ಆ್ಯಪ್ನಗರ

ಬ್ರೇಕಿಂಗ್ ನ್ಯೂಸ್: ನೂತನ ಸಚಿವರ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಿದ ಬಿಎಸ್‌ವೈ

ಬುಧವಾರ ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಲಿರುವ ಸಚಿವರ ಹೆಸರುಗಳನ್ನು ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಈ ಕುರಿತಾದ ಮಾಹಿತಿ ಇಲ್ಲಿದೆ.

Vijaya Karnataka 13 Jan 2021, 11:44 am
ಬೆಂಗಳೂರು: ನೂತನ ಸಚಿವರ ಪಟ್ಟಿಯನ್ನು ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಬುಧವಾರ ಬೆಂಗಳೂರಿನಲ್ಲಿ ಮಾತನಾಡಿದ ಅವರು ರಾಜಭವನಕ್ಕೆ 7 ಸಚಿವರ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂದು ತಿಳಿಸಿದರು. ನೂತನ ಸಚಿವರ ಹೆಸರುಗಳು ಹೀಗಿವೆ.
Vijaya Karnataka Web Cabinet expansion


ಉಮೇಶ್ ಕತ್ತಿ, ಅರವಿಂದ್ಲಿಂಬಾವಳಿ, ಎಂಟಿಬಿ ನಾಗರಾಜ್, ಮುರುಗೇಶ್ ನಿರಾಣಿ, ಆರ್‌. ಶಂಕರ್, ಸಿ.ಪಿ ಯೋಗೇಶ್ವರ್ ಹಾಗೂ ಎಸ್‌ ಅಂಗಾರ ಹೆಸರುಗಳು ಅಧಿಕೃತಗೊಂಡಿವೆ. ಆದರೆ ಭಾರೀ ಕುತೂಹಲ ಮೂಡಿಸಿದ್ದ ಮುನಿರತ್ನ ನಾಯ್ದ ಅವರಿಗೆ ಸಚಿವ ಸ್ಥಾನ ಸಿಗಲಿಲ್ಲ.

ಸೋತ ಯೋಗೀಶ್ವರ್ ಗೆ ಯಾಕೆ ಮಂತ್ರಿಗಿರಿ: ಶಾಸಕ ತಿಪ್ಪಾರೆಡ್ಡಿ ಆಕ್ರೋಶ

ಒಂದುವರೆ ತಿಂಗಳ ಬಳಿಕ ಮುನಿರತ್ನಗೆ ಸಚಿವ ಸ್ಥಾನ?

ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಮುನಿರತ್ನ ಅವರಿಗೆ ಕೊನೆಗೂ ನಿರಾಸೆ ಆಗಿದೆ. ಆದರೆ ಒಂದುವರೆ ತಿಂಗಳ ಬಳಿಕ ಅವರಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆ. ಮುನಿರತ್ನ ಅವರನ್ನು ಸಂಧಾನದ ಮೂಲಕ ಸಮಾಧಾನ ಪಡಿಸುವಲ್ಲಿ ಸಿಎಂ ಬಿಎಸ್‌ ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ.

ಹೆಚ್‌ ನಾಗೇಶ್ ರಾಜೀನಾಮೆ ಇಲ್ಲ!

ಇದೇ ಸಂದರ್ಭದಲ್ಲಿ ಹೆಚ್‌ ನಾಗೇಶ್ ರಾಜೀನಾಮೆ ಪಡೆಯಲಾಗುತ್ತಿದೆ ಎನ್ನಲಾಗಿತ್ತು. ಆದರೆ ಇದನ್ನು ಸಿಎಂ ನಿರಾಕರಿಸಿದ್ದಾರೆ. ಇವತ್ತು ನಾಗೇಶ್ ರಾಜೀನಾಮೆ ಪಡೆಯಲ್ಲ ಎಂದಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ರಾಜೀನಾಮೆ ಸಾಧ್ಯತೆ ಇದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ