ಆ್ಯಪ್ನಗರ

ಡಾ. ಮಹಾದೇವ ಬಣಕಾರ್ ಹಾಗೂ ಎ.ಕೆ‌‌ ಸುಬ್ಬಯ್ಯ ಕುರಿತ ಪುಸ್ತಕ ಬಿಡುಗಡೆಗೊಳಿಸಿದ ಸಿಎಂ ಬಿಎಸ್‌ವೈ

ಪುಸ್ತಕ ಬಿಡುಗಡೆಗೊಳಿಸಿದ ಬಳಿಕ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ, ದಿವಂಗತ ಎ.ಕೆ ಸುಬ್ಬಯ್ಯ ಜಾತ್ಯತೀತ ಹೋರಾಟಗಾರ, ಸಮಾಜಮುಖಿಯಾಗಿ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ ವ್ಯಕ್ತಿಯಾಗಿದ್ದರು. ಬಣಕಾರ್ ರಂಗಭೂಮಿಗೆ ಅಪಾರ ಕೊಡುಗೆ ನೀಡಿದ್ದಾರೆ, ವಿಧಾನಸಭೆ ಹಾಗೂ ಪರಿಷತ್ ಸದಸ್ಯರಾಗಿ ರಾಜ್ಯದ ಹಿತ ರಕ್ಷಣೆಗಾಗಿ ಹೋರಾಟ ಮಾಡಿದವರು ಎಂದು ಹೇಳಿದರು.

Vijaya Karnataka Web 26 Sep 2020, 10:25 am
ಬೆಂಗಳೂರು: ಸಂಸದೀಯ ಪಟುಗಳಾದ ದಿವಂಗತ ಡಾ. ಮಹಾದೇವ ಬಣಕಾರ್ ಹಾಗೂ ಎ.ಕೆ‌‌ ಸುಬ್ಬಯ್ಯ ಕುರಿತಾದ ಪುಸ್ತಕ ಬಿಡುಗಡೆ ಸಮಾರಂಭವು ಶನಿವಾರ ವಿಧಾನಸೌಧದಲ್ಲಿ ನಡೆಯಿತು.
Vijaya Karnataka Web BSY


ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪಅವರು ಮಾಜಿ ಶಾಸಕರುಗಳಾದ ಡಾ. ಮಹಾದೇವ ಬಣಕಾರ್ ಹಾಗೂ ಎ.ಕೆ ಸುಬ್ಬಯ್ಯ ಕುರಿತಾದ ಪುಸ್ತಕವನ್ನು ವಿಧಾನಸೌಧದಲ್ಲಿ ಬಿಡುಗಡೆಗೊಳಿಸಿದರು. ಪುಸ್ತಕ ಬಿಡುಗಡೆಗೊಳಿಸಿದ ಬಳಿಕ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ, ದಿವಂಗತ ಎ.ಕೆ ಸುಬ್ಬಯ್ಯ ಜಾತ್ಯತೀತ ಹೋರಾಟಗಾರ, ಸಮಾಜಮುಖಿಯಾಗಿ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ ವ್ಯಕ್ತಿಯಾಗಿದ್ದರು. ಬಣಕಾರ್ ರಂಗಭೂಮಿಗೆ ಅಪಾರ ಕೊಡುಗೆ ನೀಡಿದ್ದಾರೆ, ವಿಧಾನಸಭೆ ಹಾಗೂ ಪರಿಷತ್ ಸದಸ್ಯರಾಗಿ ರಾಜ್ಯದ ಹಿತ ರಕ್ಷಣೆಗಾಗಿ ಹೋರಾಟ ಮಾಡಿದವರು ಎಂದು ಹೇಳಿದರು.

ಅವಿಶ್ವಾಸ ಮಂಡನೆ ಚರ್ಚೆ, ಪಿಪಿಇ ಕಿಟ್‌ ಧರಿಸಿ ಬರಲು ಕೋವಿಡ್‌ ಶಾಸಕರಿಗೆ ಬಿಜೆಪಿ ವಿಪ್‌ ಜಾರಿ

ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಇಂತಹ ಮಹಾಪುರುಷರ ಇತಿಹಾಸ ದಾಖಲು ಮಾಡಬೇಕು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಏನು ಆಗಿದೆ ಎಂಬುದು ಇವತ್ತಿನ ಯುವ ಪೀಳಿಗೆಗೆ ಗೊತ್ತಿಲ್ಲ. ಈ ಬಗ್ಗೆ ಯುವ ಪೀಳಿಗೆಗಳಿಗೆ ಇತಿಹಾಸ ತಿಳಿಸಬೇಕಾಗಿದೆ, ಈ ನಿಟ್ಟಿನಲ್ಲಿ ಸಾಧಕರ ಬಗ್ಗೆ ಯುವ ಪೀಳಿಗೆಗೆ ಮಾಹಿತಿ ನೀಡುವುದು ಅಗತ್ಯ ಎಂದು ಅಭಿಪ್ರಾಯಪಟ್ಟರು.

ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರ ಅವಧಿ 30 ತಿಂಗಳಿಗೆ ಇಳಿಸುವ ಬಿಲ್‌ ಪಾಸ್‌; ರಮೇಶ್‌-ರೇವಣ್ಣ ಜಟಾಪಟಿ!

ಅಲ್ಲದೇ, ಬಣಕಾರ್ ಕರ್ನಾಟಕ ಏಕೀಕರಣದ ಹೋರಾಟದಲ್ಲಿ ಭಾಗಿಯಾದವರು. ಇದಕ್ಕಾಗಿ ಜೈಲು ಶಿಕ್ಷೆಗೆ ಒಳಗಾಗಿದ್ದರು. ವಿಧಾನಸಭೆಗೆ 1967ರಲ್ಲಿ ಹಾಗೂ 1997ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿದ್ದರು. ಎ.ಕೆ‌ ಸುಬ್ಬಯ್ಯ ವಿದ್ಯಾರ್ಥಿ ನಾಯಕರಾಗಿ, ವಕೀಲರಾಗಿ, ವಿಧಾನಪರಿಷತ್ ಸದಸ್ಯರಾಗಿ ಭ್ರಷ್ಟಾಚಾರ, ಅನ್ಯಾಯ, ಅವ್ಯವಹಾರದ ವಿರುದ್ಧ ಸಿಡಿದೆದ್ದವರು. ಯಡಿಯೂರಪ್ಪರ ಸಾರ್ವಜನಿಕ ಜೀವನಕ್ಕೂ ಪ್ರೇರಣೆ ಕೊಟ್ಟವರು ಎ.ಕೆ‌‌ ಸುಬ್ಬಯ್ಯ ಎಂದು ಕಾಗೇರಿ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ