ಆ್ಯಪ್ನಗರ

ಪಕ್ಷದ ಶಾಸಕರ ಅಹವಾಲು ಕೇಳಿದ ಮುಖ್ಯಮಂತ್ರಿ; ಮಂತ್ರಿಗಳ ಮೇಲೆ ಹೊಂದಾಣಿಕೆ ರಾಜಕೀಯ, ಕಡೆಗಣನೆಯ ಆರೋಪ

ಸಚಿವರಿಗೆ ಸೂಕ್ತ ನಿರ್ದೇಶನ ನೀಡಲಾಗುವುದು. ಕ್ಷೇತ್ರದ ಕೆಲಸ ಮಾಡಿ ಕೊಡುವಂತೆ ಸೂಚಿಸಲಾಗುವುದು. ಟೀಕೆ, ಟಿಪ್ಪಣಿ ಮಾಡುವ ಬದಲು ಅಭಿವೃದ್ಧಿ ಸಂಬಂಧಧಿವಾಗಿ ಚರ್ಚಿಸುವಂತೆ ಸೂಚನೆ ನೀಡಿದರು.

Vijaya Karnataka Web 4 Jan 2021, 11:50 pm
ಬೆಂಗಳೂರು: ಸಚಿವ ಸಂಪುಟದ ಸದಸ್ಯರ ಕಾರ್ಯವೈಖರಿ ಬಗ್ಗೆ ಆಡಳಿತಾರೂಢ ಬಿಜೆಪಿ ಶಾಸಕರಲ್ಲಿ ಅಸಮಾಧಾನ ಮಡುಗಟ್ಟಿರುವುದು ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರು ನಡೆಸಿದ ಸಭೆಯಲ್ಲಿ ಜಾಹೀರಾಗಿದೆ.
Vijaya Karnataka Web ಬಿಎಸ್‌ ಯಡಿಯೂರಪ್ಪ
ಬಿಎಸ್‌ ಯಡಿಯೂರಪ್ಪ


ಯಡಿಯೂರಪ್ಪ ನಾಯಕತ್ವಕ್ಕೆ ನಿಷ್ಠೆ ವ್ಯಕ್ತಪಡಿಸಿರುವ ಶಾಸಕರು ಪ್ರತಿಯೊಂದು ಕೆಲಸಕ್ಕೂ ಸಿಎಂ ಗಮನ ಸೆಳೆಯುವಂತಾಗಿದೆ. ಕೆಲವು ಸಚಿವರ ವರ್ತನೆಯಿಂದ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರು ಹೇಳಿಕೊಂಡಿದ್ದಾರೆ. ಪಕ್ಷದ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದರ ಭಾಗವಾಗಿ ಖಾಸಗಿ ಹೋಟೆಲ್‌ನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಸೋಮವಾರ ಸಭೆ ನಡೆಸಿದರು.

ಸಂಪುಟದ ಸದಸ್ಯರು ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಅವರೂ ಭಾಗಿಯಾಗಿದ್ದರು. ಕಲ್ಯಾಣ ಕರ್ನಾಟಕ, ಮುಂಬಯಿ, ಮಧ್ಯ ಕರ್ನಾಟಕ ಹಾಗೂ ಕರಾವಳಿ ಭಾಗದ ಶಾಸಕರೊಂದಿಗೆ ಸಭೆ ನಡೆಸಲಾಯಿತು. ಮಂಗಳವಾರವೂ ಈ ಸಭೆ ಮುಂದುವರಿಯಲಿದ್ದು, ಬೆಂಗಳೂರು, ಮೈಸೂರು ಮತ್ತು ಇತರ ಭಾಗದ ಶಾಸಕರೊಂದಿಗೆ ಸಿಎಂ ಸಭೆ ನಡೆಸಲಿದ್ದಾರೆ. ಸಚಿವರ ವಿರುದ್ಧ ದೋಷಾರೋಪ ಹೊರಿಸಲು ಶಾಸಕರು ಉತ್ಸಾಹ ತೋರಿದರಾದರೂ ಇದನ್ನು ಬೆಳೆಸಲು ಸಿಎಂ ಅವಕಾಶ ನೀಡಲಿಲ್ಲ.

ಈ ಸಂಬಂಧದಲ್ಲಿ ಸಚಿವರಿಗೆ ಸೂಕ್ತ ನಿರ್ದೇಶನ ನೀಡಲಾಗುವುದು. ಕ್ಷೇತ್ರದ ಕೆಲಸ ಮಾಡಿ ಕೊಡುವಂತೆ ಸೂಚಿಸಲಾಗುವುದು. ಟೀಕೆ, ಟಿಪ್ಪಣಿ ಮಾಡುವ ಬದಲು ಅಭಿವೃದ್ಧಿ ಸಂಬಂಧಧಿವಾಗಿ ಚರ್ಚಿಸುವಂತೆ ಸೂಚನೆ ನೀಡಿದರು. ಈ ನಡುವೆಯೂ ತಾವು ಪ್ರತಿನಿಧಿಸುವ ಕ್ಷೇತ್ರಕ್ಕೆ ಅನುದಾನ ದೊರಕದಿರುವುದು, ಸಚಿವರ ಅಸಹಕಾರದ ಬಗ್ಗೆ ಹೇಳಿಕೊಂಡರು. ಬಹುತೇಕ ಶಾಸಕರು ಪ್ರತ್ಯೇಕವಾಗಿ ಅಭಿಪ್ರಾಯ ಹಂಚಿಕೊಂಡರು ಎಂದು ತಿಳಿದುಬಂದಿದೆ.

ಅಚಲ ನಿಷ್ಠೆ

ಬಹುತೇಕ ಶಾಸಕರು ಬಿಎಸ್‌ವೈ ನಾಯಕತ್ವಕ್ಕೆ ಅಚಲ ನಿಷ್ಠೆ ವ್ಯಕ್ತಪಡಿಸಿದರು. ತಮ್ಮ ನಾಯಕತ್ವದ ಬಗ್ಗೆ ಯಾವುದೇ ತಕರಾರು ಇಲ್ಲ. ತಮ್ಮ ನೇತೃತ್ವದಲ್ಲೆಅಭಿವೃದ್ಧಿ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಸಚಿವರು ಹಾಗೂ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವಂತೆ ಸಿಎಂಗೆ ಒತ್ತಾಯಿಸಿದರು ಎನ್ನಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ