ಆ್ಯಪ್ನಗರ

ಇಂದು ಸಿಎಂ ರಾಜೀನಾಮೆ?

ದೋಸ್ತಿ ಪಕ್ಷಗಳ ಐದಾರು ಶಾಸಕರು ಸೋಮವಾರ ಸ್ಪೀಕರ್‌ಗೆ ರಾಜೀನಾಮೆ ಸಲ್ಲಿಸಿದರೆ ಮುಖ್ಯಮಂತ್ರಿ ಎಚ್‌ಡಿ...

Vijaya Karnataka 8 Jul 2019, 5:00 am
ಬೆಂಗಳೂರು: ದೋಸ್ತಿ ಪಕ್ಷಗಳ ಐದಾರು ಶಾಸಕರು ಸೋಮವಾರ ಸ್ಪೀಕರ್‌ಗೆ ರಾಜೀನಾಮೆ ಸಲ್ಲಿಸಿದರೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ರಾಜೀನಾಮೆ ಸಲ್ಲಿಸುವುದು ಅನಿವಾರ್ಯವಾಗುತ್ತದೆ.
Vijaya Karnataka Web BNG-0707-2-2-HDK 1


ಈಗಾಗಲೇ 13 ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದ ದೋಸ್ತಿಗಳ ಸಂಖ್ಯಾಬಲ 119 ರಿಂದ 106ಕ್ಕೆ ಇಳಿದಿರುವುದರಿಂದ ಅಲ್ಪಮತಕ್ಕೆ ಕುಸಿದಿದೆ. ಒಂದು ವೇಳೆ ಸೋಮವಾರ ಮತ್ತಷ್ಟು ಶಾಸಕರು ರಾಜೀನಾಮೆ ಸಲ್ಲಿಸಿದರೆ ಸರಕಾರ ಬಹುಮತ ಕಳೆದುಕೊಂಡಂತಾಗಲಿದೆ. ಅಲ್ಲಿಗೆ ದೋಸ್ತಿಗಳ ಎಲ್ಲಾ ಕಸರತ್ತುಗಳು ಬಂದ್‌ ಆಗಲಿವೆ. ಇದರೊಂದಿಗೆ ಸಿಎಂಗೆ ರಾಜೀನಾಮೆ ನೀಡುವುದು ಅನಿವಾರ್ಯವಾಗುತ್ತದೆ.

ಅಮೆರಿಕದಿಂದ ಬಂದ ಸಿಎಂ: ಫಲ ನೀಡದ ಸಭೆ

ಅಮೆರಿಕದಿಂದ ವಾಪಸಾದ ಸಿಎಂ ಕುಮಾರಸ್ವಾಮಿ ಅವರು ಖಾಸಗಿ ಹೋಟೆಲ್‌ನಲ್ಲಿ ಕಾಂಗ್ರೆಸ್‌ ನಾಯಕರ ಜತೆ ನಡೆಸಿದ ಮಾತುಕತೆಯಲ್ಲಿ ಒಮ್ಮತದ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ. ಕೆ.ಸಿ.ವೇಣುಗೋಪಾಲ್‌, ಸಿದ್ದರಾಮಯ್ಯ, ಡಾ.ಜಿ.ಪರಮೇಶ್ವರ್‌, ಎಂ.ಬಿ.ಪಾಟೀಲ್‌, ಎಚ್‌.ಕೆ.ಪಾಟೀಲ್‌ ಸೇರಿದಂತೆ ಹಲವರೊಂದಿಗೆ ಶಾಸಕರ ರಾಜೀನಾಮೆ ಸೇರಿದಂತೆ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಚರ್ಚಿಸಿದರು. ಸಚಿವ ಸ್ಥಾನದ ಆಫರ್‌ ಮೂಲಕ ಅತೃಪ್ತರ ಮನವೊಲಿಕೆ ಬಗ್ಗೆ ಚರ್ಚೆ ನಡೆದರೂ ಅತೃಪ್ತರು ಸಂಧಾನ ಸೂತ್ರ ತಿರಸ್ಕರಿಸಿರುವುದರಿಂದ ಸರಕಾರದ ಮುಂದೆ ಆಯ್ಕೆಗಳು ಕಡಿಮೆ ಇವೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಇನ್ನಷ್ಟು ಶಾಸಕರು ರಾಜೀನಾಮೆ ನೀಡದಂತೆ ತಡೆಯುವುದಕ್ಕೆ ಆದ್ಯತೆ ಕೊಡಬೇಕು, ಸ್ಪೀಕರ್‌ ರಾಜೀನಾಮೆ ಅಂಗೀಕರಿಸದಂತೆ ಕಾನೂನಾತ್ಮಕ ಕ್ರಮಗಳ ಮೂಲಕ ತಡೆ ಹಿಡಿಯಬೇಕು ಎಂಬ ಬಗ್ಗೆ ಚರ್ಚೆ ನಡೆಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ