ಆ್ಯಪ್ನಗರ

ಕೊರೊನಾ ಬುಲೆಟಿನ್‌ ಆಗಿದೆ ಸ್ಕೋರ್‌ ಬೋರ್ಡ್‌..! ರಾಜ್ಯದಲ್ಲಿ ಶುರುವಾಗಿದೆ ವೈರಸ್‌ ಬೆಟ್ಟಿಂಗ್‌

ಕೊರೊನಾ ವೈರಸ್‌ ಕಾರಣದಿಂದಾಗಿ ವಿಶ್ವದೆಲ್ಲೆಡೆ ಕ್ರೀಡಾ ಚಟುವಟಿಕೆಗಳು ಸ್ಥಗಿತಗೊಂಡಿವೆ. ಇದು ಬೆಟ್ಟಿಂಗ್‌ ಪ್ರಿಯರಿಗೆ ಭಾರೀ ಹೊಡೆತ ನೀಡಿದೆ. ಈ ಸಮಸ್ಯೆಗೆ ಕೊರೊನಾ ವೈರಸ್‌ನ್ನೆ ಸ್ಕೋರ್‌ ಬೋರ್ಡ್‌ ಮಾಡಿಕೊಂಡಿರುವ ಜನ ಕೇಸ್‌ಗಳ ಮೇಲೆಯೇ ಬೆಟ್ಟಿಂಗ್‌ ನಡೆಸಿದ್ದು, ರಾಜ್ಯದ ಗ್ರಾಮೀಣ ಭಾಗದಲ್ಲಿ ಕೊರೊನಾ ಬಾಜಿ ಜೋರಾಗಿದೆ.

Vijaya Karnataka Web 10 Jul 2020, 5:30 pm
ಬೆಂಗಳೂರು: ಕೊರೊನಾ ವೈರಸ್‌ನಿಂದ ಕ್ರಿಕೆಟ್‌ ಸೇರಿ ಹಲವು ಕ್ರೀಡಾ ಚಟುವಟಿಕೆಗಳು ಸ್ಥಗಿತಗೊಂಡಿವೆ. ಇದು ಬೆಟ್ಟಿಂಗ್‌ ಪ್ರಿಯರಿಗೆ ಭಾರಿ ನಿರಾಸೆ ಮೂಡಿಸಿತ್ತು. ಆದರೆ, ಈ ನಿರಾಸೆಗೆ ಬೆಟ್ಟಿಂಗ್‌ ಪ್ರಿಯರು ಕೊರೊನಾ ಮೂಲಕ ಪರಿಹಾರ ಕಂಡುಕೊಂಡಿದ್ದಾರೆ. ರಾಜ್ಯದಲ್ಲಿ ಈಗ ಕೊರೊನಾ ಮೇಲೆ ಬೆಟ್ಟಿಂಗ್‌ ಜೋರಾಗಿದ್ದು, ಕೇಸ್‌ಗಳು ಒಂದಿಷ್ಟು ಜನರಿಗೆ ಆದಾಯದ ಮೂಲವಾಗಿವೆ.
Vijaya Karnataka Web close of sports activities people now betting on coronavirus cases
ಕೊರೊನಾ ಬುಲೆಟಿನ್‌ ಆಗಿದೆ ಸ್ಕೋರ್‌ ಬೋರ್ಡ್‌..! ರಾಜ್ಯದಲ್ಲಿ ಶುರುವಾಗಿದೆ ವೈರಸ್‌ ಬೆಟ್ಟಿಂಗ್‌


ಇವತ್ತು ಎಷ್ಟು ಕೇಸ್‌ ಬರುತ್ತವೆ..? ಯಾವ ಜಿಲ್ಲೆಯಲ್ಲಿ ಹೆಚ್ಚಿನ ಕೊರೊನಾ ಪ್ರಕರಣಗಳು ವರದಿಯಾಗುತ್ತವೆ..? ಎಂಬ ಪ್ರಶ್ನೆಗಳೇ ಬೆಟ್ಟಿಂಗ್‌ನಲ್ಲಿ ಕೇಳಿಬರುತ್ತಿದ್ದು, ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಜನ ಬಾಜಿ ಕಟ್ಟುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಕ್ರಿಕೆಟ್‌ ಬೆಟ್ಟಿಂಗ್‌ನ ಕೊರತೆಯನ್ನು ಕೊರೊನಾ ನೀಗಿಸುತ್ತಿದ್ದು, ಈ ಮೂಲಕ ಹಣ ಕೈ-ಕೈ ಬದಲಾಗುತ್ತಿದೆ.

ಊರೊಂದರ ಟೀ ಅಂಗಡಿ ಮುಂದೆ ಕುಳಿತಿದ್ದ ವ್ಯಕ್ತಿಯೊಬ್ಬ ಇವತ್ತು ಕರ್ನಾಟಕದಲ್ಲಿ ಒಂದೂವರೆ ಸಾವಿರ ಕೇಸ್‌ ಪತ್ತೆಯಾಗುತ್ತವೆ ಎಂದರೆ, ಮತ್ತೊಬ್ಬ ವ್ಯಕ್ತಿ ಇಲ್ಲ.. ಇಲ್ಲ.. 2000 ಪ್ರಕರಣ ಸಿಗುತ್ತವೆ. ಬೆಟ್‌ ಎಷ್ಟು ಅಂತಾ 500 ರೂ. ಬಾಜಿ ಕಟ್ಟುವ ದೃಶ್ಯಗಳು ರಾಜ್ಯದಲ್ಲಿ ಸಾಮಾನ್ಯವಾಗಿದ್ದು, ಕೊರೊನಾದಿಂದ ಹೊಸ ಬೆಟ್ಟಿಂಗ್‌ ವಿಧಾನ ಹುಟ್ಟಿಕೊಂಡಂತಾಗಿದೆ.

ನಗರದಲ್ಲಿ ಐಪಿಎಲ್‌ ಬೆಟ್ಟಿಂಗ್‌ ದಂಧೆ: ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಏಪ್ರಿಲ್‌, ಮೇ, ಜೂನ್‌ನಲ್ಲಿ ಭಾರತದಲ್ಲಿ ಕ್ರಿಕೆಟ್‌ ಹಬ್ಬ ಐಪಿಎಲ್‌ ನಡೆಯುತ್ತಿತ್ತು. ಬೆಟ್ಟಿಂಗ್‌ ಮೂಲಕವೇ ಲಕ್ಷಾಂತರ ಕೋಟಿ ರೂಪಾಯಿ ವ್ಯವಹಾರ ನಡೆಯುತ್ತಿತ್ತು. ಆದರೆ, ಈ ಸಲ ಕೊರೊನಾ ಕಾರಣದಿಂದ ಕ್ರಿಕೆಟ್‌ ಸೇರಿ ಎಲ್ಲ ಕ್ರೀಡಾ ಚಟುವಟಿಕೆಗಳಿಗೆ ಬ್ರೇಕ್‌ ಬಿದ್ದಿರುವುದರಿಂದ ಬೆಟ್ಟಿಂಗ್‌ ಪ್ರಿಯರು ಹೊಸ ಮಾರ್ಗ ಹುಡುಕಿಕೊಂಡಿದ್ದಾರೆ. ಜನ 100, 500 ರೂ.ಗಳಷ್ಟು ಕಡಿಮೆ ಬೆಟ್ಟಿಂಗ್‌ ನಡೆಯುತ್ತಿದೆ. ಜೊತೆಗೆ ಡಿಜಿಟಲ್‌ ಪೇಮೆಂಟ್‌ಗಳ ಮೂಲಕ ಹಣ ಪಾವತಿಸುವುದರಿಂದ ಪೊಲೀಸರ ಕಣ್ಣಿಗೂ ಕೊರೊನಾ ಬೆಟ್ಟಿಂಗ್‌ ಬಿದ್ದಿಲ್ಲ.

ಸಿಬ್ಬಂದಿಗೆ ಕೊರೊನಾ ಸೋಂಕು; ಬೆಂಗಳೂರು ನಗರ ಪೊಲೀಸ್‌ ಆಯುಕ್ತರ ಕಚೇರಿ ಮತ್ತೆ 4 ದಿನ ಸೀಲ್‌ಡೌನ್‌‌

ಕೊರೊನಾ ಬೆಟ್ಟಿಂಗ್‌ ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಕಂಡುಬರದಿದ್ದರೂ ಹಳೇ ಮೈಸೂರು ಪ್ರಾಂತ್ಯ ಹಾಗೂ ಉತ್ತರ ಕರ್ನಾಟಕದ ವಿವಿಧ ಹಳ್ಳಿಗಳಲ್ಲಿ ಕಾಣುತ್ತಿದೆ. ಜನ ಕೊರೊನಾ ಕೇಸ್‌ಗಳ ಸಂಖ್ಯೆಯ ಮೂಲಕ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದ್ದಾರೆ. ನಗರದಿಂದ ಊರುಗಳಿಗೆ ತೆರಳಿರುವ ಯುವಕರು ಈ ಬೆಟ್ಟಿಂಗ್‌ನಲ್ಲಿ ತೊಡಗಿಸಿಕೊಂಡಿರುವುದು ಬಹಿರಂಗವಾಗಿದೆ.

30 ಸಾವಿರ ಗಡಿ ದಾಟಿದ ಕೊರೊನಾ: ಗುಣವಾಗುವರ ಸಂಖ್ಯೆಯಲ್ಲೂ ಹೆಚ್ಚಳ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ