ಆ್ಯಪ್ನಗರ

ರಾಜೀನಾಮೆ ಪರಿಶೀಲನೆಗೆ ಕಾಲಾವಕಾಶ: ಸ್ಪೀಕರ್‌ ನಿರ್ಧಾರದಿಂದ ದೋಸ್ತಿಗಳಿಗೆ ಸಿಕ್ಕಿದೆ 'ಗುಟುಕು ಜೀವ'

ರಾಜ್ಯ ರಾಜಕೀಯದ ನಾಟಕೀಯ ಬೆಳವಣಿಗೆಗಳು ಕ್ಲೈಮ್ಯಾಕ್ಸ್‌ ಹಂತ ತಲುಪುವ ಸಾಧ್ಯತೆ ಸದ್ಯಕ್ಕೆ ಇಲ್ಲ. ವಿಧಾನಸಭಾ ಸ್ಪೀಕರ್‌ ಅಂಗಳದಲ್ಲಿ ಈಗ ರಾಜೀನಾಮೆ ಪರಿಶೀಲನೆ ಪ್ರಕ್ರಿಯೆ ಇದೆ.

Vijaya Karnataka Web 9 Jul 2019, 7:23 pm
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಆಗಿರುವ ಕ್ಷಿಪ್ರಕ್ರಾಂತಿಯ ಹಿನ್ನೆಲೆಯಲ್ಲಿ ಸಮ್ಮಿಶ್ರ ಸರಕಾರದ ಭವಿಷ್ಯ ಸ್ಪೀಕರ್‌ ಕೈಯಲ್ಲಿದೆ.
Vijaya Karnataka Web ರಮೇಶ್‌ ಕುಮಾರ್‌
ರಮೇಶ್‌ ಕುಮಾರ್‌


ಅತೃಪ್ತ ಶಾಸಕರು ನೀಡಿರುವ 13 ರಾಜೀನಾಮೆ ಪೈಕಿ ಐವರ ರಾಜೀನಾಮೆ ಮಾತ್ರ ಕ್ರಮಬದ್ಧವಾಗಿದೆ. ಉಳಿದವರಿಗೆ ನೋಟಿಸ್‌ ಕಳುಹಿಸಲಾಗಿದೆ ಹಾಗೂ ಕ್ರಮಬದ್ಧವಾಗಿರುವ ಶಾಸಕರಿಗೂ ನೋಟಿಸ್‌ ನೀಡಿ ಖುದ್ದು ಹಾಜರಾಗಿ ವಿವರಣೆ ನೀಡುವಂತೆ ಕಾಲಾವಕಾಶ ನೀಡಲಾಗಿದೆ ಎಂದು ಸ್ಪೀಕರ್‌ ತಿಳಿಸಿದ್ದಾರೆ.

ಅಲ್ಲದೇ ಕ್ರಮಬದ್ಧವಲ್ಲದ ಶಾಸಕರಿಗೆ ಮತ್ತೊಮ್ಮೆ ಅವಕಾಶ ಕಲ್ಪಿಸಲು ಅವಕಾಶ ನೀಡಿ ಕಚೇರಿಯಿಂದ ನೋಟಿಸ್‌ ನೀಡಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಜುಲೈ 12 ಹಾಗೂ 15ರಂದು ಐವರು ಶಾಸಕರ ಜತೆ ಖುದ್ದಾಗಿ ವಿಚಾರಣೆ ನಡೆಸುತ್ತೇನೆ ಎಂದು ಸ್ಪೀಕರ್‌ ರಮೇಶ್‌ ಹೇಳಿದ್ದಾರೆ. ಸ್ಪೀಕರ್‌ ಈ ನಿರ್ಧಾರದಿಂದ ಸದ್ಯಕ್ಕೆ ದೋಸ್ತಿ ಸರಕಾರಕ್ಕೆ ಗುಟುಕು ಜೀವ ಬಂದಂತಾಗಿದೆ.

ಇವರೆಲ್ಲರ ರಾಜೀನಾಮೆ ಪರಿಶೀಲನೆ ಆಗುವವರೆಗೂ ಹಾಗೂ ರಾಜೀನಾಮೆ ಅಂಗೀಕಾರ ಆಗುವವರೆಗೂ ಸರಕಾರದ ನಂಬರ್ ಗೇಮ್‌ನಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಹೀಗಾಗಿ ಮುಂದಿನ ವಾರದವರೆಗೂ ಸರಕಾರ ಸೇಫ್‌.

ಇದೇ ಮಾತನ್ನು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ರೆಸಾರ್ಟ್‌ನಲ್ಲಿರುವ ಜೆಡಿಎಸ್‌ ಶಾಸಕರಿಗೆ ಭರವಸೆ ನೀಡಿದ್ದಾರೆ.

ಬಹುತೇಕ ಒಂದು ವಾರದ ಅವಧಿಯಲ್ಲಿ ಕೆಲವು ಶಾಸಕರನ್ನು ಮನವೊಲಿಸಿ ಕರೆತರಲು ಕಾಂಗ್ರೆಸ್‌, ಜೆಡಿಎಸ್‌ಗೆ ಕಾಲಾವಕಾಶ ದೊರೆತಂತಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ