ಆ್ಯಪ್ನಗರ

ಮುಖ್ಯಮಂತ್ರಿಯದ್ದು ಸ್ವಯಂ ಪ್ರಮಾಣಪತ್ರ: ಪ್ರಸಾದ್‌ ಟೀಕೆ

ಐಟಿ ಕ್ಷೇತ್ರವೂ ಸೇರಿದಂತೆ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ನಂಬರ್‌ 1 ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಯಂ ಪ್ರಮಾಣ ಪತ್ರ ಪಡೆಯುತ್ತಿದ್ದಾರೆ...

Vijaya Karnataka 8 May 2018, 5:00 am
ಬೆಂಗಳೂರು: ಐಟಿ ಕ್ಷೇತ್ರವೂ ಸೇರಿದಂತೆ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ನಂಬರ್‌ 1 ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಯಂ ಪ್ರಮಾಣ ಪತ್ರ ಪಡೆಯುತ್ತಿದ್ದಾರೆ. ಆದರೆ ವಸ್ತು ಸ್ಥಿತಿ ಬೇರೆಯೇ ಇದೆ ಎಂದು ಕೇಂದ್ರ ಕಾನೂನು ಹಾಗೂ ಐಟಿ ಸಚಿವ ರವಿಶಂಕರ ಪ್ರಸಾದ್‌ ವ್ಯಂಗ್ಯವಾಡಿದ್ದಾರೆ.
Vijaya Karnataka Web character certificate put in his pocket
ಮುಖ್ಯಮಂತ್ರಿಯದ್ದು ಸ್ವಯಂ ಪ್ರಮಾಣಪತ್ರ: ಪ್ರಸಾದ್‌ ಟೀಕೆ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ಕಾನೂನು ಪರಿಭಾಷೆಯಲ್ಲಿ 'ಸೆಲ್ಫ್‌ ಅಸೆಸ್ಮೆಂಟ್‌ ಇಸ್‌ ನೋ ಅಸೆಸ್ಮೆಂಟ್‌' ಎಂಬ ಮಾತಿದೆ. ವಕೀಲ ವೃತ್ತಿಯಿಂದ ಬಂದ ಸಿದ್ದರಾಮಯ್ಯ ಅವರಿಗೆ ಈ ವಿಚಾರದ ಅರಿವಿರಬೇಕು. ಬಂಡವಾಳ ಹೂಡಿಕೆಯಲ್ಲಿ ನಾವೇ ನಂಬರ್‌ 1 ಎಂದು ಹೇಳಿಕೊಳ್ಳುವ ಬದಲು ಐಟಿ ಕ್ಷೇತ್ರದ ಗಣ್ಯರು ಈ ಬಗ್ಗೆ ಉತ್ತರ ನೀಡಲಿ,'' ಎಂದು ಹೇಳಿದರು.
''ತ್ರಿವಳಿ ತಲಾಕ್‌ ನಿಷೇಧ ಕಾಯಿದೆ ಜಾರಿ ಮೂಲಕ ಅಲ್ಪಸಂಖ್ಯಾತ ಮಹಿಳೆಯರ ರಕ್ಷಣೆಗೆ ಬಿಜೆಪಿ ಮುಂದಾಗಿತ್ತು. ಈ ಪ್ರಯತ್ನ ಯಾವುದೇ ಧರ್ಮದ ವಿರುದ್ಧವಾಗಿರಲಿಲ್ಲ. ಮಹಿಳೆಯರ ಹಕ್ಕು ರಕ್ಷಣೆಯ ಉದ್ದೇಶವನ್ನು ಹೊಂದಿತ್ತು. ಆದರೆ ಇದಕ್ಕೂ ವಿರೋಧ ವ್ಯಕ್ತಪಡಿಸಿದ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಈ ಬಗ್ಗೆ ಸ್ಪಷ್ಟನೆ ನೀಡಬೇಕಿದೆ,'' ಎಂದು ಅಭಿಪ್ರಾಯಪಟ್ಟರು.
ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ಹೇಳಿಕೆಗೆ ಪ್ರತಿಕ್ರಿಯಿಸಿ, '' ಪೆಟ್ರೋಲ್‌ ಹಾಗೂ ಡೀಸೆಲ್‌ ಸೆಸ್‌ ಬಗ್ಗೆ ಸಿಂಗ್‌ ಪ್ರಸ್ತಾಪಿಸಿದ್ದರಲ್ಲಿ ಯಾವುದೇ ತರ್ಕ ಅಡಗಿಲ್ಲ. ಭಾರತದಂತ ವಿಶಾಲ ದೇಶದಲ್ಲಿ ಪೆಟ್ರೋಲ್‌ ಸೆಸ್‌ ಮೂಲಕ ಸಂಗ್ರಹಿಸಿದ ಹಣವನ್ನು ರಸ್ತೆ ನಿರ್ಮಾಣ, ಸೇತುವೆ, ಕಟ್ಟಡಗಳ ರಚನೆಗೆ ಬಳಸಲಾಗುತ್ತದೆ,'' ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ