ಆ್ಯಪ್ನಗರ

ಪಂಚಭೂತಗಳಲ್ಲಿ ಚಿದಾನಂದ ಮೂರ್ತಿ ಲೀನ: ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ

ಸಂಪ್ರದಾಯಗಳ ಪ್ರಕಾರ, ವೀರಶೈವ-ಲಿಂಗಾಯತ ಪದ್ದತಿಯಂತೆ ಚಿದಾನಂದ ಮೂರ್ತಿ ಅವರ ದೇಹವನ್ನು ಸಮಾಧಿ ಮಾಡಬೇಕಿತ್ತು. ಆದ್ರೆ, ತಮ್ಮ ಅಂತ್ಯಸಂಸ್ಕಾರವನ್ನು ವಿದ್ಯುತ್‌ ಚಿತಾಗಾರದಲ್ಲೇ ನಡೆಸಬೇಕೆಂದು ಚಿದಾನಂದ ಮೂರ್ತಿ ಮೊದಲೇ ತಿಳಿಸಿದ್ದರು.

Vijaya Karnataka Web 12 Jan 2020, 12:55 pm
ಬೆಂಗಳೂರು: ಸಂಶೋಧಕ ಡಾ. ಎಂ. ಚಿದಾನಂದ ಮೂರ್ತಿ ಅವರ ಅಂತ್ಯಕ್ರಿಯೆ ನೆರವೇರಿದೆ. ಬೆಂಗಳೂರಿನ ಸುಮನಹಳ್ಳಿ ವಿದ್ಯುತ್ ಚಿತಾಗಾರದಲ್ಲಿ ಚಿ.ಮೂ ಅವರ ಅಂತ್ಯ ಸಂಸ್ಕಾರ ನೆರವೇರಿತು. 88 ವರ್ಷ ವಯಸ್ಸಿನ ಚಿದಾನಂದ ಮೂರ್ತಿ, ಶನಿವಾರ ನಿಧನರಾಗಿದ್ದರು.
Vijaya Karnataka Web bsy chimu
ಪಂಚಭೂತಗಳಲ್ಲಿ ಚಿದಾನಂದ ಮೂರ್ತಿ ಲೀನ: ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ


ವಿದ್ಯುತ್ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನೆರವೇರಿಸುವ ಮುನ್ನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಹಲವು ಗಣ್ಯರು ಮೃತರ ಅಂತಿಮ ದರ್ಶನ ಪಡೆದರು. ಸಕಲ ಸರ್ಕಾರಿ ಗೌರವಗಳನ್ನು ನೀಡಲಾಯ್ತು. ಚಿದಾನಂದ ಮೂರ್ತಿ ಅವರ ಬಂಧುಗಳು, ಅಪಾರ ಅಭಿಮಾನಿಗಳು ಆಗಮಿಸಿದ್ದರು. ಚಿದಾನಂದ ಮೂರ್ತಿ ಅವರು ಅಮರರಾಗಿ ಇರಲಿ, ಸಿರಿಗನ್ನಡಂ ಗೆಲ್ಗೆ ಸೇರಿದಂತೆ ಹಲವು ಘೋಷಣೆಗಳನ್ನು ಅಭಿಮಾನಿಗಳು ಕೂಗಿದರು.

ಡಾ.ಚಿದಾನಂದಮೂರ್ತಿ ನಿಧನಕ್ಕೆ ಗಣ್ಯರ ಸಂತಾಪ: ಯಾರುಯಾರು ಏನೇನು ಹೇಳಿದರು?

ಸಂಪ್ರದಾಯಗಳ ಪ್ರಕಾರ, ವೀರಶೈವ-ಲಿಂಗಾಯತ ಪದ್ದತಿಯಂತೆ ಚಿದಾನಂದ ಮೂರ್ತಿ ಅವರ ದೇಹವನ್ನು ಸಮಾಧಿ ಮಾಡಬೇಕಿತ್ತು. ಆದ್ರೆ, ತಮ್ಮ ಅಂತ್ಯಸಂಸ್ಕಾರವನ್ನು ವಿದ್ಯುತ್‌ ಚಿತಾಗಾರದಲ್ಲೇ ನಡೆಸಬೇಕೆಂದು ಚಿದಾನಂದ ಮೂರ್ತಿ ಮೊದಲೇ ತಿಳಿಸಿದ್ದರು. ಹೀಗಾಗಿ, ಅವರ ಕೊನೆಯ ಆಸೆಯಂತೆ ವಿದ್ಯುತ್ ಚಿತಾಗಾರದಲ್ಲೇ ಅಂತ್ಯಸಂಸ್ಕಾರ ನಡೆದಿದೆ.

ಪಂಚಭೂತಗಳಲ್ಲಿ ಚಿದಾನಂದ ಮೂರ್ತಿ ಲೀನ: ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ


ಸಂಶೋಧಕರ ಸಂಶೋಧಕ, ಕನ್ನಡ ಗರುಡ ಡಾ. ಚಿದಾನಂದ ಮೂರ್ತಿ ಅಸ್ತಂಗತ
ಕನ್ನಡ ಚಳವಳಿಗೆ ಹೊಸ ಆಯಾಮ ನೀಡಿದ್ದ ಚಿದಾನಂದ ಮೂರ್ತಿ, ನಾಡಿಗಾಗಿ, ಭಾಷೆಗಾಗಿ, ಭಾರತೀಯ ಸಂಸ್ಕೃತಿಗಾಗಿ ಅಪಾರವಾದ ಕೊಡುಗೆ ಕೊಟ್ಟಿದ್ದಾರೆ. ಇಂದು ಅವರು ನಮ್ಮೊಂದಿಗೆ ಇಲ್ಲದಿದ್ದರೂ ಅವರು ನೀಡಿದ್ದ ಕೊಡುಗೆಗಳು ಎಂದೆಂದಿಗೂ ಅಜರಾಮರ.

ಕನ್ನಡ ಕಾಯಕದಲ್ಲೇ ಆನಂದ ಕಂಡ 'ಚಿದಾನಂದ': ಕನ್ನಡಕ್ಕಾಗಿ ತುಂಗಭದ್ರಾ ನದಿಗೂ ಹಾರಿದ್ದ "ಮೂರ್ತಿ'

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ