ಆ್ಯಪ್ನಗರ

ಖಾತೆ ಹಂಚಿಕೆ ಬೆನ್ನಲ್ಲೇ ಬದಲಾವಣೆ ! ಬಿ.ಸಿ ಪಾಟೀಲ್‌ಗೆ ಅರಣ್ಯ ಬದಲಾಗಿ ಕೃಷಿ

ಖಾತೆ ಹಂಚಿಕೆ ಬೆನ್ನಲ್ಲೇ ಅಸಮಧಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಸಚಿವ ಬಿ.ಸಿ ಪಾಟೀಲ್‌ಗೆ ನೀಡಲಾಗಿದ್ದ ಅರಣ್ಯ ಖಾತೆ ಬದಲಾಗಿ ಕೃಷಿ ಖಾತೆಯನ್ನು ನೀಡಲಾಗಿದೆ. ಸಿಎಂ ಬಿಎಸ್‌ವೈ ಈ ಕುರಿತಾಗಿ ರಾಜ್ಯಪಾಲರಿಗೆ ಶಿಫಾರಸು ಮಾಡಲಾಗಿದೆ ಎನ್ನಲಾಗಿದೆ.

Vijaya Karnataka Web 11 Feb 2020, 11:31 am
ಬೆಂಗಳೂರು: ಅರಣ್ಯ ಖಾತೆ ನೀಡಿದ್ದಕ್ಕಾಗಿ ಸಚಿವ ಬಿ.ಸಿ ಪಾಟೀಲ್‌ ಅಸಮಧಾನ ವ್ಯಕ್ತಪಡಿಸಿದ ಬೆನ್ನಲ್ಲಿ ಖಾತೆ ಬದಲಾವಣೆ ಮಾಡಿ ಕೃಷಿ ಖಾತೆಯನ್ನು ನೀಡಲಾಗಿದೆ. ಸಿಎಂ ಬಿಎಸ್‌ ಯಡಿಯೂರಪ್ಪ ಈ ಕುರಿತಾಗಿ ರಾಜ್ಯಪಾಲರಿಗೆ ಶಿಫಾರಸು ಮಾಡಿದ್ದಾರೆ.
Vijaya Karnataka Web cabinet expansion portfolio changed for bc patil
ಖಾತೆ ಹಂಚಿಕೆ ಬೆನ್ನಲ್ಲೇ ಬದಲಾವಣೆ ! ಬಿ.ಸಿ ಪಾಟೀಲ್‌ಗೆ ಅರಣ್ಯ ಬದಲಾಗಿ ಕೃಷಿ


ಸೋಮವಾರ 11 ನೂತನ ಶಾಸಕರಿಗೆ ಖಾತೆಯನ್ನು ಹಂಚಿಕೆ ಮಾಡಲಾಗಿತ್ತು. ಬಿ.ಸಿ ಪಾಟೀಲ್‌ಗೆ ಅರಣ್ಯ ಖಾತೆಯನ್ನು ನೀಡಲಾಗಿತ್ತು. ಆದರೆ ಅರಣ್ಯ ಖಾತೆಗೆ ಬಿ.ಸಿ ಪಾಟೀಲ್‌ ವಿರೋಧ ವ್ಯಕ್ತಪಡಿಸಿದ್ದರು.

ಸಿಎಂ ಬಿಎಸ್‌ವೈ ಅವರನ್ನು ಭೇಟಿ ಮಾಡಿ ಅಸಮಧಾನ ವ್ಯಕ್ತಪಡಿಸಿದ್ದರು. ಅರಣ್ಯ ಬದಲಾಗಿ ಕೃಷಿ ಖಾತೆಗೆ ಬೇಡಿಕೆ ಇಟ್ಟಿದ್ದರು. ಈ ಕಾರಣಕ್ಕಾಗಿ ಗೃಹ ಸಚಿವ ಬವಸರಾಜ್ ಬೊಮ್ಮಾಯಿಯವರಿಗೆ ಹೆಚ್ಚುವರಿಯಾಗಿ ನೀಡಲಾಗಿದ್ದ ಕೃಷಿ ಖಾತೆಯನ್ನು ಬಿ.ಸಿ ಪಾಟೀಲ್ ಅವರಿಗೆ ನೀಡಲಾಗಿದೆ.

ಈ ನಡುವೆ ವೈದ್ಯಕೀಯ ಶಿಕ್ಷಣ ಖಾತೆಯನ್ನು ಪಡೆದ ಡಾ. ಸುಧಾಕರ್‌ ಅವರು ಖಾತೆಯ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದಾರೆ. ಇಂಧನ ಖಾತೆಯ ಮೇಲೆ ಕಣ್ಣಿಟ್ಟಿದ್ದ ಅವರಿಗೆ ವೈದ್ಯಕೀಯ ಶಿಕ್ಷಣ ಖಾತೆಯನ್ನು ನೀಡಲಾಗಿದೆ.

ಡಾ. ಸಿಎಸ್‌ ಅಶ್ವಥನಾರಾಯಣ - ಉನ್ನತ ಶಿಕ್ಷಣ, ಐಟಿ ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ

ಹೆಚ್ಚುವರಿ ಖಾತೆ -ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ

ಲಕ್ಷ್ಮಣ ಸವದಿ - ಸಾರಿಗೆ

ಗೋವಿಂದ್ ಕಾರಜೋಳ - ಲೋಕೋಪಯೋಗಿ

ಹೆಚ್ಚುವರಿ ಖಾತೆ - ಸಮಾಜ ಕಲ್ಯಾಣ

ಬಸವರಾಜು ಬೊಮ್ಮಾಯಿ - ಗೃಹ

ಕೆ.ಎಸ್‌ ಈಶ್ವರಪ್ಪ - ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್

ಆರ್‌. ಅಶೋಕ್ - ಕಂದಾಯ

ಜಗದೀಶ್ ಶೆಟ್ಟರ್ - ಕೈಗಾರಿಕೆ

ಹೆಚ್ಚುವರಿ ಖಾತೆ - ಸಾರ್ವಜನಿಕ ಉದ್ದಿಮೆ

ಎಸ್‌. ಸುರೇಶ್ ಕುಮಾರ್ - ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ

ಬಿ. ಶ್ರೀರಾಮುಲು- ಆರೋಗ್ಯ ಮತ್ತು ಕುಟುಂಬ ಕಲ್ಯಾಣ

ಹೆಚ್ಚುವರಿ ಖಾತೆ- ಹಿಂದುವಳಿದ ವರ್ಗಗಳ ಕಲ್ಯಾಣ

ಸಿ.ಟಿ ರವಿ - ಪ್ರವಾಸೋದ್ಯಮ

ಹೆಚ್ಚುವರಿ ಖಾತೆ- ಸಕ್ಕರೆ, ಕನ್ನಡ ಮತ್ತು ಸಂಸ್ಕೃತಿ , ಕ್ರೀಡೆ ಹಾಗೂ ಯುವಜನ ಸೇವೆ

ವಿ. ಸೋಮಣ್ಣ - ವಸತಿ

ಜೆ. ಸಿ ಮಾಧುಸ್ವಾಮಿ - ಕಾನೂನು ಹಾಗೂ ಸಂಸದೀಯ ವ್ಯವಹಾರ

ಹೆಚ್ಚುವರಿ: ಸಣ್ಣ ನೀರಾವರಿ

ಸಿ.ಸಿ ಪಾಟೀಲ - ಗಣಿ, ಪರಿಸರ ಮತ್ತು ಜೀವಿಶಾಸ್ತ್ರ

ಎಚ್‌. ನಾಗೇಶ್ - ಅಬಕಾರಿ

ಶಶಿಕಲಾ ಜೊಲ್ಲೆ - ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ

ಪ್ರಭು ಚೌವ್ಹಾಣ್ - ಪಶುಸಂಗೋಪನೆ

ಹೆಚ್ಚುವರಿ ಖಾತೆ - ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್

ರಮೇಶ್ ಜಾರಕಿಹೊಳಿ - ಜಲಸಂಪನ್ಮೂಲ

ಬಿ.ಸಿ ಪಾಟೀಲ್‌ - ಕೃಷಿ

ಶ್ರೀಮಂತ ಪಾಟೀಲ್‌ -ಜವಳಿ

ನಾರಾಯಣ ಗೌಡ - ಪೌರಾಡಳಿತ

ಹೆಚ್ಚುವರಿ ಖಾತೆ: ತೋಟಗಾರಿಕೆ ಹಾಗೂ ರೇಶ್ಮೆ

ಎಸ್‌.ಟಿ ಸೋಮಶೇಖರ್ - ಸಹಕಾರ

ಆನಂದ್‌ ಸಿಂಗ್ -ಆಹಾರ ಮತ್ತು ನಾಗರಿಕ ಪೂರೈಕೆ

ಗೋಪಾಲಯ್ಯ - ಸಣ್ಣ ಕೈಗಾರಿಕೆ

ಶಿವರಾಂ ಹೆಬ್ಬಾರ್‌- ಕಾರ್ಮಿಕ

ಕೆ. ಸುಧಾಕರ್ - ವೈದ್ಯಕೀಯ ಶಿಕ್ಷಣ

ಬೈರತಿ ಬಸವರಾಜ್ - ನಗರಾಭಿವೃದ್ದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ