ - ನಗರಾಭಿವೃದ್ದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ