ಆ್ಯಪ್ನಗರ

ಸಿಎಎ, ಎನ್‌ಪಿಆರ್‌ ವಿರುದ್ಧ ಹೋರಾಟ: ಜೆಡಿಎಸ್‌ ನಿರ್ಣಯ

ದೇಶದ ಆರ್ಥಿಕ ವ್ಯವಸ್ಥೆ ಕುಸಿದಿದೆ. ನರೇಂದ್ರ ಮೋದಿ ಸರಕಾರದ ನೀತಿ ನಿಯಮಗಳೇ ಆರ್ಥಿಕತೆ ಬೀಳಲು ಕಾರಣ. ದೇಶದ ಜಿಡಿಪಿ 42 ವರ್ಷಗಳಲ್ಲಿ ಅತಿ ಕಡಿಮೆಗೆ ಕುಸಿದಿದೆ. ನೋಟ್ ಬ್ಯಾನ್‌ನಿಂದ ಜನರಿಗೆ ತೊಂದರೆ ಎದುರಾಗಿದೆ.

Vijaya Karnataka Web 11 Feb 2020, 9:45 am
ಬೆಂಗಳೂರು: ದೇಶ್ಯಾದ್ಯಂತ ಸಿಎಎ ವಿರುದ್ದ ಹೋರಾಟಗಳು ನಡೆಯುತ್ತಿವೆ. ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್‌ನಿಂದ ದೇಶದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಹೀಗಾಗಿ ಕೂಡಲೇ ಇವುಗಳನ್ನು ಕೇಂದ್ರ ಸರಕಾರ ಹಿಂಪಡೆಯಬೇಕು ಎಂದು ಜೆಡಿಎಸ್‌ ಒತ್ತಾಯಿಸಿದೆ.
Vijaya Karnataka Web ದೇವೇಗೌಡ
ದೇವೇಗೌಡ


ಜೆಪಿ ಭವನದಲ್ಲಿ ನಡೆದ ಜೆಡಿಎಸ್ ಕಾರ್ಯಕಾರಿಯಲ್ಲಿ ಎರಡು ಮಹತ್ವ ನಿರ್ಣಯ ಮಂಡನೆ ಮಾಡಲಾಗಿದೆ. ಮಂಗಳವಾರ ನಡೆಯುವ ಮಹಾ ಅಧಿವೇಶನದಲ್ಲಿ ನಿರ್ಣಯಗಳ ಅಂಗೀಕಾರ ಮಾಡಲಾಗುವುದು ಎಂದು ಜೆಡಿಎಸ್‌ ಮೂಲಗಳು ತಿಳಿಸಿವೆ.

ಮಂಗಳವಾರ ರಾಷ್ಟ್ರೀಯ ಕಾರ್ಯಕಾರಿಣಿ ಮಹಾ ಅಧಿವೇಶನ ಇದೆ. ಪಕ್ಷದ ಸಭೆಯಲ್ಲಿ ಕೈಗೊಂಡಿರುವ ನಿರ್ಣಯಗಳನ್ನ ಮಹಾ ಅಧಿವೇಶನದಲ್ಲಿ ಅಂಗೀಕಾರ ಮಾಡುತ್ತೀವಿ. ಅರುಣಾಚಲ ಪ್ರದೇಶ, ಕೇರಳ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳಿಂದ ಪದಾಧಿಕಾರಿಗಳು, ಸಮಿತಿ ಸದಸ್ಯರು ಬರ್ತಾರೆ ಎಂದು ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ಎಚ್‌ಡಿ ದೇವೇಗೌಡ ತಿಳಿಸಿದರು.

ದೇಶದ ಆರ್ಥಿಕ ವ್ಯವಸ್ಥೆ ಕುಸಿದಿದೆ. ನರೇಂದ್ರ ಮೋದಿ ಸರಕಾರದ ನೀತಿ ನಿಯಮಗಳೇ ಆರ್ಥಿಕತೆ ಬೀಳಲು ಕಾರಣ. ದೇಶದ ಜಿಡಿಪಿ 42 ವರ್ಷಗಳಲ್ಲಿ ಅತಿ ಕಡಿಮೆಗೆ ಕುಸಿದಿದೆ.
ನೋಟ್ ಬ್ಯಾನ್‌ನಿಂದ ಜನರಿಗೆ ತೊಂದರೆ ಎದುರಾಗಿದೆ. ಜಿಎಸ್‌ಟಿ ಸರಿಯಾಗಿ ಜಾರಿಯಾಗದ ಸಂಕಷ್ಟ ತಂದಿದೆ. ದೇಶದಲ್ಲಿ ಆರ್ಥಿಕತೆ ಕುಸಿತದಿಂದ ಉದ್ಯೋಗ ಸೃಷ್ಟಿ ಆಗ್ತಿಲ್ಲ.
ಮಧ್ಯಮ ವರ್ಗಗಳ ಮೇಲೆ ಹೊರ ಆಗ್ತಿದೆ. ಇದೆಲ್ಲದಕ್ಕೂ ಕಾರಣ ಕೇಂದ್ರ ಸರಕಾರದ ನೀತಿಗಳು ಎಂದು ಜೆಡಿಎಸ್ ದೂರಿದೆ.

ದೇಶದ ಆರ್ಥಿಕತೆ ಅಭಿವೃದ್ಧಿಗೆ ಕೇಂದ್ರ ನೀತಿ ರೂಪಿಸಬೇಕು. ಕಾರ್ಮಿಕ, ಕೈಗಾರಿಕಾ, ಕೃಷಿ ಕಲ್ಯಾಣ ಅಭಿವೃದ್ಧಿಗೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಬಿಎಸ್ ಟಿ ಸಮರ್ಪಕವಾಗಿ ಜಾರಿಗೆ ತಂದು, ಬಾಕಿ ಇರೋ ಹಣ ಸರಕಾರಗಳಿಗೆ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದೆ.

ದೇಶಾದ್ಯಂತ CAA, NRC, NPR ವಿರುದ್ಧ ಪ್ರತಿಭಟನೆ, ಹೋರಾಟ ನಡೆಯುತ್ತಿವೆ. ಕೇಂದ್ರ ಸರಕಾರ ಇದನ್ನು ಹಿಂಪಡೆಯಬೇಕು. ಸಿಎಎ ಹೋರಾಟಕ್ಕೆ ಪ್ರಾದೇಶಿಕ ಪಕ್ಷಗಳು, ಜಾತ್ಯತೀತ ಶಕ್ತಿಗಳು ಒಂದಾಗಿ ಹೋರಾಟ ಮಾಡಬೇಕು. ಮೋದಿ ಸರಕಾರ ಕೂಡಲೇ ಜನಾಭಿಪ್ರಾಯಕ್ಕೆ ಬೆಲೆ‌ ಕೊಟ್ಟು ಕಾಯ್ದೆ ವಾಪಸ್ ಪಡೆಯಬೇಕು ಎಂದು ಜೆಡಿಎಸ್‌ ಒತ್ತಾಯಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ