ಆ್ಯಪ್ನಗರ

ಕುರ್ಚಿ ಉಳಿಸಿಕೊಳ್ಳಲು ಬಿಎಸ್‌ವೈ ದೆಹಲಿಗೆ ಹೋಗಿದ್ದಾರೆ: ದೇವೇಗೌಡ ಆಕ್ರೋಶ

ಬೆಂಗಳೂರಿನಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ಸರಕಾರ ಉಳಿಸಿಕೊಳ್ಳಲು ಏನು ಬೇಕಾದರೂ ಮಾಡಲು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸಿದ್ಧವಾಗಿದ್ದಾರೆ ಎಂದು ಹರಿಹಾಯ್ದರು.

Vijaya Karnataka Web 22 Sep 2019, 4:48 pm
ಬೆಂಗಳೂರು: ಕುರ್ಚಿ ಉಳಿಸಿಕೊಳ್ಳಲು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ದೆಹಲಿಗೆ ಹೋಗಿದ್ದಾರೆ. ಅವರಿಗೆ ರಾಜ್ಯದ ಜನರ ಸಂಕಷ್ಟ ಬೇಕಾಗಿಲ್ಲ ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದರು.
Vijaya Karnataka Web HD deve-gowda


ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸರಕಾರ ಉಳಿಸಿಕೊಳ್ಳಲು ಏನು ಬೇಕಾದರೂ ಮಾಡಲು ಯಡಿಯೂರಪ್ಪ ಸಿದ್ಧವಾಗಿದ್ದಾರೆ ಎಂದು ಹರಿಹಾಯ್ದರು.

“ರಾಜ್ಯದಲ್ಲಿ ‌ಪ್ರವಾಹ ಪರಿಸ್ಥಿತಿ ಯಿಂದ ಜನ ತತ್ತರಿಸಿದ್ದಾರೆ. ಯಡಿಯೂರಪ್ಪ ದೆಹಲಿಗೆ ಹೋಗಿರುವುದು ಪ್ರವಾಹ ಪರಿಹಾರ ಕೇಳುವುದಕ್ಕಲ್ಲ. ಬದಲಾಗಿ ಅನರ್ಹ ಶಾಸಕರ‌ ಪರ ವಕಾಲತ್ತು‌ ವಹಿಸಿ ಸರಕಾರ ಉಳಿಸಿಕೊಳ್ಳುವ ಕಸರತ್ತು ‌ಮಾಡಲು ಹೋಗಿದ್ದಾರೆ,” ಎಂಬುದಾಗಿ ಅವರು ಕಿಡಿಕಾರಿದರು.

‘ಶಾರನ್ನು ಭೇಟಿಯಾಗಿದ್ದು ನೆರೆಪರಿಹಾರಕ್ಕಲ್ಲ, ಅನರ್ಹರ ಬಚಾವ್‌ಗಾಗಿ’: ಬಿಎಸ್‌ವೈಗೆ ಎಚ್ಡಿಕೆ ಚಾಟಿ

ಇನ್ನು ಇಂದು ಬೆಳಗ್ಗೆಯಷ್ಟೇ ಟ್ಟೀಟ್‌ ಮಾಡಿದ್ದ ಅವರ ಪುತ್ರ, ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, “ಆಪರೇಷನ್ ಕಮಲದ ಸಂತ್ರಸ್ತರ ರಕ್ಷಣೆಗಾಗಿ ದೆಹಲಿಗೆ ಹೋಗಿರುವ ಮುಖ್ಯಮಂತ್ರಿ ಯಡಿಯೂರಪ್ಪನವರು ನೆರೆ ಸಂತ್ರಸ್ತರ ಪರಿಹಾರ ಧನ ಸಹಾಯ ಕೋರಲು ದೆಹಲಿಗೆ ತರಳಿದ್ದೇನೆ ಎಂದಿರುವುದು ಒಂದು 'ರಾಜಕೀಯ ನಾಟಕ',” ಎಂದು ಜರೆದಿದ್ದರು.

ಅಮಿತ್ ಶಾರ ಪ್ರಭಾವ ಬಳಸಿ ಪ್ರಜಾಪ್ರಭುತ್ವ ವಿರೋಧಿ ಆಪರೇಷನ್ ಕಮಲದ ಸಂತ್ರಸ್ತ ಅನರ್ಹರನ್ನು ಬಚಾವ್ ಮಾಡಿಸಲಷ್ಟೇ ಬಿಎಸ್‌ವೈ ದೆಹಲಿಗೆ ಹೋಗಿದ್ದಾರೆ ಎಂಬುದಾಗಿ ಅವರು ಮುಖ್ಯಮಂತ್ರಿಯನ್ನು ದೂರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ