ಆ್ಯಪ್ನಗರ

ಪ್ರವಾಹ ಸಂಕಷ್ಟ: ಸೆಪ್ಟೆಂಬರ್ 7 ಕ್ಕೆ ರಾಜ್ಯಕ್ಕೆ ಆಗಮಿಸಲಿದೆ ಕೇಂದ್ರದ ಸಮೀಕ್ಷಾ ತಂಡ

ಪ್ರವಾಹ ಹಾನಿ ಪರಿಶೀಲನೆ ನಡೆಸಲು ಸೆಪ್ಟೆಂಬರ್‌ 7 ರಂದು ರಾಜ್ಯಕ್ಕೆ ಕೇಂದ್ರದಿಂದ ಸಮೀಕ್ಷಾ ತಂಡ ಆಗಮಿಸಲಿದೆ. ಕೇಂದ್ರದ ಸಮೀಕ್ಷಾ ತಂಡ ಆಗಮಿಸುವ ಕುರಿತಾಗಿ ಕಂದಾಯ ಸಚಿವ ಆರ್‌. ಅಶೋಕ್ ತಿಳಿಸಿದ್ದಾರೆ.

Vijaya Karnataka Web 3 Sep 2020, 3:15 pm
ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರವಾಹ ಸಂಕಷ್ಟದಿಂದಾಗಿ ಭಾರೀ ಪ್ರಮಾಣದ ನಷ್ಟ ಉಂಟಾಗಿದ್ದು ಈ ನಿಟ್ಟಿನಲ್ಲಿ ಸಮೀಕ್ಷೆ ನಡೆಸಲು ಸೆಪ್ಟೆಂಬರ್‌ 7 ರಂದು ಕೇಂದ್ರದ ಸಮೀಕ್ಷಾ ತಂಡ ರಾಜ್ಯಕ್ಕೆ ಭೇಟಿ ನೀಡಲಿದೆ.
Vijaya Karnataka Web Flood in Karnataka


ಕೇಂದ್ರ ಗೃಹ ಸಚಿವಾಲಯದ ಜಂಟಿ ನಿರ್ದೇಶಕ ಕೆ.ಬಿ ಪ್ರತಾಪ್ ನೇತೃತ್ವದ ಆರು ಮಂದಿ ತಜ್ಞರನ್ನು ಒಳಗೊಂಡ ತಂಡ ಸೋಮವಾರ ರಾಜ್ಯಕ್ಕೆ ಭೇಟಿ ನೀಡಿ ಪ್ರವಾಹದಿಂದ ಹಾನಿಗೊಳಗಾದ ಜಿಲ್ಲೆಗಳಾದ ಕೊಡಗು, ಬೆಳಗಾವಿ, ಬಿಜಾಪುರ ಹಾಗೂ ಬಾಗಲಕೋಟೆಗೆ ಭೇಟಿ ನೀಡಲಿದೆ.

ವಿಧಾನಸೌಧದಲ್ಲಿ ಈ ಕುರಿತಾಗಿ ಮಾಹಿತಿ ನೀಡಿದ ಕಂದಾಯ ಸಚಿವ ಆರ್‌.ಅಶೋಕ್ ಪ್ರವಾಹ ಸಮೀಕ್ಷಾ ತಂಡವನ್ನು ಕಳುಹಿಸಿಕೊಟ್ಟಿದ್ದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿದರು.

ಪ್ರವಾಹ ಸಂಕಷ್ಟ: ರಾಜ್ಯಕ್ಕೆ ಇನ್ನೂ ಬಾರದ ಕೇಂದ್ರದ ಸಮೀಕ್ಷಾ ತಂಡ

ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪಶೀಲಲನೆ ನಡೆಸಿದ ಬಳಿ ಕೇಂದ್ರದ ಸಮೀಕ್ಷಾ ತಂಡವನ್ನು ಕಳಿಸುವಂತೆ ಮನವಿ ಮಾಡಿದ್ದೆವು. ಈ ನಿಟ್ಟಿನಲ್ಲಿ ಕೆ.ಬಿ ಪ್ರತಾಪ್‌ ನೇತೃತ್ವದಲ್ಲಿ 6 ಮಂದಿಯ ತಂಡ ರಾಜ್ಯಕ್ಕೆ ಆಗಮಿಸಿ ಪ್ರವಾಹದ ಹಾನಿ ಸಮೀಕ್ಷೆ ನಡೆಸಲಿದೆ ಎಂದರು.

ಕೇಂದ್ರದ ತಂಡ ಸೋಮವಾರ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರ ಜೊತೆಗೆ ಸಭೆ ನಡೆಸಲಿದೆ. ಸೆಪ್ಟಂಬರ್ 8 ರಂದು ನಾಲ್ಕು ಜಿಲ್ಲೆಗಳಿಗೆ ಭೇಟಿ ನೀಡಲಿದೆ. ಬುಧವಾರದಂದು ಬೆಂಗಳೂರಿನಲ್ಲಿ ಸಭೆ ನಡೆಸಲಿದೆ ಎಂದರು.

ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಎದುರಿಸಲು ಸೂಕ್ತ ಕ್ರಮ, ಆರ್.ಅಶೋಕ್

ಕೇಂದ್ರದ ತಂಡಕ್ಕೆ ಪ್ರವಾಹದಿಂದ ಆಗಿರುವ ಹಾನಿ ಕುರಿತಾಗಿ ಮಾಹಿತಿ ನೀಡಲಿದ್ದೇವೆ, ವಿಡಿಯೋ ಫೋಟೋಗಳನ್ನು ಹಾನಿ ಪ್ರಮಾಣ ಅಂದಾಜಿಸಲು ನೀಡಲಾಗುವುದು ಎಂದರು.

ಪ್ರವಾಹದಿಂದಾಗಿ ರಾಜ್ಯದಲ್ಲಿ ಸುಮಾರು 4,800 ಕೋಟಿ ನಷ್ಟದ ಬಗ್ಗೆ ಅಂದಾಜು ನೀಡಿದ್ದೇವೆ. ಕೇಂದ್ರದ ತಂಡಕ್ಕೂ ಈ ಬಗ್ಗೆ ಮಾಹಿತಿಗಳನ್ನು ರಾಜ್ಯ ಸರ್ಕಾರ ನೀಡಲಿದೆ ಎಂದು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ