ಆ್ಯಪ್ನಗರ

ಸಮಾಜ ಒಡೆದು ರಾಜಕೀಯ ಮಾಡಿದ್ದು ಸಿದ್ದರಾಮಯ್ಯ: ಸಿಟಿ ರವಿ

ಸಿದ್ದರಾಮಯ್ಯ ಅವರದ್ದು ತಾನು ಕಳ್ಳ. ಪರರ ನಂಬೋಲ್ಲ ಎನ್ನುವ ಮನಸ್ಥಿತಿ. ಸಮಾಜ ಒಡೆದು ರಾಜಕೀಯ ಮಾಡಿದ್ದು ಅವರು.

Vijaya Karnataka 29 Jun 2019, 8:56 am
ಮಡಿಕೇರಿ: ಸಿದ್ದರಾಮಯ್ಯ ಅವರದ್ದು ತಾನು ಕಳ್ಳ. ಪರರ ನಂಬೋಲ್ಲ ಎನ್ನುವ ಮನಸ್ಥಿತಿ. ಸಮಾಜ ಒಡೆದು ರಾಜಕೀಯ ಮಾಡಿದ್ದು ಅವರು. ಶಾದಿ ಭಾಗ್ಯ ಸೇರಿದಂತೆ ಅವರ ಅನೇಕ ಯೋಜನೆಗಳು ಜಾತಿ ಆಧಾರಿತವಾಗಿದೆ. ಆದರೆ ಬಿಜೆಪಿಯದ್ದು ಸಬ್‌ಕಾ ಸಾಥ್‌, ಸಬ್‌ಕಾ ವಿಕಾಸ್‌, ಸಬ್‌ಕಾ ವಿಶ್ವಾಸ್‌ ಕಾರ್ಯಸೂಚಿ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.
Vijaya Karnataka Web C T Ravi


ಈಸ್ಟ್‌ ಇಂಡಿಯಾ ಕಂಪನಿ ರೀತಿಯಲ್ಲಿ ಬಿಜೆಪಿ ಸಮಾಜವನ್ನು ಒಡೆದು ರಾಜಕೀಯ ಮಾಡುತ್ತಿದೆ ಎನ್ನುವ ಆರೋಪಕ್ಕೆ ಮಡಿಕೇರಿಯಲ್ಲಿ ಶುಕ್ರವಾರ ರವಿ ಪ್ರತಿಕ್ರಿಯೆ ನೀಡಿದರು.

''ನರೇಂದ್ರ ಮೋದಿ ಜಾರಿಗೆ ತಂದಿರುವ ಯಾವುದೇ ಯೋಜನೆಗಳು ಯಾರೊಬ್ಬರ ಪರವೂ ಇಲ್ಲ, ವಿರೋಧವೂ ಇಲ್ಲ. ಸಿದ್ದರಾಮಯ್ಯ ಅವರ ಶಾದಿಭಾಗ್ಯ ಎಲ್ಲಾ ಹೆಣ್ಣು ಮಕ್ಕಳಿಗೆ ಇರಲಿಲ್ಲ. ಮೈಸೂರು ಸಂಸ್ಥಾನವನ್ನು ಒಡೆದ ಟಿಪ್ಪು ಜಯಂತಿ ಆಚರಣೆ ಜಾರಿಗೆ ತರುವ ಮೂಲಕ ಸಮಾಜವನ್ನು ಒಡೆಯುವ ಕೆಲಸ ಮಾಡಿದರು,'' ಎಂದು ಟೀಕಿಸಿದರು.

ಏನೂ ಮಾಡದಿದ್ದರೂ ಮೋದಿಗೆ ವೋಟು ಹಾಕುತ್ತೀರಿ ಎನ್ನುವ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿ.ಟಿ.ರವಿ, ''ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಎನ್ನುವ ಗಾದೆಮಾತು ಸಿದ್ದರಾಮಯ್ಯ ಅವರಿಗೆ ಅನ್ವಯಿಸುತ್ತದೆ. ಅನ್ನಭಾಗ್ಯ ನಾನು ಕೊಟ್ಟಿದ್ದು ಎಂದು ಹೇಳುವ ಅವರು ಆ ಯೋಜನೆಗೆ ಶೇ.90ರಷ್ಟು ಹಣ ಬರುವುದು ಕೇಂದ್ರದಿಂದ ಎನ್ನುವುದನ್ನು ಹೇಳುವುದಿಲ್ಲ,'' ಎಂದರು.

ಮುಖ್ಯಮಂತ್ರಿ ಗ್ರಾಮ ವಾಸ್ತವ್ಯದ ಬಗ್ಗೆ ಮಾತನಾಡಿದ ರವಿ, ''ಕುಮಾರಸ್ವಾಮಿ ಕುಟುಂಬದಲ್ಲಿ ಇದು 2ನೇ ತಲೆಮಾರಿನ ಅಧಿಕಾರದ ರಾಜಕೀಯ. ಇನ್ನು ಕೂಡ ಅವರಿಗೆ ಗ್ರಾಮಗಳ ಸಮಸ್ಯೆ, ರೈತರ ಸಮಸ್ಯೆ ಅರ್ಥವೇ ಆಗಿಲ್ಲ ಎಂದಾದರೆ ಅದು ಕೇವಲ ಜೆಡಿಎಸ್‌ ದುರಾದೃಷ್ಟ ಮಾತ್ರವಲ್ಲ. ರಾಜ್ಯದ ದುರಾದೃಷ್ಟ. ಸಮಸ್ಯೆಯೇ ಅರ್ಥ ಆಗಿಲ್ಲ ಎಂದಾದರೇ ಪರಿಹಾರ ಕಲ್ಪಿಸುವುದಾದರೂ ಹೇಗೆ ? ಅವರಿಗೆ ಈ ಅಧಿಕಾರ ಅಚಾನಕ್‌ ಆಗಿ ಸಿಕ್ಕಿದೆ. ಪರಿಹಾರ ರೂಪಿಸಲಿ,'' ಎಂದು ಸಲಹೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ