ಆ್ಯಪ್ನಗರ

ಪ್ರಾರ್ಥನಾ ಸ್ಥಳ ವಿವಾದ: ಚನ್ನಪಟ್ಟಣ ಉದ್ವಿಗ್ನ

ಪಟ್ಟಣದ ಮಂಗಳವಾರಪೇಟೆ ಬಳಿ ನಿರ್ಮಿಸಲಾಗಿರುವ ಕೋರ್ಟ್‌ ಆವರಣಕ್ಕೆ ಹೊಂದಿಕೊಂಡಿರುವ 2.10 ಎಕರೆ ಜಾಗದ ಮೇಲೆ ಹಕ್ಕು ಸ್ಥಾಪಿಸಲು ಎರಡು ಧರ್ಮದವರ ನಡುವೆ ಜಟಾಪಟಿ ಏರ್ಪಟ್ಟಿದ್ದರಿಂದ ಪಟ್ಟಣದಲ್ಲಿ ಗುರುವಾರ ಉದ್ವಿಗ್ನತೆ ಉಂಟಾಗಿತ್ತು. ಕಾಂಪೌಂಡ್‌ ನಿರ್ಮಾಣ ಸಂಬಂಧ ಪರಸ್ಪರ ಕಿತ್ತಾಟಕ್ಕಿಳಿದ ಹಿಂದೂ ಮತ್ತು ಮುಸ್ಲಿಂ ಸಮುದಾಯದವರನ್ನು ಲಘು ಲಾಠಿ ಪ್ರಹಾರ ನಡೆಸಿ ಪೊಲೀಸರು ಚದುರಿಸಿದರು.

Vijaya Karnataka 1 Feb 2019, 5:00 am
ಚನ್ನಪಟ್ಟಣ : ಪಟ್ಟಣದ ಮಂಗಳವಾರಪೇಟೆ ಬಳಿ ನಿರ್ಮಿಸಲಾಗಿರುವ ಕೋರ್ಟ್‌ ಆವರಣಕ್ಕೆ ಹೊಂದಿಕೊಂಡಿರುವ 2.10 ಎಕರೆ ಜಾಗದ ಮೇಲೆ ಹಕ್ಕು ಸ್ಥಾಪಿಸಲು ಎರಡು ಧರ್ಮದವರ ನಡುವೆ ಜಟಾಪಟಿ ಏರ್ಪಟ್ಟಿದ್ದರಿಂದ ಪಟ್ಟಣದಲ್ಲಿ ಗುರುವಾರ ಉದ್ವಿಗ್ನತೆ ಉಂಟಾಗಿತ್ತು. ಕಾಂಪೌಂಡ್‌ ನಿರ್ಮಾಣ ಸಂಬಂಧ ಪರಸ್ಪರ ಕಿತ್ತಾಟಕ್ಕಿಳಿದ ಹಿಂದೂ ಮತ್ತು ಮುಸ್ಲಿಂ ಸಮುದಾಯದವರನ್ನು ಲಘು ಲಾಠಿ ಪ್ರಹಾರ ನಡೆಸಿ ಪೊಲೀಸರು ಚದುರಿಸಿದರು.
Vijaya Karnataka Web channapattana peacefull
ಪ್ರಾರ್ಥನಾ ಸ್ಥಳ ವಿವಾದ: ಚನ್ನಪಟ್ಟಣ ಉದ್ವಿಗ್ನ


ಏನಿದು ಪ್ರಕರಣ?:ಚಿಕ್ಕಮಳೂರು ಗುಂಡುತೋಪಿನ 6.10 ಎಕರೆ ಜಾಗದಲ್ಲಿ ಹಬ್ಬದ ಸಂದರ್ಭಗಳಲ್ಲಿ ಹಿಂದೂ ಮತ್ತು ಮುಸ್ಲಿಮರು ಜಾತ್ರೆ-ಪ್ರಾರ್ಥನೆ ನಡೆಸುತ್ತಿದ್ದರು. ಈ ಜಾಗದಲ್ಲಿ 4 ಎಕರೆಯನ್ನು ಕೋರ್ಟ್‌ ಸಂಕೀರ್ಣ ನಿರ್ಮಾಣಕ್ಕೆ ಬಳಸಿಕೊಂಡು, ಮುಸ್ಲಿಮರಿಗೆ ಪರಾರ‍ಯಯ ಜಾಗ ನೀಡಲಾಗಿತ್ತು. ಉಳಿದ 2.10 ಎಕರೆ ಜಾಗದ ಮೇಲೆ ಮುಸ್ಲಿಮರು ಹಕ್ಕು ಸ್ಥಾಪನೆಗೆ ಮುಂದಾಗಿದ್ದು, ವಿವಾದಕ್ಕೆ ಕಾರಣ. ವಿವಾದಿತ ಜಾಗದಲ್ಲಿ ಕಾಂಪೌಂಡ್‌ ನಿರ್ಮಾಣಕ್ಕೆ ಮುಂದಾದ ಮುಸ್ಲಿಮರನ್ನು ಹಿಂದೂಗಳು ತಡೆದರು. ಆಗ ಜಟಾಪಟಿ ಏರ್ಪಟ್ಟು ಉದ್ವಿಗ್ನತೆ ಮನೆ ಮಾಡಿತ್ತು. ಪೊಲೀಸರ ಮಧ್ಯಪ್ರವೇಶದಿಂದ ಪರಿಸ್ಥಿತಿ ತಿಳಿಗೊಂಡಿತು. ಮೈಸೂರು-ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಹಿಂದೂ ಮುಖಂಡರು, ಜಾಗದ ಯಥಾಸ್ಥಿತಿ ಭರವಸೆ ನೀಡುವಂತೆ ಪೊಲೀಸರನ್ನು ಒತ್ತಾಯಿಸಿದರು. ಹಿರಿಯ ಪೊಲೀಸ್‌ ಅಧಿಕಾರಿಗಳು, ವಕೀಲರ ಸಂಘದ ಪದಾಧಿಕಾರಿಗಳ ಮಧ್ಯಸ್ಥಿಕೆಯಿಂದ ಪರಿಸ್ಥಿತಿ ತಿಳಿಗೊಂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ