ಆ್ಯಪ್ನಗರ

ಧವಳಗಿರಿಯಲ್ಲಿ ಸಿಎಂ ವಿಶ್ರಾಂತಿ: ನಿಗದಿಯಾಗಿದ್ದ ಕಾರ್ಯಕ್ರಮಗಳು ರದ್ದು

ಸಿಎಂ ಬಿಎಸ್‌ ಯಡಿಯೂರಪ್ಪ ಬುಧವಾರ ಯಾವುದೇ ರಾಜಕೀಯ ಹಾಗೂ ಆಡಳಿತಾತ್ಮಕ ಕಾರ್ಯಕ್ರಮದಲ್ಲಿ ಭಾಗಿಯಾಗದೆ ವಿಶ್ರಾಂತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಸಿಎಂ ಬದಲಾಗಿ ಡಿಸಿಎಂ ಡಾ. ಆಶ್ವತ್ ನಾರಾಯಣ್ ನಿಗದಿಯಾಗಿರುವ ಸಭೆಯನ್ನು ನಡೆಸಿಕೊಡಲಿದ್ದಾರೆ.

Vijaya Karnataka Web 8 Jan 2020, 11:23 am
ಬೆಂಗಳೂರು: ಬಿರುಸಿನ ರಾಜಕೀಯ ಚಟುವಟಿಕೆ ಹಾಗೂ ಓಡಾಟದ ಹಿನ್ನೆಲೆಯಲ್ಲಿ ಸಿಎಂ ಆರೋಗ್ಯ ದಣಿದಿದ್ದು ವೈದ್ಯರ ಸಲಹೆಯ ಮೇರೆಗೆ ಸಿಎಂ ಬಿಎಸ್‌ ಯಡಿಯೂರಪ್ಪ ವಿಶ್ರಾಂತಿಯ ಮೊರೆ ಹೋಗಿದ್ದಾರೆ. ನಿಗದಿಯಾಗಿದ್ದ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ತಮ್ಮ ಅಧಿಕೃತ ನಿವಾಸದಲ್ಲಿ ಬುಧವಾರ ಇಡೀ ದಿನ ವಿಶ್ರಾಂತಿಯನ್ನು ಪಡೆದುಕೊಳ್ಳಲಿದ್ದಾರೆ.
Vijaya Karnataka Web cm bs yeddyurappa in rest at his home will not attend any program
ಧವಳಗಿರಿಯಲ್ಲಿ ಸಿಎಂ ವಿಶ್ರಾಂತಿ: ನಿಗದಿಯಾಗಿದ್ದ ಕಾರ್ಯಕ್ರಮಗಳು ರದ್ದು


ಭಾರತ್ ಬಂದ್ 2020 : ರಾಜ್ಯದಲ್ಲಿ ಮುಷ್ಕರದ ಎಫೆಕ್ಟ್ ಹೇಗಿದೆ ?

ಬುಧವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಪ್ರಮುಖ ಸಭೆಗಳು ನಿಗದಿಯಾಗಿತ್ತು. ಕೆಂಪೇಗೌಡ ಅಭಿವೃದ್ದಿ ಪ್ರಾಧಿಕಾರದ ವತಿಯಿಂದ ನಾಡಪ್ರಭು ಕೆಂಪೇಗೌಡರ ಪಾರಂಪರಿಕ ತಾಣಗಳನ್ನು ಅಭಿವೃದ್ದಿಪಡಿಸುವ ಕುರಿತಾಗಿ ಚರ್ಚೆ, ರೋರಿಕ್‌ ಹಾಗೂ ದೇವಿಕಾ ರಾಣಿ ರೋರಿಕ್‌ ಎಸ್ಟೇಟ್ ಅಭಿವೃದ್ದಿ ಕುರಿತಾಗಿ ಚರ್ಚೆ ಹಾಗೂ ಹೆಸರುಘಟ್ಟದ ಸರ್ಕಾರಿ ಫಿಲ್ಮ್ ಇನ್ಟಿಟ್ಯೂಟ್ ಅಭಿವೃದ್ದಿ ವಿಚಾರಗಳ ಕುರಿತಾಗಿ ಸಭೆ ನಿಗದಿಯಾಗಿತ್ತು.

ಕಾರ್ಮಿಕರ ಮುಷ್ಕರ LIVE: ರಾಮನಗರದಲ್ಲಿ ಪ್ರತಿಭಟನೆಗೆ ಅವಕಾಶವಿಲ್ಲ

ಆದರೆ ವೈದ್ಯರು ಸಿಎಂ ಬಿಎಸ್‌ವೈಗೆ ವಿಶ್ರಾಂತಿ ಪಡೆದುಕೊಳ್ಳಲು ಸೂಚನೆ ನೀಡಿದ್ದರಿಂದ ನಿಗದಿಯಾಗಿದ್ದ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದಾರೆ. ಆದರೆ ಸಿಎಂ ಬದಲಾಗಿ ಡಿಸಿಎಂ ಡಾ. ಅಶ್ವಥ್ ನಾರಾಯಣ್ ಸಭೆಗಳನ್ನು ನಡೆಸಿಕೊಡಲಿದ್ದಾರೆ ಎಂದು ಸಿಎಂ ಕಚೇರಿ ಮಾಧ್ಯಮ ಪ್ರಕಟಣೆಯ ಮೂಲಕ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ