ಆ್ಯಪ್ನಗರ

ಮೊನ್ನೆ ಕೇಂದ್ರ ಕೊಟ್ಟಿದ್ದು 669 ಕೋಟಿ ರೂ. ಮಾತ್ರವೆಂದು ಖಚಿತ ಪಡಿಸಿದ ಬಿಎಸ್‌ವೈ

ಕೇಂದ್ರ ಸರಕಾರ ಬಿಡುಗಡೆ ಮಾಡಿದ ರಾಜ್ಯ ನೆರೆ ಪರಿಹಾರದ ಕುರಿತಾದ ಗೊಂದಲಗಳಿಗೆ ಸ್ವತಃ ಸಿಎಂ ಬಿಎಸ್‌ ಯಡಿಯೂರಪ್ಪ ತೆರೆ ಎಳೆದಿದ್ದಾರೆ. ಎರಡನೇ ಹಂತದಲ್ಲಿ ಕೇಂದ್ರ ಸರಕಾರ 1800 ಕೋಟಿ ರೂ. ಬಿಡುಗಡೆ ಮಾಡಿದೆ ಎಂಬ ವರದಿಗಳು ಹರಿದಾಡಿದ್ದವು. ಆದರೆ 2ನೇ ಹಂತದಲ್ಲಿ ಸಿಕ್ಕಿದ್ದು 669 ಕೋಟಿ ರೂ. ಮಾತ್ರ.

Vijaya Karnataka Web 10 Jan 2020, 8:09 am
ಬೆಂಗಳೂರು: ಪ್ರವಾಹ ಪರಿಹಾರದ ಬಗ್ಗೆ ಏರ್ಪಟ್ಟಿದ್ದ ಎಲ್ಲ ಗೊಂದಲಗಳಿಗೆ ಸಿಎಂ ಬಿಎಸ್‌ ಯಡಿಯೂರಪ್ಪ ತೆರೆ ಎಳೆದಿದ್ದಾರೆ. 2ನೇ ಹಂತದಲ್ಲಿ ಕೇಂದ್ರ ಸರಕಾರ ಕೊಟ್ಟ ನೆರೆ ಪರಿಹಾರ 669 ಕೋಟಿ ರೂ. ಎಂದು ಸ್ಪಷ್ಟನೆ ನೀಡಿದ್ದಾರೆ.
Vijaya Karnataka Web BS Yediyurappa


ಇತ್ತೀಚೆಗೆ ತುಮಕೂರಿಗೆ ಭೇಟಿ ನೀಡಿ ವಾಪಾಸಾದ ಬಳಿಕ ರಾಜ್ಯಕ್ಕೆ ನೆರೆ ಪರಿಹಾರ ರೂಪದಲ್ಲಿ 1800 ಕೋಟಿ ರೂ. ಬಿಡುಗಡೆ ಮಾಡಿದೆ ಎನ್ನಲಾಗಿತ್ತು. ಈ ವಿಚಾರವಾಗಿ ಕೇಂದ್ರದ ನಾಯಕರು ಸುಳ್ಳು ಹೇಳುತ್ತಿದ್ದಾರೆ ಎಂದು ವಿಪಕ್ಷ ನಾಯಕರು ಆರೋಪಿಸಿದ್ದರು. ಒಟ್ಟಾರೆ ರಾಜ್ಯಕ್ಕೆ ಕೇಂದ್ರದಿಂದ ಬಿಡುಗಡೆಯಾದ ಪರಿಹಾರದ ಮೊತ್ತದ ಬಗ್ಗೆ ಗೊಂದಲಗಳು ಏರ್ಪಟ್ಟಿದ್ದವು.

ಮೊದಲ ಹಂತ ಮತ್ತು ಎರಡನೇ ಹಂತದಲ್ಲಿ ರಾಜ್ಯಕ್ಕೆ ಸಿಕ್ಕಿದ ನೆರೆ ಪರಿಹಾರದ ಒಟ್ಟು ಮೊತ್ತ 1,869 ಕೋಟಿ ರೂ. ಎನ್ನುವುದನ್ನು ಸಿಎಂ ಬಿಎಸ್‌ ಯಡಿಯೂರಪ್ಪ ಅವರೇ ಈಗ ಖಚಿತ ಪಡಿಸಿದ್ದಾರೆ.

ನೆರೆ ಪರಿಹಾರದ ಗೊಂದಲದ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ ಅವರು, ಮೊದಲು 1,200 ಕೋಟಿ ರೂ. ಬಂದಿದೆ. ಈಗ 669 ಕೋಟಿ ರೂ. ಕೊಟ್ಟಿದ್ದಾರೆ ಎಂದಷ್ಟೇ ಹೇಳಿದರು.

'ಕೇಂದ್ರದ ನೆರೆ ಪರಿಹಾರ' ತುಂಬಾ ಕಮ್ಮಿಯಾಯ್ತು ಅಂದ್ರು ಸಿಎಂ!

ಇತ್ತೀಚೆಗೆ ಕಂದಾಯ ಸಚಿವ ಆರ್‌ ಅಶೋಕ್‌ ನೆರೆ ಪರಿಹಾರದ ಕುರಿತು ಸ್ಪಷ್ಟನೆ ನೀಡುತ್ತ, “ನೆರೆ ಪರಿಹಾರಕ್ಕೆ ಕೇಂದ್ರ ಸರಕಾರ ಪ್ರಕಟಿಸಿರುವ 1,869 ಕೋಟಿ ರೂ. ಮೊತ್ತವು ಹೆಚ್ಚುವರಿಯೋ ಅಥವಾ ಈ ಮುನ್ನ ಬಿಡುಗಡೆ ಮಾಡಿದ್ದ 1,200 ಕೋಟಿ ರೂ. ಮೊತ್ತದಲ್ಲಿ ಸೇರಿದೆಯೋ ಎಂಬ ಬಗ್ಗೆ ಖಚಿತತೆ ಇಲ್ಲ. ಈ ಬಗ್ಗೆ ಕಂದಾಯ ಇಲಾಖೆಗೆ ಯಾವುದೇ ಅಧಿಕೃತ ಮಾಹಿತಿ ತಲುಪಿಲ್ಲ,” ಎಂದಿದ್ದರು.

ನರೆಪೀಡಿತ ಪ್ರದೇಶಗಳಲ್ಲಿ ತೆರಿಗೆ ವಸೂಲಿಗೆ ತಡೆ
ಪ್ರವಾಹಕ್ಕೆ ತುತ್ತಾಗಿದ್ದ ರಾಜ್ಯದ 103 ತಾಲೂಕುಗಳ ವ್ಯಾಪ್ತಿಯ ಪಂಚಾಯಿತಿಗಳಲ್ಲಿ ಆಸ್ತಿಗಳ ತೆರಿಗೆ ಬಾಕಿ ವಸೂಲಿಗೆ ಸರಕಾರ ಬ್ರೇಕ್‌ ಹಾಕಿದೆ. ಈ ಸಂಬಂಧ ಆದೇಶ ಹೊರಡಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್‌ ಇಲಾಖೆ, ಆಸ್ತಿಗಳ ಮಾಲೀಕರು ತೆರಿಗೆ ಬಾಕಿ ಉಳಿಸಿಕೊಂಡಿದ್ದರೂ, ಅವರು ಬಯಸಿದ ಆಸ್ತಿ ದಾಖಲೆಗಳನ್ನು ಉಚಿತವಾಗಿ ವಿತರಣೆ ಮಾಡಲು ನಿರ್ದೇಶನ ನೀಡಿದೆ. ಇ-ಸ್ವತ್ತು ತಂತ್ರಾಂಶದ ಮೂಲಕ ನಮೂನೆ-9, 11ಎ ಹಾಗೂ 11ಬಿ ದಾಖಲೆಗಳನ್ನು ಆಸ್ತಿಗಳ ಮಾಲೀಕರಿಗೆ ಉಚಿತವಾಗಿ ವಿತರಿಸಲು ಸೂಚಿಸಲಾಗಿದೆ. ಬಹಳಷ್ಟು ಆಸ್ತಿಗಳ ಮಾಲೀಕರು ದಾಖಲೆ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ