ಆ್ಯಪ್ನಗರ

ಕುಮಾರಸ್ವಾಮಿ ಕ್ಷಮೆಯಾಚನೆಗೆ ಬಿಎಸ್‌ವೈ ಆಗ್ರಹ

ಮದ್ದೂರಿನ ಜೆಡಿಎಸ್‌ ಕಾರ್ಯಕರ್ತ ಪ್ರಕಾಶ್‌ ಹತ್ಯೆ ಆರೋಪಿಗಳನ್ನು ಶೂಟೌಟ್‌ ಮಾಡಬೇಕೆಂದು ಮುಖ್ಯಮಂತ್ರಿ ಎಚ್‌ಡಿ...

Vijaya Karnataka 26 Dec 2018, 5:00 am
ಬೆಂಗಳೂರು: ಮದ್ದೂರಿನ ಜೆಡಿಎಸ್‌ ಕಾರ್ಯಕರ್ತ ಪ್ರಕಾಶ್‌ ಹತ್ಯೆ ಆರೋಪಿಗಳನ್ನು ಶೂಟೌಟ್‌ ಮಾಡಬೇಕೆಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೀಡಿದ್ದ ಹೇಳಿಕೆ ತೀವ್ರ ವಿವಾದದ ಸ್ವರೂಪ ಪಡೆದುಕೊಂಡಿರುವುದರ ನಡುವೆಯೇ ಈ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ ಸಿಎಂ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದೆ.
Vijaya Karnataka Web bsy


''ಮುಖ್ಯಮಂತ್ರಿ ಹೇಳಿಕೆ ರಾಜ್ಯದ ಜನತೆ ಮೇಲೆ ದುಷ್ಪರಿಣಾಮ ಬೀರುತ್ತದೆ, ಇದರಿಂದ ಪೊಲೀಸ್‌ ಅಧಿಕಾರಿಗಳಿಗೆ ಫ್ರೀಹ್ಯಾಂಡ್‌ ನೀಡಿದಂತಾಗುತ್ತದೆ. ಮುಖ್ಯಮಂತ್ರಿಯಾದವರು ಈ ರೀತಿ ಮಾತನಾಡುವುದು ತಪ್ಪು,'' ಎಂದು ಅಭಿಪ್ರಾಯಪಟ್ಟಿರುವ ಯಡಿಯೂರಪ್ಪ ಅವರು ''ಮುಖ್ಯಮಂತ್ರಿಯಾಗಿಯೇ ಆ ಮಾತು ಹೇಳಿದ್ದಾರೆ, ಮುಖ್ಯಮಂತ್ರಿಯಾಗಿರದಿದ್ದರೆ ಅದು ಬೇರೆ ಮಾತು, ಸಿಎಂ ಸ್ಥಾನದಲ್ಲಿ ಕುಳಿತು ಈ ರೀತಿ ಹೇಳಿಕೆ ಕೊಡುವುದು ಸರಿಯಲ್ಲ, ಇದು ಅರಾಜಕತೆಯನ್ನು ತೋರಿಸುತ್ತದೆ,'' ಎಂದು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ