ಆ್ಯಪ್ನಗರ

ಹೈಸ್ಕೂಲ್‌ ಓದುತ್ತಿರೋ ದಿನಗಳಲ್ಲಿ ತರಕಾರಿ, ನಿಂಬೆ ಹಣ್ಣು ಮಾರುತ್ತಿದ್ದೆ- ಬಾಲ್ಯದ ದಿನಗಳ ಮೆಲುಕು ಹಾಕಿದ ಬಿಎಸ್‌ವೈ

ಹೈ ಸ್ಕೂಲ್ ಓದುತ್ತಿರುವ ದಿನಗಳಲ್ಲಿ ಮಂಡ್ಯದಲ್ಲಿ ತರಕಾರಿ ನಿಂಬೆ ಹಣ್ಣು ಮಾರಾಟ ಮಾಡುತ್ತಿದ್ದೆ ಎಂದು ಸಿಎಂ ಬಿಎಸ್‌ ಯಡಿಯೂರಪ್ಪ ಅವರು ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡರು. ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಬಡತನ ಸಾಧನೆಗೆ ಅಡ್ಡಿಯಾಗದು ಎಂದರು.

Vijaya Karnataka Web 12 Jan 2020, 3:03 pm
ಬೆಂಗಳೂರು: ಹೈಸ್ಕೂಲ್ ಓದುತ್ತಿರುವ ದಿನಗಳಲ್ಲಿ ತರಕಾರಿ ನಿಂಬೆ ಹಣ್ಣು ಮಾರಾಟ ಮಾಡುತ್ತಿದ್ದೆ ಎಂದು ತನ್ನ ಬಾಲ್ಯದ ದಿನಗಳನ್ನು ಸಿಎಂ ಬಿ.ಎಸ್‌ ಯಡಿಯೂರಪ್ಪ ಮೆಲುಕು ಹಾಕಿಕೊಂಡರು.
Vijaya Karnataka Web chief minister bs yeddyurappa recalled his childhood days
ಹೈಸ್ಕೂಲ್‌ ಓದುತ್ತಿರೋ ದಿನಗಳಲ್ಲಿ ತರಕಾರಿ, ನಿಂಬೆ ಹಣ್ಣು ಮಾರುತ್ತಿದ್ದೆ- ಬಾಲ್ಯದ ದಿನಗಳ ಮೆಲುಕು ಹಾಕಿದ ಬಿಎಸ್‌ವೈ


ಬೆಂಗಳೂರಿನಲ್ಲಿ ನಡೆದ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ಮಂಡ್ಯ ಜಿಲ್ಲೆಯ ಬೂಕನಕೆರೆಯ ಹಳ್ಳಿಯಲ್ಲಿ ಶಾಲೆಯಲ್ಲಿ ಓದುತ್ತಿದ್ದ ಸಂದರ್ಭದಲ್ಲಿ ಕುಟುಂಬದಲ್ಲಿ ಬಡತನವಿದ್ದ ಕಾರಣಕ್ಕಾಗಿ ತರಕಾರಿ, ನಿಂಬೆ ಹಣ್ಣು ಮಾರಾಟ ಮಾಡುತ್ತಾ ಜೀವನ ಮಾಡುತ್ತಿದ್ದೆ ಎಂದು ನೆನೆಸಿಕೊಂಡರು.

ಬಾಲ್ಯದ ದಿನಗಳಲ್ಲಿ ಬಡತನ ಇದ್ದರೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಿರಿಯರ ಮಾರ್ಗದರ್ಶನದಿಂದ ಇಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯವಾಯಿತು . ಬಡತನದ ಹಿನ್ನೆಲೆಯಿಂದ ಬಂದರೂ ರಾಜ್ಯದ ಜನರ ಆಶೀರ್ವಾದದಿಂದ ನಾಲ್ಕು ಬಾರಿ ಸಿಎಂ ಆಗಲು ಅವಕಾಶ ಸಿಕ್ಕಿದೆ ಎಂದರು.

ಕುಮಾರಸ್ವಾಮಿಯವರದ್ದು ಹಿಟ್‌ ಅಂಡ್‌ ರನ್‌ ನಡೆ: ಪ್ರಹ್ಲಾದ್‌ ಜೋಶಿ

ನಾನು ನಡೆದುಕೊಂಡು ಬಂದ ರೀತಿಗೆ ಹೆಮ್ಮೆ ಇದೆ. ನಮ್ಮ ಜೀವನದಲ್ಲಿ ಅಸಾಧ್ಯವಾದುದು ಯಾವುದೂ ಇಲ್ಲ. ಮಕ್ಕಳು ತಂದೆ ತಾಯಿಗಳಿಗೆ ಗೌರವ ತರುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಪೋಷಕರ ಆಸೆ ಆಕಾಂಕ್ಷೆಗಳನ್ನು ಪೂರೈಸಬೇಕು. ದುಡಿದು ನಮ್ಮ ಮನೆಯವರನ್ನು ಸಾಕುವ ಜೊತೆಗೆ ನಾವೂ ಕೂಡಾ ಸ್ವತಂತ್ರ್ಯರಾಗಿ ಬದುಕಬೇಕು ಎಂದು ಯುವಜನರಿಗೆ ಸಿಎಂ ಕಿವಿಮಾತನ್ನು ಹೇಳಿದರು.

ಬಿ.ಎಸ್‌ ಯಡಿಯೂರಪ್ಪನವರು ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆಯ ಬೂಕನಕೆರೆ ಗ್ರಾಮದವರಾಗಿದ್ದಾರೆ. ಮಂಡ್ಯದ ಪಿಇಎಸ್ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣವನ್ನು ಪೂರೈಸಿದ ಅವರು , 1965ರಲ್ಲಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಪ್ರಥಮ ದರ್ಜೆಯ ಗುಮಾಸ್ತರಾಗಿ ವೃತ್ತಿಜೀವನ ಆರಂಭಿಸಿದರು.

ಏಸು ಪ್ರತಿಮೆ ನಿರ್ಮಾಣ ವಿರೋಧಿಸಿ ಬಿಜೆಪಿಯಿಂದ 'ಕನಕಪುರ ಚಲೋ': ಶಾಂತಿ ಕಾಪಾಡಲು ಡಿಕೆಶಿ ಮನವಿ

ನಂತರ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರಕ್ಕೆ ತೆರಳಿ ಅಕ್ಕಿ ಗಿರಣಿಯೊಂದರಲ್ಲಿ ಗುಮಾಸ್ತರಾಗಿ ಸೇರಿದರು.
ಬಿ.ಎಸ್.ವೈ ತಮ್ಮ ಕಾಲೇಜು ದಿನಗಳಲ್ಲೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ( ಆರ್‌ಎಸ್‌ಎಸ್) ಸದಸ್ಯರಾಗಿದ್ದರು. 1970ರಲ್ಲಿ ರಾಷ್ಟ್ರೀಯ ಸ್ವಯಂಸೇವಾ ಸಂಘದ ಶಿಕಾರಿಪುರ ಘಟಕದ ಕಾರ್ಯವಾಹರಾಗಿ ನೇಮಕಗೊಳ್ಳುವ ಮೂಲಕ ಸಾರ್ವಜನಿಕ ಜೀವನ ಪ್ರವೇಶಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ