ಆ್ಯಪ್ನಗರ

ನಾಲ್ಕು ಬಾರಿ ಸಿಎಂ ಆದರೂ ಅಧಿಕಾರಾವಧಿ ಪೂರ್ಣಗೊಳಿಸದ ಯಡಿಯೂರಪ್ಪ

ಯಡಿಯೂರಪ್ಪ ಅವರು ಈ ಹಿಂದೆ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದು ನವೆಂಬರ್ 12ರಂದು. ಜೆಡಿಎಸ್‌ ಜತೆಗಿನ ಮೈತ್ರಿ ಕಡಿತಗೊಂಡಿದ್ದರಿಂದ ಕೇವಲ ಒಂದು ವಾರದಲ್ಲೇ ಅಂದರೆ ನವೆಂಬರ್‌ 19ರಂದು ರಾಜೀನಾಮೆ ಸಲ್ಲಿಸಿದರು.

Vijaya Karnataka Web 26 Jul 2021, 1:18 pm
ಬೆಂಗಳೂರು: ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ಬಿಎಸ್‌ ಯಡಿಯೂರಪ್ಪ ಯುಗಾಂತ್ಯವಾಗಿದೆ.
Vijaya Karnataka Web ಯಡಿಯೂರಪ್ಪ
ಯಡಿಯೂರಪ್ಪ


ಬಿಜೆಪಿ ಸರಕಾರದ ಎರಡನೇ ವರ್ಷದ ಸಾಧನಾ ಸಮಾವೇಶದ ವೇದಿಕೆಯಲ್ಲಿ ಭಾಷಣ ಮಾಡಿದ ಯಡಿಯೂರಪ್ಪ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡುವ ಮೂಲಕ ಪದತ್ಯಾಗ ಮಾಡಿದರು.

ಬಿಎಸ್‌ ಯಡಿಯೂರಪ್ಪ ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದಾರೆ ಆದರೆ ಒಮ್ಮೆಯೂ ಅವರು ಪೂರ್ಣ ಅವಧಿಯನ್ನು ಪೂರೈಸಿಲ್ಲ.

ಯಡಿಯೂರಪ್ಪ ಅವರು ಈ ಹಿಂದೆ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದು ನವೆಂಬರ್ 12ರಂದು. ಜೆಡಿಎಸ್‌ ಜತೆಗಿನ ಮೈತ್ರಿ ಕಡಿತಗೊಂಡಿದ್ದರಿಂದ ಕೇವಲ ಒಂದು ವಾರದಲ್ಲೇ ಅಂದರೆ ನವೆಂಬರ್‌ 19ರಂದು ರಾಜೀನಾಮೆ ಸಲ್ಲಿಸಿದರು.

ನಂತರ ಎರಡನೇ ಬಾರಿಗೆ 2008ರ ಮೇ 30 ರಂದು ರಾಜ್ಯ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಬಿಎಸ್‌ವೈ ಅವರು 31 ಜುಲೈ 2012ರಂದು ರಾಜೀನಾಮೆ ಸಲ್ಲಸಿದರು.

2 ತಿಂಗಳ ಹಿಂದೆಯೇ ರಾಜೀನಾಮೆಗೆ ನಿರ್ಧರಿಸಿದ್ದೆ, ಇದು ಸ್ವಯಂಪ್ರೇರಿತ ನಿರ್ಧಾರ: ಕೇಂದ್ರದಿಂದ ಒತ್ತಡ ಇರಲಿಲ್ಲ ಎಂದ ಬಿಎಸ್‌ವೈ

ಯಡಿಯೂರಪ್ಪ ತಮ್ಮ ರಾಜಕೀಯ ಜೀವನದಲ್ಲಿ ಮೂರನೇ ಬಾರಿಗೆ ಅಧಿಕಾರ ವಹಿಸಿದ್ದರು 2018ರ ಮೇ 17ರಂದು. ಆದರೆ ವಿಶ್ವಾಸಮತ ಯಾಚನೆ ಮುನ್ನವೇ ಮೇ 19ರಂದು ರಾಜೀನಾಮೆ ನೀಡಿದರು.

ಆ ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್‌-ಜೆಡಿಎಸ್‌ ದೋಸ್ತಿ ಸರಕಾರ 17 ಶಾಸಕರ ರಾಜೀನಾಮೆಯೊಂದಿಗೆ ಪತನಗೊಂಡಿತು. ಆ ನಂತರ ಬಿಎಸ್‌ವೈ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು.

ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ರಾಜೀನಾಮೆ ಪತ್ರ ಸಲ್ಲಿಸಿದ ಬಿಎಸ್‌ ಯಡಿಯೂರಪ್ಪ

2019ರ ಜುಲೈ 26ರಂದು ಮುಖ್ಯಮಂತ್ರಿ ಸ್ಥಾನ ಅಲಂಕರಿಸಿ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದರು.

BS Yediyurappa Resigns: ರಾಜೀನಾಮೆ ಘೋಷಣೆ ಮಾಡಿದ ಯಡಿಯೂರಪ್ಪ

ಬಿಜೆಪಿಯಲ್ಲಿರುವ 75 ರ್ಷದ ಹಿರಿಯರಿಗೆ ಉನ್ನತ ಹುದ್ದೆ ಇಲ್ಲ ಎಂಬ ನಿಯಮವನ್ನು ಗಾಳಿಗೆ ತೂರಿದ ಬಿಜೆಪಿ ಹೈಕಮಾಂಡ್‌ ಯಡಿಯೂರಪ್ಪ ಅವರಿಗೆ ಕರ್ನಾಟಕ ಸಿಎಂ ಕುರ್ಚಿ ನೀಡಿತ್ತು. ಎರಡು ವರ್ಷಗಳ ನಂತರ ಈಗ ಯಡಿಯೂರಪ್ಪ ತಾವು ಅಧಿಕಾರ ಸ್ವೀಕರಿಸಿದ ದಿನದಂದೇ ಪದತ್ಯಾಗ ಮಾಡಿದ್ದಾರೆ.

ರಾಜೀನಾಮೆಗೂ ಮುನ್ನ ಮಾತಿನುದ್ದಕ್ಕೂ ಭಾವುಕರಾಗುತ್ತಲೇ ವಿದಾಯ ಭಾಷಣ

ಒಟ್ಟಾರೆಯಾಗಿ ನಾಲ್ಕು ಬಾರಿ ಸಿಎಂ ಕುರ್ಚಿಯಲ್ಲಿ ಕುಳಿತಿರುವ ಯಡಿಯೂರಪ್ಪ ಅಧಿಕಾರ ಅವಧಿ ಪೂರ್ಣಗೊಳಿಸುವ ಮುನ್ನವೇ ಪದತ್ಯಾಗ ಮಾಡಿದ್ದಾರೆ.

ರಾಜ್ಯ ರಾಜಕೀಯ ಕ್ಷೇತ್ರದಲ್ಲಿ 'ರಾಜಾಹುಲಿ'ಯಂತೆ ಆರ್ಭಟಿಸುತ್ತಿದ್ದ ಬಿಎಸ್‌ ಯಡಿಯೂರಪ್ಪ ಅವರ ಯುಗ ಈಗ ಅಂತ್ಯಗೊಂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ