ಆ್ಯಪ್ನಗರ

ಡಿಕೆಶಿ ವಿರುದ್ಧ ತನಿಖೆಗೆ ಸಿಬಿಐ ಸಜ್ಜು

ಅಕ್ರಮ ಹಣ ವರ್ಗಾವಣೆ ಆರೋಪದಡಿ ಜಾರಿ ನಿರ್ದೇಶನಾಲಯದಿಂದ ವಿಚಾರಣೆ ಎದುರಿಸುತ್ತಿರುವ ಮಾಜಿ ಸಚಿವ ಡಿ.ಕೆ ಶಿವಕುಮಾರ್‌ ವಿರುದ್ಧ 'ಆದಾಯಕ್ಕೂ ಮೀರಿ ಆಸ್ತಿ ಗಳಿಕೆ' ಆರೋಪದಲ್ಲಿಸಿಬಿಐ ಅಧಿಕಾರಿಗಳು ತನಿಖೆ ಆರಂಭಿಸಲು ಸಿದ್ಧತೆ ನಡೆಸಿದ್ದಾರೆ.

Vijaya Karnataka Web 4 Oct 2019, 5:00 am
ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಆರೋಪದಡಿ ಜಾರಿ ನಿರ್ದೇಶನಾಲಯದಿಂದ ವಿಚಾರಣೆ ಎದುರಿಸುತ್ತಿರುವ ಮಾಜಿ ಸಚಿವ ಡಿ.ಕೆ ಶಿವಕುಮಾರ್‌ ವಿರುದ್ಧ 'ಆದಾಯಕ್ಕೂ ಮೀರಿ ಆಸ್ತಿ ಗಳಿಕೆ' ಆರೋಪದಲ್ಲಿಸಿಬಿಐ ಅಧಿಕಾರಿಗಳು ತನಿಖೆ ಆರಂಭಿಸಲು ಸಿದ್ಧತೆ ನಡೆಸಿದ್ದಾರೆ.
Vijaya Karnataka Web dks income


2018ರ ಚುನಾವಣೆ ಸಂದರ್ಭದಲ್ಲಿತಮ್ಮ ಮತ್ತು ಕುಟುಂಬದ ಆಸ್ತಿ 840 ಕೋಟಿ ರೂ. ಎಂದು ಘೋಷಿಸಿಕೊಂಡಿದ್ದ ಶಿವಕುಮಾರ್‌, ಜಾರಿ ನಿರ್ದೇಶನಾಲಯ ಅಧಿಕಾರಿಗಳ ವಿಚಾರಣೆ ವೇಳೆ ಆಸ್ತಿ ಸಂಪಾದನೆ ಕುರಿತು ಸೂಕ್ತ ಮಾಹಿತಿ ನೀಡಲು ವಿಫಲರಾಗಿದ್ದಾರೆಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅಡಿ ಸಿಬಿಐನಿಂದ ತನಿಖೆಗೆ ಒಳಪಡಿಸಲು ರಾಜ್ಯ ಸರಕಾರಕ್ಕೆ ಇ.ಡಿ ಪತ್ರ ಬರೆದಿತ್ತು. 'ದಿಲ್ಲಿಸ್ಪೆಷಲ್‌ ಪೊಲೀಸ್‌ ಎಸ್ಟಾಬ್ಲಿಷ್‌ಮೆಂಟ್‌ ಕಾಯಿದೆ' ಕಲಂ 6ರ ಅಡಿ ಸಿಬಿಐಗೆ ತನಿಖೆ ನಡೆಸಲು ರಾಜ್ಯ ಸರಕಾರ ಒಪ್ಪಿಗೆ ನೀಡಿದೆ. ಈ ಹಿನ್ನೆಲೆಯಲ್ಲಿಶೀಘ್ರದಲ್ಲೇ ಡಿ.ಕೆ ಶಿವಕುಮಾರ್‌ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅಡಿ ಸಿಬಿಐ ಶೀಘ್ರದಲ್ಲೇ ಕೇಸ್‌ ದಾಖಲಿಸಿಕೊಳ್ಳುವ ಸಾಧ್ಯತೆ ಇದೆ. ಈ ಸಂಬಂಧ ಸಿಬಿಐ ಅಧಿಕಾರಿಗಳು ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ, ಚುನಾವಣಾ ಆಯೋಗದಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆಂದು ತಿಳಿದು ಬಂದಿದೆ.

30 ವರ್ಷಗಳ ರಾಜಕೀಯ ಜೀವನದಲ್ಲಿಹಲವು ಏಳು ಬೀಳುಗಳನ್ನು ಕಂಡಿರುವ ಶಿವಕುಮಾರ್‌ ಅವರು ರಾಜ್ಯದ ಪ್ರಭಾವಿ ರಾಜಕಾರಣಿಯಾಗಿ ಬೆಳೆದಿದ್ದಾರೆ. 2004ರಲ್ಲಿಚುನಾವಣೆಗೆ ಸ್ಪರ್ಧಿಸುವ ವೇಳೆ ತಮ್ಮ ಆಸ್ತಿಯನ್ನು 7 ಕೋಟಿ ರೂ. ಎಂದು ಘೋಷಿಸಿಕೊಂಡಿದ್ದರು. 2018ರಲ್ಲಿಆಸ್ತಿ ಮೊತ್ತ 840 ಕೋಟಿ ರೂ.ಗೆ ಏರಿಕೆಯಾಗಿದೆ. ಆಸ್ತಿಯನ್ನು ತಮ್ಮ ಪತ್ನಿ, ಮಕ್ಕಳು ಮತ್ತು ತಾಯಿ ಹೆಸರಿನಲ್ಲಿಹೊಂದಿದ್ದಾರೆ. ಇದೇ ವೇಳೆ ಸಹೋದರ ಡಿ.ಕೆ ಸುರೇಶ್‌ ಅವರ ಆಸ್ತಿ 2014ರಲ್ಲಿ85 ಕೋಟಿ ರೂ. ಇದ್ದದ್ದು, 2019ರಲ್ಲಿ338 ಕೋಟಿ ರೂ.ಗೆ ಏರಿಕೆಯಾಗಿದೆ.

ಏಳು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಡಿ.ಕೆ ಶಿವಕುಮಾರ್‌ ರಾಜ್ಯ ಸರಕಾರದಲ್ಲಿಬಂದಿಖಾನೆ, ಸಹಕಾರ, ನಗರಾಭಿವೃದ್ಧಿ, ವೈದ್ಯ ಶಿಕ್ಷಣ, ಜಲಸಂಪನ್ಮೂಲ ಇಲಾಖೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ಜೊತೆಗೆ ಕಾಂಗ್ರೆಸ್‌ ಪಕ್ಷದಲ್ಲಿಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ.

ಜನಪ್ರತಿನಿಧಿಯಾಗಿ 7 ಅವಧಿಗೆ ಆಯ್ಕೆಯಾಗಿ, ಸರಕಾರದ ಪ್ರಮುಖ ಇಲಾಖೆಗಳನ್ನು ನಿಭಾಯಿಸಿರುವ ಶಿವಕುಮಾರ್‌, ಸಚಿವರಾಗಿದ್ದ ಅವಧಿಯಲ್ಲಿವಿವಿಧ ಯೋಜನೆಗಳಲ್ಲಿಭ್ರಷ್ಟಾಚಾರದ ಮೂಲಕ ಅಪಾರ ಪ್ರಮಾಣದ ಸ್ಥಿರ ಮತ್ತು ಚರಾಸ್ತಿ ಗಳಿಸಿರುವ ಆರೋಪಗಳ ಕುರಿತು ಸಿಬಿಐ ತನಿಖೆ ನಡೆಸಲಿದೆ.

ಸಚಿವರು ಮತ್ತು ಅವರ ಆಪ್ತರಿಗೆ ಸೇರಿದ ದಿಲ್ಲಿಫ್ಲ್ಯಾಟ್‌ಗಳ ಮೇಲೆ 2017ರಲ್ಲಿದಾಳಿ ನಡೆಸಿದ್ದ ಐಟಿ ಅಧಿಕಾರಿಗಳು, 8.59 ಕೋಟಿ ರೂ. ನಗದು ಜಪ್ತಿ ಮಾಡಿದ್ದರು. ಹಣದ ವರ್ಗಾವಣೆ ಕುರಿತು ಐಟಿ ವರದಿ ಆಧರಿಸಿ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ಈಗ ಸಿಬಿಐ ಕೂಡ ತನಿಖೆ ಆರಂಭಿಸುವುದರಿಂದ ಮಾಜಿ ಸಚಿವರು ಮತ್ತಷ್ಟು ಸಂಕಷ್ಟ ಎದುರಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ಆಸ್ತಿ ಸಂಪಾದನೆ ಲೆಕ್ಕ ಕೊಡಬೇಕು

ಆದಾಯಕ್ಕೂ ಮೀರಿ ಆಸ್ತಿ ಗಳಿಕೆ ಕುರಿತು ಕೇಸ್‌ ದಾಖಲಾದರೆ ಸಚಿವರು ತಮ್ಮ ಆಸ್ತಿ ಸಂಪಾದನೆಯ ಮೂಲ, ಖರ್ಚು-ವೆಚ್ಚಗಳ ಕುರಿತು ಸಿಬಿಐಗೆ ಮಾಹಿತಿ ನೀಡಬೇಕಾಗುತ್ತದೆ. ತಮ್ಮ ಮತ್ತು ಕುಟುಂಬದ ಕೃಷಿ ಆದಾಯ, ವ್ಯಾಪಾರ, ವಹಿವಾಟು ಸೇರಿದಂತೆ ಇನ್ನಿತರ ಬಲ್ಲಮೂಲಗಳ ಆದಾಯ ಮತ್ತು ಪ್ರತಿ ವರ್ಷ ಮಾಡಿದ ಖರ್ಚಿನ ಕುರಿತು ವಿವರ ನೀಡಬೇಕು. ಅವರ ವಿವರಣೆ ಆಧರಿಸಿ ಆಸ್ತಿಯ ಕುರಿತು ಲೆಕ್ಕ ಹಾಕುವ ಸಿಬಿಐ, ಆದಾಯಕ್ಕೂ ಮೀರಿ ಆಸ್ತಿ ಗಳಿಸಿರುವುದು ಕಂಡು ಬಂದರೆ ಅದರ ಕುರಿತು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ