ಆ್ಯಪ್ನಗರ

ಕೇಂದ್ರದ ನೀತಿಯಿಂದ ಪೆಟ್ರೋಲ್‌, ಡೀಸೆಲ್‌ ಬೆಲೆ ಹೆಚ್ಚಳ: ಕೃಷ್ಣ ಬೈರೇಗೌಡ

4 ವರ್ಷದಲ್ಲಿ ಕೇಂದ್ರ ಸರಕಾರವು 9 ಬಾರಿ ಪೆಟ್ರೋಲ್‌, ಡೀಸೆಲ್‌ ದರ ಹೆಚ್ಚಿಸಿದೆ

Vijaya Karnataka Web 3 Apr 2018, 10:02 pm
ಬೆಂಗಳೂರು: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿದಿದ್ದರೂ ಕಳೆದ 4 ವರ್ಷದಲ್ಲಿ ಕೇಂದ್ರ ಸರಕಾರವು 9 ಬಾರಿ ಪೆಟ್ರೋಲ್‌, ಡೀಸೆಲ್‌ ದರ ಹೆಚ್ಚಿಸಿದೆ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ಆಕ್ಷೇಪಿಸಿದ್ದಾರೆ.
Vijaya Karnataka Web center policy reason for petrol price rise
ಕೇಂದ್ರದ ನೀತಿಯಿಂದ ಪೆಟ್ರೋಲ್‌, ಡೀಸೆಲ್‌ ಬೆಲೆ ಹೆಚ್ಚಳ: ಕೃಷ್ಣ ಬೈರೇಗೌಡ


ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,''ಕಚ್ಚಾ ತೈಲದ ದರವೀಗ ಪ್ರತಿ ಬ್ಯಾರಲ್‌ಗೆ 122 ಡಾಲ್‌ರನಿಂದ 62 ಡಾಲರ್‌ಗೆ ಕುಸಿದಿದೆ. ಈ ನಡುವೆಯೂ ಗ್ರಾಹಕರ ಮೇಲಿನ ಹೊರೆಯನ್ನು ಕೇಂದ್ರ ಸರಕಾರ ಇಳಿಸಿಲ್ಲ ,''ಎಂದು ಅಸಮಾಧಾನ ವ್ಯಕ್ತಪಡಿಸಿದರು.

''ಪೆಟ್ರೋಲ್‌, ಡೀಸೆಲ್‌ ದರ ಏರಿಕೆಯ ಪರಿಣಾಮ ಇತರ ವಸ್ತುಗಳ ಮೇಲೂ ಆಗಲಿದೆ. ರಾಜ್ಯದಲ್ಲಿ ಪೆಟ್ರೋಲ್‌ ಮೇಲಿನ ನಾನಾ ಸುಂಕ ಕಡಿಮೆ ಮಾಡಲಾಗಿದೆ. ಆದರೆ, ಕೇಂದ್ರ ಸರಕಾರವು ಅತಿಹೆಚ್ಚು ಅಬಕಾರಿ ಸುಂಕ ವಿಧಿಸಿದೆ,'' ಎಂದು ಆರೋಪಿಸಿದರು.

''ಬಿಜೆಪಿ ಸರಕಾರ ಎಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ ಜನರಿಗೆ ತೊಂದರೆ ಉಂಟುಮಾಡಿ ಅವರ ನಂಬಿಕೆ ಕಳೆದುಕೊಂಡಿದೆ. ಜಿಎಸ್‌ಟಿ ನಿರ್ಧಾರದಿಂದ ಮಾರುಕಟ್ಟೆ ಚೇತರಿಸಿಕೊಳ್ಳುವ ಮುನ್ನವೇ ಪೆಟ್ರೋಲ್‌ ದರವನ್ನೂ ಹೆಚ್ಚಿರುವುದು ಕೇಂದ್ರದ ನೀತಿಗೆ ಸಾಕ್ಷಿಯಾಗಿದೆ. ಇದರಿಂದ ಜನಸಾಮಾನ್ಯರು ಬಲಿಪಶುಗಳಾಗುವುದನ್ನು ತಪ್ಪಿಸಬೇಕು,'' ಎಂದು ಒತ್ತಾಯಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ