ಆ್ಯಪ್ನಗರ

ರಾಜ್ಯಕ್ಕೆ ರಾವತ್‌ ಭೇಟಿ: ನೋಡಲ್‌ ಅಧಿಕಾರಿಗಳ ನೇಮಕ

ಚುನಾವಣಾ ಸಿದ್ಧತೆ ಪರಿಶೀಲನೆಗಾಗಿ ಮುಖ್ಯ ಚುನಾವಣಾ ಆಯುಕ್ತ ಆಗಮನ

Vijaya Karnataka Web 4 Apr 2018, 6:30 am
ಬೆಂಗಳೂರು : ಚುನಾವಣಾ ಸಿದ್ಧತೆ ಪರಿಶೀಲನೆಗಾಗಿ ಮುಖ್ಯ ಚುನಾವಣಾ ಆಯುಕ್ತ ಓ.ಪಿ.ರಾವತ್‌ ನೇತೃತ್ವದ ತಂಡ ಏಪ್ರಿಲ್‌ 4 ರಿಂದ ಮೂರು ದಿನಗಳ ಕಾಲ ರಾಜ್ಯಕ್ಕೆ ಆಗಮಿಸಲಿದೆ.
Vijaya Karnataka Web cec to visit karnataka
ರಾಜ್ಯಕ್ಕೆ ರಾವತ್‌ ಭೇಟಿ: ನೋಡಲ್‌ ಅಧಿಕಾರಿಗಳ ನೇಮಕ


ಚುನಾವಣಾ ಆಯುಕ್ತರಾದ ಸುನೀಲ್‌ ಅರೋರಾ, ಅಶೋಕ್‌ ಲವಾಸ್‌ ಈ ನಿಯೋಗದಲ್ಲಿ ಇರಲಿದ್ದು, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ, ಪೊಲೀಸ್‌ ಮಹಾನಿರ್ದೇಶಕರು, ಮುಖ್ಯ ಚುನಾವಣಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಲಿದ್ದಾರೆ. ಜತೆಗೆ ರಾಜಕೀಯ ಪಕ್ಷಗಳ ಮುಖಂಡರ ಜತೆಗೂ ಸಂವಾದ ನಡೆಸಲಿದ್ದಾರೆ.

ನೋಡಲ್‌ ಅಧಿಕಾರಿಗಳ ನೇಮಕ

ಚುನಾವಣೆ ನಿರ್ವಹಣೆಗಾಗಿ ಆಯೋಗ ನೋಡಲ್‌ ಅಧಿಕಾರಿಗಳ ನೇಮಕ ಮಾಡಿದೆ. ಮಾದರಿ ನೀತಿ ಸಂಹಿತೆ, ಕಾನೂನು-ಸುವ್ಯವಸ್ಥೆ, ವೆಚ್ಚ ಪರಿಶೀಲನೆ ಹಾಗೂ ಬೆಂಗಳೂರು ವಿಭಾಗದ ಮೇಲ್ವಿಚಾರಣೆಗೆ ಡಾ.ಜಗದೀಶ್‌, ದತ್ತಾಂಶ, ಸಾರಿಗೆ ನಿರ್ವಹಣೆ, ಸ್ಟ್ರಾಂಗ್‌ ರೂಂ ನಿರ್ವಹಣೆಗೆ ಉಜ್ವಲ್‌ ಕುಮಾರ್‌, ಮತದಾರರ ಪಟ್ಟಿ ಪರಿಷ್ಕರಣೆ, ನಾಮಪತ್ರ ಪರಿಶೀಲನೆಗೆ ಕೆ.ಎನ್‌.ರಮೇಶ್‌, ಐಟಿ ನಿರ್ವಹಣೆಗೆ ಸೂರ್ಯಸೇನ, ಮತಯಂತ್ರ ನಿರ್ವಹಣೆ ರಾಘವೇಂದ್ರ, ಹಣಕಾಸು ಡಾ.ನಾಗೇಂದ್ರ ಎಫ್‌ ಹೊನ್ನಾಳಿ, ತರಬೇತಿ ಮತ್ತು ಚುನಾವಣಾ ವೆಚ್ಚ ಎಚ್‌.ಜ್ಞಾನೇಶ್‌, ಸ್ವೀಪ್‌ ಕಾರ್ಯ ಯೋಜನೆ ವಿ.ಎಸ್‌.ವಸ್ತ್ರದ್‌, ಮಾಧ್ಯಮ ನಿರ್ವಹಣೆ ಡಾ.ಬಿ.ಆರ್‌.ಮಮತಾ ಅವರನ್ನು ನಿಯೋಜಿಸಲಾಗಿದೆ ಎಂದು ಆಯೋಗದ ಪ್ರಕಟಣೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ