ಆ್ಯಪ್ನಗರ

ಕೇಂದ್ರದಿಂದ ಕಾವೇರಿ ‘ಸ್ಕೀಮ್‌’ ಜಾರಿ

ಕಾವೇರಿ ನೀರು ಹಂಚಿಕೆಗೆ ಯೋಜನೆ (ಸ್ಕೀಮ್‌) ರಚಿಸಿ ಸುಪ್ರೀಂ ಕೋರ್ಟ್‌ನಿಂದ ಅನುಮತಿ ಪಡೆದಿರುವ ಕೇಂದ್ರ ಸರಕಾರ, ಶುಕ್ರವಾರ ಈ ಸಂಬಂಧ ಅಂತಿಮ ಅಧಿಸೂಚನೆ ಹೊರಡಿಸಿದೆ.

Vijaya Karnataka 2 Jun 2018, 7:12 am
ಹೊಸದಿಲ್ಲಿ: ಕಾವೇರಿ ನೀರು ಹಂಚಿಕೆಗೆ ಯೋಜನೆ (ಸ್ಕೀಮ್‌) ರಚಿಸಿ ಸುಪ್ರೀಂ ಕೋರ್ಟ್‌ನಿಂದ ಅನುಮತಿ ಪಡೆದಿರುವ ಕೇಂದ್ರ ಸರಕಾರ, ಶುಕ್ರವಾರ ಈ ಸಂಬಂಧ ಅಂತಿಮ ಅಧಿಸೂಚನೆ ಹೊರಡಿಸಿದೆ. ಇದರಿಂದಾಗಿ ಕಾವೇರಿ ನದಿ ನೀರು ಹಂಚಿಕೆ ಪ್ರಾಧಿಕಾರ ಅಧಿಕೃತವಾಗಿ ಜಾರಿಯಾದಂತಾಗಿದೆ.
Vijaya Karnataka Web krs


ಕರ್ನಾಟಕದ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಸ್ಕೀಮ್‌ ರಚನೆಗೆ ವಿಳಂಬ ಮಾಡಿದ್ದ ಕೇಂದ್ರ ಸರಕಾರ, ಕಳೆದ ಮೇ 14ರಂದು ಯೋಜನೆಯ ಕರಡನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿತ್ತು. ಮೇ 18ರಂದು ಈ ಸ್ಕೀಮ್‌ ಒಪ್ಪಿಕೊಂಡಿದ್ದ ಕೋರ್ಟ್‌, ಮುಂಗಾರು ಹಂಗಾಮಿಗೆ ಮೊದಲೇ ಈ ಪ್ರಾಧಿಕಾರ ಕಾರಾರ‍ಯರಂಭ ಮಾಡಬೇಕು. ಕಾವೇರಿ ಕಣಿವೆಯ ನಾಲ್ಕೂ ರಾಜ್ಯಗಳ ನೀರಿನ ನ್ಯಾಯಸಮ್ಮತ ಹಕ್ಕಿಗೆ ಸಂಬಂಧಿಸಿದಂತೆ ನ್ಯಾಯಾಧಿಕರಣ ನೀಡಿದ್ದ ಐತೀರ್ಪನ್ನು ಮಾರ್ಪಡಿಸಿ ಸುಪ್ರೀಂ ಕೋರ್ಟ್‌ ನೀಡಿರುವ ಆದೇಶವನ್ನು ಚಾಚೂತಪ್ಪದೆ ಪಾಲಿಸಬೇಕು ಎಂದು ಸೂಚಿಸಿತ್ತು.

ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರದ ಅಡಿಯಲ್ಲಿ ಕೆಲಸ ಮಾಡುವ ಕಾವೇರಿ ನೀರು ನಿಯಂತ್ರಣ ಸಮಿತಿಯು ನೈಋುತ್ಯ ಮುಂಗಾರು ಹಂಗಾಮಿನಲ್ಲಿ ಪ್ರತಿ 10 ದಿನಕ್ಕೊಮ್ಮೆ ಮತ್ತು ಈಶಾನ್ಯ ಮುಂಗಾರು ಹಂಗಾಮಿನಲ್ಲಿ ಪ್ರತಿ 15 ದಿನಕ್ಕೊಮ್ಮೆ ಕಡ್ಡಾಯವಾಗಿ ಸಭೆ ನಡೆಸಬೇಕು, ಸಭೆಯಲ್ಲಿ ಕನಿಷ್ಠ 6 ಸದಸ್ಯರು ಭಾಗವಹಿಸಲೇಬೇಕು, ಕಣಿವೆ ರಾಜ್ಯಗಳ ಪ್ರತಿನಿಧಿಗಳು ಸಭೆಗೆ ಹಾಜರಾಗುವಂತೆ ಸಭೆಯ ದಿನಾಂಕ ನಿಗದಿ ಮಾಡಬೇಕು ಮತ್ತು ಪ್ರತಿ ನಿರ್ಧಾರವನ್ನು ಮತಗಣನೆ ಆಧಾರದ ಮೇಲೆಯೇ ತೆಗೆದುಕೊಳ್ಳಬೇಕು ಎಂದೂ ಅಧಿಸೂಚನೆ ವಿವರಿಸಿದೆ.

ಮೂರು ಕಾಲಗಳ ವಿಂಗಡಣೆ

ಕರಡು ಯೋಜನೆಯಲ್ಲಿನ ಬಹುತೇಕ ಅಂಶಗಳನ್ನು ಅಧಿಸೂಚನೆ ಒಳಗೊಂಡಿದ್ದು, ಪ್ರತಿವರ್ಷದ ಜೂನ್‌ 1ರಿಂದ ಅಕ್ಟೋಬರ್‌ 15ರವರೆಗಿನ ಅವಧಿಯನ್ನು ನೈಋುತ್ಯ ಮುಂಗಾರು ಹಂಗಾಮು, ಅಕ್ಟೋಬರ್‌ 16ರಿಂದ ಜನವರಿ 31ರವರೆಗಿನ ಅವಧಿಯನ್ನು ಈಶಾನ್ಯ ಮುಂಗಾರು ಹಂಗಾಮು ಮತ್ತು ಫೆ.1ರಿಂದ ಮೇ 31ರವರೆಗಿನ ಅವಧಿಯನ್ನು ಬೇಸಿಗೆ ಎಂದು ಪರಿಗಣಿಸಬೇಕು ಎಂದು ಅಧಿಸೂಚನೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ