ಆ್ಯಪ್ನಗರ

ಬಿಎಸ್‌ವೈ ಸಂಪುಟ: ಮೂಲ ಬಿಜೆಪಿ ಕೋಟಾಕ್ಕೆ ಧಕ್ಕೆ ತಂದಿದ್ದೇ ಸಿಪಿ ಯೋಗೀಶ್ವರ್‌!

ಪರಾಜಿತ ಸಿಪಿ ಯೋಗೀಶ್ವರ್‌ ಸಂಭಾವ್ಯ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದರಿಂದ 10+3 ಸೂತ್ರವು 10+0ಗೆ ಸೀಮಿತವಾಗುವ ಮೂಲಕ ಮೂಲ ಬಿಜೆಪಿಗರಿಗೆ ಯಾರಿಗೂ ಇಲ್ಲ ಎಂಬಂತ ಸ್ಥಿತಿ ನಿರ್ಮಾಣವಾಗಿದೆ. ಇನ್ನಾರು ತಿಂಗಳು ಸಂಪುಟ ವಿಸ್ತರಣೆಯ ರಸರತ್ತು ನಡೆಯುವುದೂ ಇಲ್ಲ ಎನ್ನಲಾಗಿದೆ,

Vijaya Karnataka Web 6 Feb 2020, 7:15 am
ಬೆಂಗಳೂರು: ಆಪರೇಷನ್‌ ಕಮಲಕ್ಕೆ ತೆರೆಮರೆಯಲ್ಲಿ ಪ್ರಯತ್ನ ನಡೆಸಿದ್ದ ಮಾಜಿ ಸಚಿವ ಸಿ.ಪಿ.ಯೋಗೀಶ್ವರ ಸಂಭಾವ್ಯ ಸಚಿವರ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದರಿಂದ ಸೃಷ್ಟಿಯಾದ ಭಿನ್ನಮತದಿಂದಾಗಿ ಈಗ ಮೂಲ ಬಿಜೆಪಿ ಶಾಸಕರ ಮಂತ್ರಿಗಿರಿ ಕನಸು ಭಗ್ನಗೊಂಡಿದೆ.
Vijaya Karnataka Web CP yogeshwar


ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳ ಬೇಕೆಂದು ವರಿಷ್ಠರು ಸೂಚನೆ ನೀಡಿದ ಎರಡು ದಿನದ ಬಳಿಕ ಯೋಗೀಶ್ವರ್‌ ಹೆಸರು ಪಟ್ಟಿಯಲ್ಲಿರುವುದು ಬಹಿರಂಗಗೊಂಡಿತು. ಸೋತವರಿಗೆ ಸಚಿವ ಸ್ಥಾನವಿಲ್ಲ ಎಂಬ ಕಾರಣದಿಂದ ಮಂತ್ರಿ ಸ್ಥಾನ ತಪ್ಪಿಸಿಕೊಂಡ ವಿಶ್ವನಾಥ್‌, ಎಂ.ಟಿ.ಬಿ. ನಾಗರಾಜ್‌, ಚುನಾವಣೆಗೆ ಸ್ಪರ್ಧೆ ಮಾಡದ ಆರ್‌.ಶಂಕರ್‌ ಈ ಬೆಳವಣಿಗೆಯಿಂದ ಸಿಟ್ಟಾದರು.

ಸೋತವರಿಗೆ ಸಚಿವ ಸ್ಥಾನ ಬೇಡ ಎಂಬ ಮಾನದಂಡವನ್ನು ಮುಂದಿಟ್ಟುಕೊಂಡು ಬಿಜೆಪಿ ಶಾಸಕರೇ ಯೋಗೀಶ್ವರ್‌ಗೆ ವಿರೋಧ ವ್ಯಕ್ತಪಡಿಸಿದರು. ಈ ವಿಚಾರದಲ್ಲಿ ಮೂಲ ಬಿಜೆಪಿಯ ಧ್ವನಿಯೇ ಪ್ರಬಲವಾಗಿದ್ದರಿಂದ ಅಂತಿಮವಾಗಿ 'ಅರ್ಹ' 10 ಶಾಸಕರನ್ನು ಮಾತ್ರ ಸಂಪುಟಕ್ಕೆ ಸೇರಿಸಿಕೊಳ್ಳುವುದಕ್ಕೆ ಸಿಎಂ ನಿರ್ಧರಿಸಿದ್ದಾರೆ.

'ಸಂಪುಟ ವಿಸ್ತರಣೆಯೇ ಬಿಜೆಪಿಗೆ ದೊಡ್ಡ ಸವಾಲು, ರಾಜ್ಯದ ಅಭಿವೃದ್ಧಿ 4 ವರ್ಷ ಹಿಂದೆ ಹೋಗಿದೆ': ಎಚ್ಡಿಕೆ

ಈ ಬೆಳವಣಿಗೆಯಿಂದ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಮೂಲ ಬಿಜೆಪಿಯ ಉಮೇಶ್‌ ಕತ್ತಿ, ಅರವಿಂದ ಲಿಂಬಾವಳಿ, ಹಾಲಪ್ಪ ಆಚಾರ್‌, ಸುನೀಲ್‌ ಕುಮಾರ್‌ ಮೊದಲಾದವರು ನಿರಾಸೆಗೆ ಒಳಗಾಗಿದ್ದಾರೆ.

ಬಜೆಟ್‌ ಅಧಿವೇಶನದ ಬಳಿಕ ಉಳಿದವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಭರವಸೆಯನ್ನು ಸಿಎಂ ನೀಡಿದ್ದರೂ, ಇನ್ನು 6 ತಿಂಗಳು ಕಾಲ ಸಂಪುಟ ಸರ್ಕಸ್‌ ನಡೆಯುವುದಿಲ್ಲ ಎಂದು ಬಿಜೆಪಿ ಮೂಲಗಳಿಂದ ತಿಳಿದು ಬಂದಿದೆ.

ಎಲ್ಲರಿಗೂ ಬೇಡವಾದರು: ಯೋಗೀಶ್ವರ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಿ ಎಂಬುದು ವರಿಷ್ಠರ ಸೂಚನೆಯಾಗಿತ್ತು. ಹಳೆ ಮೈಸೂರು ಭಾಗದಲ್ಲಿ ಕುಮಾರಸ್ವಾಮಿ ಹಾಗೂ ಡಿಕೆಶಿಗೆ ಪರ್ಯಾಯ ನಾಯಕತ್ವ ರೂಪಿಸಲು ಹಿರಿಯರು ತೀರ್ಮಾನಿಸಿದ್ದರು. ಇದಕ್ಕೆ ಸಿಎಂ ಯಡಿಯೂರಪ್ಪ ಕೂಡಾ ಸಮ್ಮತಿ ಸೂಚಿಸಿದ್ದರು. ಆದರೆ ಈ ವಿಷಯ ಬಹಿರಂಗವಾಗುತ್ತಿದ್ದಂತೆ ವಿರೋಧ ವ್ಯಕ್ತವಾಯಿತು.

ಎಚ್‌ಡಿಕೆ ಸರಕಾರ ಉರುಳಿಸಲು ಪ್ರಮುಖ ಪಾತ್ರ ವಹಿಸಿದ್ದೇ ಯೋಗೀಶ್ವರ್‌ಗೆ ಮಂತ್ರಿಯಾಗಲು ಯೋಗ?

ಸಿಎಂ ಆಪ್ತ ಶಾಸಕರಿಂದಲೇ ಸೋತವರಿಗೆ ಸಚಿವ ಸ್ಥಾನ ಬೇಡ ಎಂಬ ಪ್ರತಿಧಿರೋಧ ಎದುರಾಯಿತು. ಆದರೆ ಯೋಗಿ ಪರ ಗೂಳಿಹಟ್ಟಿ ಶೇಖರ್‌, ಕುಮಠಳ್ಳಿ ಹೊರತುಪಡಿಸಿ ಇನ್ಯಾರೂ ನಿಲ್ಲಲಿಲ್ಲ. ತಮ್ಮನ್ನು ಬಿಜೆಪಿಗೆ ಕರೆತಂದು ಸಚಿವ ಸ್ಥಾನ ಕೊಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆಂಬ ಕಾರಣಕ್ಕೆ ಅರ್ಹ ಶಾಸಕರು ಯೋಗೀಶ್ವರ ಬೆಂಬಲಿಸಲಿಲ್ಲ. ಬದಲಾಗಿ ಸೋತವರಿಗೆ ಅಧಿಕಾರ ಬೇಡ ಎಂಬ ಮಾನದಂಡದ ಅನ್ವಯ ಸುಮ್ಮನಾದರು. ಇನ್ನೊಂದೆಡೆ ಮೂಲ ಬಿಜೆಪಿ ಶಾಸಕರು ಇದೇ ಕಾರಣ ನೀಡಿ ವಿರೋಧ ವ್ಯಕ್ತಧಿಪಡಿಸಿದರು. ಸರಕಾರ ರಚನೆಯಲ್ಲಿ ಯೋಗೀಧಿಶ್ವರ ಪಾತ್ರ ಪ್ರಮುಖವಾಗಿತ್ತು ಎಂಬ ರಿಯಾಯಿತಿ ಮೂಲ ಬಿಜೆಪಿ ಶಾಸಕರಿಂದಲೂ ಲಭ್ಯವಾಗಲಿಲ್ಲ. ಹೀಗಾಗಿ ಯೋಗಿ ಏಕಾಂಗಿ 'ಸೈನಿಕ'ನಾಗಬೇಕಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ