ಆ್ಯಪ್ನಗರ

ಕ್ಯಾನ್ಸರ್‌ ಪೀಡಿತ ಶಿಕ್ಷಕಿಗೂ ಕಡ್ಡಾಯ ವರ್ಗಾವಣೆಯಿಂದ ಸಿಗದ ವಿನಾಯಿತಿ

ಅಗತ್ಯ ದಾಖಲೆಗಳನ್ನು ವರ್ಗಾವಣೆ ತಂತ್ರಾಂಶದಲ್ಲಿ ಅಳವಡಿಸದ ಕಾರಣ ...

Vijaya Karnataka 10 Sep 2019, 5:00 am
ಬೆಂಗಳೂರು: ಅಗತ್ಯ ದಾಖಲೆಗಳನ್ನು ವರ್ಗಾವಣೆ ತಂತ್ರಾಂಶದಲ್ಲಿ ಅಳವಡಿಸದ ಕಾರಣ ಕ್ಯಾನ್ಸರ್‌ಪೀಡಿತ ಶಿಕ್ಷಕಿಯೊಬ್ಬರು 'ಕಡ್ಡಾಯ ವರ್ಗಾವಣೆ'ಯಿಂದ ವಿನಾಯಿತಿ ಪಡೆಯಲು ವಿಫಲರಾದ ಘಟನೆ ಸೋಮವಾರ ನಡೆಯಿತು.
Vijaya Karnataka Web cancer effected teacher transfer
ಕ್ಯಾನ್ಸರ್‌ ಪೀಡಿತ ಶಿಕ್ಷಕಿಗೂ ಕಡ್ಡಾಯ ವರ್ಗಾವಣೆಯಿಂದ ಸಿಗದ ವಿನಾಯಿತಿ


ನಗರದ ಎಚ್‌.ಎಸ್‌.ಆರ್‌.ಬಡಾವಣೆ ಬಳಿಯಿರುವ ಎಳ್ಳುಕುಂಟೆ ಹಿರಿಯ ಪ್ರಾಥಮಿಕ ಶಾಲೆಯ ಮಹೇಶ್ವರಿ ಎಂಬ ಶಿಕ್ಷಕಿ ಕಡ್ಡಾಯ ವರ್ಗಾವಣೆಯಿಂದ ವಿನಾಯಿತಿ ಪಡೆಯಲು ವಿಫಲರಾದರು.

ಕ್ಯಾನ್ಸರ್‌ ಕಾಯಿಲೆಯಿಂದ ಬಳಲುತ್ತಿರುವ ಮಹೇಶ್ವರಿ ಅವರು ತಮಿಳುನಾಡು ರಾಜ್ಯದ ಮಧುರೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಳ್ಳುಕುಂಟೆ ಶಾಲೆಯಲ್ಲಿ ಈಗಾಗಲೇ 10 ವರ್ಷಕ್ಕೂ ಹೆಚ್ಚು ಕಾಲ ಕಾರ್ಯ ನಿರ್ವಹಿಸಿದ ಹಿನ್ನೆಲೆಯಲ್ಲಿ, ಕಡ್ಡಾಯ ವರ್ಗಾವಣೆಗೆ ಅವರನ್ನು ಪರಿಗಣಿಸಲಾಗಿತ್ತು.

ನಗರದ ಬಸವನಗುಡಿ ಟಿನ್‌ ಶಾಲೆಯಲ್ಲಿ ಸೋಮವಾರ ವರ್ಗಾವಣೆ ಕೌನ್ಸೆಲಿಂಗ್‌ಗೆ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಮಹೇಶ್ವರಿ ಹಾಜರಾಗಿ ವರ್ಗಾವಣೆಯಿಂದ ವಿನಾಯಿತಿ ನೀಡುವಂತೆ ಪರಿಪರಿಯಾಗಿ ಅಧಿಕಾರಿಗಳನ್ನು ಕೇಳಿಕೊಂಡರು.

ಆದರೆ, ಕಣ್ಣು ಮುಂದೆ ದಾಖಲೆಗಳಿದ್ದರೂ, ತಂತ್ರಾಂಶದ ಕಾರಣಕ್ಕೆ ಅಧಿಕಾರಿಗಳು ವಿನಾಯಿತಿ ನೀಡಲು ಅಸಹಾಯಕತೆ ವ್ಯಕ್ತಪಡಿಸಿದಾಗ ಮಹೇಶ್ವರಿ ಹಾಗೂ ಮಕ್ಕಳು ಕಣ್ಣೀರಿಡುತ್ತ ಅಂತಿಮವಾಗಿ ಕೆಂಗೇರಿಯ ಹಿರಿಯ ಪ್ರಾಥಮಿಕ ಶಾಲೆಗೆ ಅಧಿಕಾರಿಗಳು ವರ್ಗಾವಣೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ