ಆ್ಯಪ್ನಗರ

ಕೆಂಗಲ್ ಹನುಮಂತಯ್ಯ ಪುಣ್ಯತಿಥಿ, ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸಿಎಂ ಬಿಎಸ್‌ವೈ ಗೌರವ

ಕರ್ನಾಟಕ ರಾಜ್ಯದ ಎರಡನೆಯ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿದ ಶ್ರೀ ಕೆಂಗಲ್ ಹನುಮಂತಯ್ಯನವರ ಪುಣ್ಯತಿಥಿಯಂದು ಆ ಹಿರಿಯ ಮುತ್ಸದ್ದಿಗೆ ಅನಂತ ನಮನಗಳು. ಕರ್ನಾಟಕ ಏಕೀಕರಣಕ್ಕಾಗಿ ಅವರ ಪರಿಶ್ರಮ, ವಿಧಾನಸೌಧ ನಿರ್ಮಾಣ ಸೇರಿದಂತೆ ಅವರ ಸೇವೆಗಳನ್ನು ನಾಡು ಸದಾ ಸ್ಮರಿಸುತ್ತದೆ ಎಂದು ಸಿಎಂ ಬಿಎಸ್‌ ಯಡಿಯೂರಪ್ಪ ನಮನ ಸಲ್ಲಿಸಿದ್ದಾರೆ.

Vijaya Karnataka Web 1 Dec 2020, 11:19 am
ಬೆಂಗಳೂರು: ವಿಧಾನಸೌಧ ನಿರ್ಮಾತೃರಾದ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರ ಪುಣ್ಯತಿಥಿ ಅಂಗವಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮಂಗಳವಾರ ವಿಧಾನಸೌಧದಲ್ಲಿ ಕೆಂಗಲ್ ಹನುಮಂತಯ್ಯ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
Vijaya Karnataka Web CM BSY Kengal Hanumanthaiah


ಚರ್ಚ್‌ ಸ್ಟ್ರೀಟ್‌ ಬಳಿಕ ಕ್ಲೀನ್ ಏರ್ ಸ್ಟ್ರೀಟ್ ಯೋಜನೆ ಬೆಂಗಳೂರಿನ ಬೇರೆ ಪ್ರದೇಶಗಳಿಗೂ ವಿಸ್ತರಣೆ:

ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಮಾತನಾಡಿದ ಸಿಎಂ ಬಿಎಸ್‌ವೈ ಅವರು, ಕೆಂಗಲ್ ಹನುಮಂತಯ್ಯ ಓರ್ವ ರಾಜಕೀಯ ಮುತ್ಸದ್ದಿ. ದೂರ ದೃಷ್ಟಿ ಹೊಂದಿದ್ದ ನಾಯಕರಾಗಿದ್ದವರು. ದಕ್ಷ ಆಡಳಿತ ನೀಡುವ ಮೂಲಕ ರಾಜ್ಯದ ಏಳಿಗೆಗಾಗಿ ಶ್ರಮಿಸಿದವರು. ರಾಜ್ಯದ ಮುಖ್ಯಮಂತ್ರಿಯಾಗಿ ,ಕೇಂದ್ರ ರೈಲ್ವೇ ಸಚಿವರಾಗಿ, ಆಡಳಿತ ಸುಧಾರಣಾ ಆಯೋಗದ ಮೊದಲ ಅಧ್ಯಕ್ಷತಾಗಿ ಕೆಂಗಲ್ ಹನುಮಂತಯ್ಯ ಅವರ ಸೇವೆ ಮಹತ್ವದ್ದು ಎಂದು ನೆನಪಿಸಿಕೊಂಡರು.

ತೆಂಗಿನಕಾಯಿ ದರ ದಾಖಲೆಯ ಏರಿಕೆ..! ಬೆಳೆಗಾರರಿಗೆ ಹರ್ಷ, ಗ್ರಾಹಕರಿಗೆ ಸಂಕಷ್ಟ..!

ಇದೇ ವೇಳೆ ಕನ್ನಡ ಭಾಷೆ ಸಂಸ್ಕೃತಿಗೆ ಅವರ ಕೊಡುಗೆ ವಿಶೇಷವಾಗಿದ್ದು ಎಂದ ಬಿಎಸ್‌ವೈ, ಅವರು ಕರ್ನಾಟಕದ ಏಕೀಕರಣಕ್ಕೆ ಅಪಾರವಾದ ಸೇವೆ ಸಲ್ಲಿಸಿದ್ದಾರೆ. ಅವರು ಕಟ್ಟಿಸಿದ ವಿಧಾನಸೌಧ ಕಟ್ಟಡ ದೇಶದಲ್ಲಿ ಭವ್ಯ ಕಟ್ಟಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಸ್ಮರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ