ಆ್ಯಪ್ನಗರ

ಸಿಸಿಬಿಯಿಂದ ಜನಾರ್ದನ ರೆಡ್ಡಿ ಬಂಧನ ಸಾಧ್ಯತೆ

ರಾತ್ರಿ ಸುಮಾರು 11 ಗಂಟೆಯವರೆಗೂ ರೆಡ್ಡಿ ವಿಚಾರಣೆ ನಡೆಸಲಾಗಿತ್ತು. ಬಳಿಕ ಸಿಸಿಬಿ ಕಚೇರಿಯಲ್ಲಿಯೇ ರೆಡ್ಡಿ ನಿದ್ದೆ ಮಾಡಿದ್ದರು.

Vijaya Karnataka Web 11 Nov 2018, 12:40 pm
ಬೆಂಗಳೂರು: ಆ್ಯಂಬಿಡೆಂಟ್ ಸ್ಕೀಂ ವಂಚನೆ ಮತ್ತು 57 ಕೆಜಿ ಚಿನ್ನದ ಗಟ್ಟಿ ಪಡೆದ ಪ್ರಕರಣದಲ್ಲಿ ಆರೋಪಿಯಾಗಿರುವ ಗಣಿ ಉದ್ಯಮಿ, ಮಾಜಿ ಸಚಿವ ಜನಾರ್ದನ ರೆಡ್ಡಿಯನ್ನು ಸಿಸಿಬಿ ಬಂಧಿಸಲಿದೆ ಎನ್ನಲಾಗಿದೆ.
Vijaya Karnataka Web janardhana reddy


ಜನಾರ್ದನ ರೆಡ್ಡಿ ವಿರುದ್ಧ ವಂಚನೆ ಆರೋಪವಿದ್ದು, ತನಿಖೆಗೆ ಹಾಜರಾಗುವಂತೆ ಸಿಸಿಬಿ ನೋಟಿಸ್ ಜಾರಿ ಮಾಡಿತ್ತು. ಆದರೆ ಕೆಲವು ದಿನ ಪೊಲೀಸರ ಕೈಗೆ ಸಿಗದೆ ತಪ್ಪಿಸಿಕೊಂಡಿದ್ದ ರೆಡ್ಡಿ, ಶನಿವಾರ ವಕೀಲರ ಜತೆ ಸಮಾಲೋಚನೆ ನಡೆಸಿ ನಂತರ ಸಿಸಿಬಿ ಕಚೇರಿಗೆ ಹಾಜರಾಗಿದ್ದರು.

ಶನಿವಾರ ರಾತ್ರಿ ಮತ್ತು ಭಾನುವಾರ ಕೂಡ ಸಿಸಿಬಿ ಪೊಲೀಸರು ಜನಾರ್ದನ ರೆಡ್ಡಿ ಮತ್ತು ಜ್ಯುವೆಲ್ಲರಿ ಅಂಗಡಿಯವರು, ಪ್ರಕರಣದಲ್ಲಿ ಹೆಸರಿರುವ ಇತರರನ್ನು ಕರೆಸಿ ಹಲವು ಸುತ್ತಿನ ವಿಚಾರಣೆ ನಡೆಸಿದ್ದರು. ಆದರೆ ರೆಡ್ಡಿ ವಿರುದ್ಧ ಸೂಕ್ತ ಸಾಕ್ಷ್ಯ ಲಭ್ಯವಾಗಿಲ್ಲ ಎನ್ನಲಾಗಿತ್ತು. ಬಳಿಕ ವಿಚಾರಣೆಗೆ ಮತ್ತಷ್ಟು ಕಾಲಾವಕಾಶ ಕೋರಿ ಸಿಸಿಬಿ ಪೊಲೀಸರು ಜನಾರ್ದನ ರೆಡ್ಡಿಯನ್ನು ವಶಕ್ಕೆ ಪಡೆಯಲು ಚಿಂತನೆ ನಡೆಸಿದ್ದರು ಎನ್ನಲಾಗಿದೆ.

600 ಕೋಟಿ ರೂ. ಆ್ಯಂಬಿಡೆಂಟ್ ಸ್ಕೀಂ ವಂಚನೆ ಪ್ರಕರಣದಲ್ಲಿ ರೆಡ್ಡಿ ಹೆಸರು ಕೇಳಿಬಂದಿದ್ದರಿಂದ ಸಿಸಿಬಿ ಪೊಲೀಸರು ಹಲವು ದಾಖಲೆ ಮತ್ತು ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದು, ಅಕ್ರಮ ಹಣ ವರ್ಗಾವಣೆ ಹಾಗು ವಂಚನೆಗೆ ಸಹಕಾರ ಕುರಿತು ಪ್ರಕರಣ ದಾಖಲಿಸಿದ್ದಾರೆ.

ಬಳಿಕ ರೆಡ್ಡಿಯ ಬಂಧನ ಮಾಡಬೇಕೆ ಇಲ್ಲವೇ ಎಂದು ಪೊಲೀಸ್ ಅಧಿಕಾರಿಗಳು ನಿರ್ಧರಿಸಲಿದ್ದಾರೆ. ರಾತ್ರಿ ಸುಮಾರು 11 ಗಂಟೆಯವರೆಗೂ ರೆಡ್ಡಿ ವಿಚಾರಣೆ ನಡೆಸಲಾಗಿತ್ತು. ಬಳಿಕ ಸಿಸಿಬಿ ಕಚೇರಿಯಲ್ಲಿಯೇ ರೆಡ್ಡಿ ನಿದ್ದೆ ಮಾಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ