ಆ್ಯಪ್ನಗರ

ಕೇಂದ್ರ ಸರಕಾರಿ ನೌಕರರಿಂದ ಜ.8,9ರಂದು ಮುಷ್ಕರ

ಕನಿಷ್ಠ ವೇತನ 18 ಸಾವಿರ ರೂ ನಿಗದಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜ...

Vijaya Karnataka Web 3 Jan 2019, 5:00 am
ಬೆಂಗಳೂರು: ಕನಿಷ್ಠ ವೇತನ 18 ಸಾವಿರ ರೂ. ನಿಗದಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜ.8 ಮತ್ತು 9ರಂದು ಕೇಂದ್ರ ಸರಕಾರದ ವಿವಿಧ ಇಲಾಖೆಗಳ ನೌಕರರು ಮುಷ್ಕರ ನಡೆಸಲಿದ್ದಾರೆ. ಇದರಿಂದಾಗಿ ಕೇಂದ್ರ ಸರಕಾರಿ ಕಚೇರಿಗಳು ಬಂದ್‌ ಆಗುವ ಸಾಧ್ಯತೆ ಇದೆ.
Vijaya Karnataka Web 0201-2-2-KSG_03 (3)


ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ ವತಿಯಿಂದ ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರು ಬುಧವಾರ ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಬಹಿರಂಗ ಸಭೆ ನಡೆಸಿದರು.

''ಬ್ಯಾಂಕ್‌, ವಿಮೆ, ರೈಲ್ವೆ ಸೇರಿದಂತೆ ಕೇಂದ್ರದ ಎಲ್ಲ ಇಲಾಖೆಗಳ ನೌಕರರು, ಕಾರ್ಮಿಕರು ಮುಷ್ಕರದಲ್ಲಿ ಭಾಗವಹಿಸಲಿದ್ದಾರೆ,''ಎಂದು ಎಐಟಿಯುಸಿ-ಜೆಸಿಟಿಯುನ ಪದಾಧಿಕಾರಿ ಎಂ.ಡಿ ಹರಿಗೋವಿಂದ ತಿಳಿಸಿದರು.

''ಕನಿಷ್ಠ ವೇತನ ಜಾರಿ, ಯಾವುದೇ ಸಾರ್ವಜನಿಕ ಉದ್ಯಮಗಳ ಖಾಸಗೀಕರಣ ಮಾಡಬಾರದು. ಗುತ್ತಿಗೆ ನೌಕರ ಪದ್ಧತಿ ಕೈಬಿಡಬೇಕು, ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿಯು ನಮ್ಮ ಪ್ರಮುಖ ಬೇಡಿಕೆಗಳಾಗಿವೆ'' ಎಂದು ಹರಿಗೋವಿಂದ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ