ಆ್ಯಪ್ನಗರ

ಕಲ್ಲಿದ್ದಲು ಗಣಿಗಾರಿಕೆ ಅಕ್ರಮ : ಸಿಎಂ ವಿರುದ್ಧ ಬಿಎಸ್‌ವೈ ದಾಖಲೆ ಬಿಡುಗಡೆ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಕೆಪಿಸಿಎಲ್ ಕಲ್ಲಿದ್ದಲು ಗಣಿಗಾರಿಕೆಯಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿದ ದಾಖಲೆ ಬಿಡುಗಡೆ ಮಾಡಿದ್ದಾರೆ.

Vijaya Karnataka Web 21 Oct 2017, 2:25 pm
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಕೆಪಿಸಿಎಲ್ ಕಲ್ಲಿದ್ದಲು ಗಣಿಗಾರಿಕೆಯಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿದ ದಾಖಲೆ ಬಿಡುಗಡೆ ಮಾಡಿದ್ದಾರೆ.
Vijaya Karnataka Web bsy release documents against cm siddaramaiah on coal mining
ಕಲ್ಲಿದ್ದಲು ಗಣಿಗಾರಿಕೆ ಅಕ್ರಮ : ಸಿಎಂ ವಿರುದ್ಧ ಬಿಎಸ್‌ವೈ ದಾಖಲೆ ಬಿಡುಗಡೆ


ಕೇಂದ್ರ ಸರಕಾರ, ಸುಪ್ರಿಂಕೋರ್ಟ್, ಹೈಕೋರ್ಟ್ ಆದೇಶಗಳಿಗೆ ವಿರುದ್ದವಾಗಿ 418 ಕೋಟಿ ರೂ. ಅಕ್ರಮ ನಡೆದಿದೆ. ಕೆಪಿಸಿಎಲ್ ಅಧ್ಯಕ್ಷರಾಗಿ ಸಿಎಂ ಸಿದ್ದರಾಮಯ್ಯ ಇದರಲ್ಲಿ ನೇರ ಭಾಗಿಯಾಗಿದ್ದಾರೆ ಎಂದು ಬಿಎಸ್‌ವೈ ಆರೋಪಿಸಿದ್ದಾರೆ.

ಹನ್ನೊಂದು ಬಾರಿ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಅವರು ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಆದೇಶದ ವಿರುದ್ಧ ನಡೆದುಕೊಂಡು ಸುಮಾರು 418 ಕೋಟಿ ಹಗಲು ದರೋಡೆ ಮಾಡಿದ್ದಾರೆ ಎಂದು ಬಿಎಸ್‌ವೈ ಹೇಳಿದ್ದಾರೆ.

'ನನ್ನ ರಾಜಕೀಯ ಜೀವನದಲ್ಲಿ ಇಂತಹ ಹಗಲು ದರೋಡೆ ನಡೆದಿರುವುದು ನೋಡಿಲ್ಲ. ಕೆಪಿಸಿಎಲ್ ಮತ್ತು ಕೆಎಂಸಿಎಲ್ ನಡುವೆ ಒಪ್ಪಂದ ಹಲವು ಅನುಮಾನಗಳು ಬರುವಂತೆ ಮಾಡಿದೆ. ಇದೊಂದು ಸದುದ್ದೇಶದ ಒಪ್ಪಂದ ಆಗಿಲ್ಲ ಅನ್ನೋದು ಮೇಲ್ನೋಟಕ್ಕೆ ಕಾಣಿಸುತ್ತಿದೆ,' ಎಂದು ಹೇಳಿದ್ದಾರೆ.

ಕೆಪಿಸಿಎಲ್ ಸಹಭಾಗಿತ್ವದಲ್ಲಿ 2003ರ ಫೆಬ್ರವರಿಯಲ್ಲಿ ಜಂಟಿ ಕಂಪನಿ ಸ್ಥಾಪನೆಯಾಗಿದ್ದು, ಕೆಪಿಸಿಎಲ್ ಜವಾಬ್ದಾರಿ ಕೇವಲ 24% ಇತ್ತು. ಸುಪ್ರೀಂಕೋರ್ಟ್ ದಂಡ ಹಾಕಿತ್ತು.
ಮನೋಹರ್ ಲಾಲ್ ಶರ್ಮ ಕೇಸ್‌ನಲ್ಲಿ ಹಲವು ಕಲ್ಲಿದ್ದಲು ಹಂಚಿಕೆಯನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿತ್ತು. ಕೆಪಿಸಿಎಲ್ ಲೈಸೆನ್ಸ್ ಸಹ ರದ್ದಾಗಿತ್ತು ಎಂದರು.

ಡಿ.ಕೆ ಶಿವಕುಮಾರ್ ಡೈರೆಕ್ಟರ್ ಆಗಿ ಸಿಎಂ ಮತ್ತು ಅವರ ಮಧ್ಯೆ ಏನು ಒಳ ಒಪ್ಪಂದ ಆಗಿದೆ.ಎಂದು ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಹೇಳುತ್ತೀರಾ ಎಂದು ಪ್ರಶ್ನಿಸಿದ ಬಿಎಸ್‌ವೈ, ಅವರು ಛೀಮಾರಿ ಹಾಕಿದ್ರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೀರಾ ಎಂದು ಕೇಳಿದರು.

ಪ್ರಕರಣವನ್ನು ಸಿಬಿಐಗೆ ಕೊಡುವಂತೆ ಕೇಂದ್ರಕ್ಕೆ ಪತ್ರ ಬರೆಯುತ್ತೇವೆ. ಮಾಜಿ ಪ್ರಧಾನಿ ದೇವೇಗೌಡ, ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ್ ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ದಾಖಲೆ ಕಳುಹಿಸಿಕೊಡುತ್ತೇವೆ ಎಂದರು.

ಕೆಇಸಿಎಂಎಲ್‌ಗೆ ಕೆಪಿಸಿಎಲ್ ದಂಡದ ಮೊತ್ತ ಭರಿಸುವ ಅವಶ್ಯಕತೆ ಇಲ್ಲ. 24 ಗಂಟೆಯ ಒಳಗೆ ಶೇಕಡಾ 26 ರಷ್ಟು ಕೆಪಿಸಿಎಲ್ ಭರಿಸುತ್ತದೆ ಅಂತ ಹೇಳಿ ಪಾವತಿ ಮಾಡುತ್ತಾರೆ.24 ಗಂಟೆಯಲ್ಲಿ ನಡೆದ ಒಪ್ಪಂದ ಏನು, ನಿಮಗೆ ಕಟ್ಟುವಂತೆ ಹೇಳಿದ್ದು ಯಾರು ಎಂದು ಪ್ರಶ್ನಿಸಿದರು. ಕಂಪನಿ ಕಟ್ಟಬೇಕಾದ ಹಣವನ್ನು ಜನರ ಹಣದಿಂದ ಪಾವತಿಸಲಾಗಿದೆ ಎಂದು ದೂರಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ