ಆ್ಯಪ್ನಗರ

ಡ್ರಗ್ಸ್‌ ಪ್ರಕರಣ: ಬಾಲಿವುಡ್ ನಟ ವಿವೇಕ್ ಒಬೆರಾಯ್ ಪತ್ನಿಗೆ ಬೆಂಗಳೂರು ಸಿಸಿಬಿ ಪೊಲೀಸರಿಂದ ನೋಟಿಸ್‌!

ನಟ ವಿವೇಕ್ ಒಬೆರಾಯ್ ಅವರ ಪತ್ನಿ ಪ್ರಿಯಾಂಕ ಆಳ್ವಾ ಒಬೆರಾಯ್‌ಗೆ ಸಿಸಿಬಿ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಿದ್ದಾರೆ. ಸ್ಯಾಂಡಲ್‌ವುಡ್‌ ಡ್ರಗ್ಸ್‌ ಪ್ರಕರಣದ ಪ್ರಮುಖ ಆರೋಪಿ ಆದಿತ್ಯಾ ಆಳ್ವಾ ಅವರ ಸಹೋದರಿ ಆಗಿರುವ ಹಿನ್ನೆಲೆ ಹಾಗೂ ನಿರಂತರ ಸಂಪರ್ಕದಲ್ಲಿರುವ ಶಂಕೆ ಹಿನ್ನೆಲೆ ಪ್ರಿಯಾಂಕ ಅವರಿಗೆ ನೋಟಿಸ್‌ ಜಾರಿಗೊಳಿಸಲಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

Vijaya Karnataka Web 16 Oct 2020, 12:08 pm
ಬೆಂಗಳೂರು: ಸ್ಯಾಂಡಲ್‌ವುಡ್ ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಾಲಿವುಡ್ ನಟ ವಿವೇಕ್ ಒಬೆರಾಯ್ ಅವರ ಮನೆಯ ಮೇಲೆ ಗುರುವಾರ ದಾಳಿ ನಡೆಸಿದ ಬೆಂಗಳೂರು ನಗರ ಅಪರಾಧ ವಿಭಾಗದ ಪೊಲೀಸರು ಇದೀಗ ಅವರ ಪತ್ನಿಗೆ ನೋಟಿಸ್‌ ಜಾರಿಗೊಳಿಸಿದ್ದಾರೆ.
Vijaya Karnataka Web Vivek Oberoi; (Inset) Aditya Alva
Bengaluru CCB search actor Vivek Oberoi's house


ನಟ ವಿವೇಕ್ ಒಬೆರಾಯ್ ಅವರ ಪತ್ನಿ ಪ್ರಿಯಾಂಕ ಆಳ್ವಾ ಒಬೆರಾಯ್‌ಗೆ ಸಿಸಿಬಿ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಿದ್ದಾರೆ. ಸ್ಯಾಂಡಲ್‌ವುಡ್‌ ಡ್ರಗ್ಸ್‌ ಪ್ರಕರಣದ ಪ್ರಮುಖ ಆರೋಪಿ ಆದಿತ್ಯಾ ಆಳ್ವಾ ಅವರ ಸಹೋದರಿ ಆಗಿರುವ ಹಿನ್ನೆಲೆ ಹಾಗೂ ನಿರಂತರ ಸಂಪರ್ಕದಲ್ಲಿರುವ ಶಂಕೆ ಹಿನ್ನೆಲೆ ಪ್ರಿಯಾಂಕ ಅವರಿಗೆ ನೋಟಿಸ್‌ ಜಾರಿಗೊಳಿಸಲಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ಸ್ಯಾಂಡಲ್‌ವುಡ್‌ ಡ್ರಗ್‌ ಪ್ರಕರಣದಲ್ಲಿ ಸಿಸಿಬಿಗೆ ಆದಿತ್ಯ ಆಳ್ವಾ ಬೇಕಾಗಿದ್ದು ಘಟನೆ ಬಳಿಕ ತಲೆಮರೆಸಿಕೊಂಡಿದ್ದಾರೆ. ಇನ್ನು ಆದಿತ್ಯಾ ಆಳ್ವಾ ಬೆನ್ನತ್ತಿರುವ ಸಿಸಿಬಿ, ವಿವೇಕ್ ಒಬೆರಾಯ್ ಅವರು ಆಳ್ವಾಗೆ ಆಶ್ರಯ ನೀಡೀದ್ದಾರೆಂಬ ಸಂದೇಹ ಹಿನ್ನೆಲೆ ಗುರುವಾರ ಅವರ ಮುಂಬೈ ನಿವಾಸದ ಮೇಲೆ ದಾಳಿ ನಡೆಸಲಾಯಿತು.

ಆದಿತ್ಯ ಆಳ್ವ ಬೆನ್ನತ್ತಿದ ಸಿಸಿಬಿ, ಮುಂಬಯಿಯ ವಿವೇಕ್‌ ಒಬೆರಾಯ್‌‌ ಮನೆಯಲ್ಲಿ ಶೋಧ

ಕೋರ್ಟ್‌ನಿಂದ ಸರ್ಚ್‌ ವಾರಂಟ್‌ ಪಡೆದು ಶೋಧ ಕಾರ್ಯ ನಡೆಸಲಾಯಿತು. ಮೂಲಗಳ ಪ್ರಕಾರ ವಿವೇಕ್‌ ಒಬೆರಾಯ್‌ ಹಾಗೂ ಪ್ರಿಯಾಂಕ ಆಳ್ವಾ ಸಿಸಿಬಿ ಪೊಲೀಸರಲ್ಲಿ ದರ್ಪ ತೋರಿದ್ದಾರೆ ಎನ್ನಲಾಗಿದೆ. ಅಲ್ಲದೇ ಪ್ರಿಯಾಂಕ ಅವರಿಗೆ ಸಹೋದರನ ಬಗ್ಗೆ ಮಾಹಿತಿ ಇದೆ ಎನ್ನುವ ಅನುಮಾನ ವ್ಯಕ್ತವಾಗಿದೆಯಂತೆ. ಜನತಾ ಪರಿವಾರದ ಹಿರಿಯ ರಾಜಕಾರಣಿ ಹಾಗೂ ಮಾಜಿ ಸಚಿವ ಜೀವರಾಜ್ ಆಳ್ವ ಅವರ ಪುತ್ರ ಆದಿತ್ಯಾ ಆಳ್ವ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ