ಆ್ಯಪ್ನಗರ

ಸಚಿವ ಜಾರ್ಜ್‌, ಶಾಸಕ ಬೈರತಿ ಜಟಾಪಟಿ

ರಾಜ್ಯ ಸಾಬೂನು ಮತ್ತು ಮಾರ್ಜಕ ಸಂಸ್ಥೆಯ (ಕೆಎಸ್‌ಡಿಎಲ್‌) ವ್ಯವಸ್ಥಾಪಕ ನಿರ್ದೇಶಕರ ವರ್ಗಾವಣೆ ವಿಚಾರದಲ್ಲಿ ಕೈಗಾರಿಕಾ ಸಚಿವ ಕೆ.ಜೆ. ಜಾರ್ಜ್‌ ಹಾಗೂ ಸಂಸ್ಥೆಯ ಅಧ್ಯಕ್ಷ ಬೈರತಿ ಬಸವರಾಜು ನಡುವಿನ ಸಂಘರ್ಷ ತಾರಕಕ್ಕೇರಿದೆ.

Vijaya Karnataka 6 Jul 2019, 5:00 am
ಬೆಂಗಳೂರು : ರಾಜ್ಯ ಸಾಬೂನು ಮತ್ತು ಮಾರ್ಜಕ ಸಂಸ್ಥೆಯ (ಕೆಎಸ್‌ಡಿಎಲ್‌) ವ್ಯವಸ್ಥಾಪಕ ನಿರ್ದೇಶಕರ ವರ್ಗಾವಣೆ ವಿಚಾರದಲ್ಲಿ ಕೈಗಾರಿಕಾ ಸಚಿವ ಕೆ.ಜೆ. ಜಾರ್ಜ್‌ ಹಾಗೂ ಸಂಸ್ಥೆಯ ಅಧ್ಯಕ್ಷ ಬೈರತಿ ಬಸವರಾಜು ನಡುವಿನ ಸಂಘರ್ಷ ತಾರಕಕ್ಕೇರಿದೆ.
Vijaya Karnataka Web clash between jorge and mla basavaraju
ಸಚಿವ ಜಾರ್ಜ್‌, ಶಾಸಕ ಬೈರತಿ ಜಟಾಪಟಿ


ಜಾರ್ಜ್‌ ಹಾಗೂ ಬಸವರಾಜು ಇಬ್ಬರೂ ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತ ಬಳಗದವರಾಗಿದ್ದಾರೆ. ಕೆಎಸ್‌ಡಿಎಲ್‌ ವ್ಯವಸ್ಥಾಪಕ ನಿರ್ದೇಶಕ ಎಂ.ಆರ್‌. ರವಿಕುಮಾರ್‌ ವರ್ಗವಾಗುವಂತೆ ಬೈರತಿ ನೋಡಿಕೊಂಡಿದ್ದರು. ರವಿಕುಮಾರ್‌ ಜಾಗಕ್ಕೆ ವಿಜಯ್‌ಕುಮಾರ್‌ ಶೆಟ್ಟಿ ಅವರನ್ನು ನೇಮಿಸುವ ತೀರ್ಮಾನವೂ ಆಗಿತ್ತು. ಆದರೆ, ಇದಕ್ಕೆ ಜಾರ್ಜ್‌ ತಡೆ ನೀಡಿದ್ದರಿಂದ ಬೈರತಿ ಗರಂ ಆಗಿದ್ದಾರೆ. ಜತೆಗೆ ಸಿದ್ದರಾಮಯ್ಯ ಅವರಿಗೂ ದೂರು ನೀಡಿದ್ದಾರೆ ಎಂದು ಗೊತ್ತಾಗಿದೆ. ಈ ವರ್ಗಾವಣೆ ವಿವಾದದ ಹಿನ್ನೆಲೆಯಲ್ಲಿ ಜಾರ್ಜ್‌ ಮತ್ತು ಬೈರತಿ ಬಸವರಾಜು ಪರಸ್ಪರ ಬೈದಾಡಿಕೊಂಡಿದ್ದರು. ಸಚಿವ ಸ್ಥಾನದ ಪ್ರಭಾವ ಬಳಸಿದ ಜಾರ್ಜ್‌ ಅವರು ರವಿಕುಮಾರ್‌ ಎತ್ತಂಗಡಿಯಾಗದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಬೈರತಿ ಅವರಿಗೆ ಕೋಪ ತರಿಸಿದೆ ಎನ್ನಲಾಗಿದೆ.

ಕಾರು ಹಿಂದಿರುಗಿಸಿದ ಬೈರತಿ

ಜಾರ್ಜ್‌ ಜತೆಗಿನ ಜಟಾಪಟಿ ಮುಂದುವರಿಸಿರುವ ಬೈರತಿ ಬಸವರಾಜು ಕೆಎಸ್‌ಡಿಎಲ್‌ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಈಗಾಗಲೇ ಸಂಸ್ಥೆಯಿಂದ ನೀಡಲಾಗಿದ್ದ ವಾಹನ ಹಿಂದಿರುಗಿಸಿದ್ದಾರೆ. ಈ ಸಮಸ್ಯೆ ಇತ್ಯರ್ಥಗೊಳ್ಳದಿದ್ದರೆ ಸಂಸ್ಥೆಯ ಅಧ್ಯಕ್ಷ ಹುದ್ದೆ ತೊರೆಯುವುದಾಗಿ ಸಿದ್ದರಾಮಯ್ಯ ಬಳಿ ಹೇಳಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ