ಆ್ಯಪ್ನಗರ

ಮಂದಿರ ನಿರ್ಮಾಣಕ್ಕೆ ಸಾರ್ವತ್ರಿಕ ಮತಗಣನೆಯಾಗಲಿ: ಪೇಜಾವರ ಶ್ರೀ

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಒತ್ತಾಯಿಸಿ ಹೊಸದಿಲ್ಲಿಯಲ್ಲಿ ವಿಎಚ್‌ಪಿ ಆಯೋಜಿಸಿರುವ ಬೃಹತ್ ಜನಾಗ್ರಹ ಸಭೆಯಲ್ಲಿ ಮಾತನಾಡಿದ ಅವರು, ಸಾರ್ವತ್ರಿಕ ಮತಗಣನೆ ಮಾಡಿ ಮಂದಿರ ಕಾರ್ಯ ಆಗಬೇಕು. ರಾಮ ಮಂದಿರ ನಿರ್ಮಾಣಕ್ಕೆ ಕೇಂದ್ರ ಸರಕಾರ ಕೂಡಲೇ ಸುಗ್ರೀವಾಜ್ಞೆ ಹೊರಡಿಸಬೇಕು ಎಂದು ಒತ್ತಾಯಿಸಿದ್ದಾರೆ.

Vijaya Karnataka Web 9 Dec 2018, 8:02 pm
ಬೆಂಗಳೂರು: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಅನುಕೂಲವಾಗುವಂತೆ ಕೇಂದ್ರ ಸರಕಾರ ಗೊತ್ತುವಳಿ ಮಂಡನೆ ಅಥವಾ ಸುಗ್ರೀವಾಜ್ಞೆ ತರಬೇಕು. ಅದು ಸಾಧ್ಯವಿಲ್ಲವೆಂದಾದರೆ ಮಂದಿರ ನಿರ್ಮಾಣಕ್ಕೆ ದೇಶದಲ್ಲಿ ಸಾರ್ವತ್ರಿಕ ಮತಗಣನೆ ಮಾಡಬೇಕು ಎಂದು ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.
Vijaya Karnataka Web Pejawar shree


ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಒತ್ತಾಯಿಸಿ ವಿಎಚ್‌ಪಿ ಆಯೋಜಿಸಿರುವ ಬೃಹತ್ ಜನಾಗ್ರಹ ಸಭೆಯಲ್ಲಿ ಮಾತನಾಡಿದ ಅವರು, ಸಾರ್ವತ್ರಿಕ ಮತಗಣನೆ ಮಾಡಿ ಮಂದಿರ ಕಾರ್ಯ ಆಗಬೇಕು. ರಾಮ ಮಂದಿರ ನಿರ್ಮಾಣಕ್ಕೆ ಕೇಂದ್ರ ಸರಕಾರ ಕೂಡಲೇ ಸುಗ್ರೀವಾಜ್ಞೆ ಹೊರಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಸುಗ್ರೀವಾಜ್ಞೆಗೆ ಕಾಂಗ್ರೆಸ್ ಪಕ್ಷ ವಿರೋಧ ಮಾಡುವುದಿಲ್ಲ. ವಿರೋಧಿಸಿದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಅಧಿಕಾರಕ್ಕೆ ಬರಲು ಅವಕಾಶ ಸಿಗಲ್ಲ. ಮುಸ್ಲಿಮರು ಕೂಡ ಸುಗ್ರೀವಾಜ್ಞೆಗೆ ಬೆಂಬಲ ಸೂಚಿಸಬೇಕು. ಹಿಂದುಗಳ ಜೊತೆ ಮೈತ್ರಿಗೆ ಮುಸ್ಲಿಮರಿಗೆ ಇದು ಅನುಕೂಲಕರವಾಗಲಿದೆ ಎಂದು ಪೇಜಾವರ ಶ್ರೀಗಳು ಅಭಿಪ್ರಾಯಪಟ್ಟಿದ್ದಾರೆ.

ಸುಗ್ರಿವಾಜ್ಞೆಯಿಂದ ಕೇಂದ್ರ ಸರಕಾರ ಪತನವಾದರೂ ಅದು ಬರುವ ಚುನಾವಣೆಯಲ್ಲಿ ಪ್ಲಸ್ ಪಾಯಿಂಟ್ ಆಗಲಿದೆ. ವಿನಃ ಯಾವುದೇ ನಷ್ಟವಾಗುವುದಿಲ್ಲ. ನಾವು ಕೋಮುವಾದಿಗಳಲ್ಲ; ರಾಮವಾದಿಗಳು ಎಂದು ವಿಶ್ವೇಶತೀರ್ಥರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ