ಆ್ಯಪ್ನಗರ

ಆಡಿಯೊ ತನಿಖೆಗೆ ಆತುರವಿಲ್ಲ: ಸಿಎಂ ಕುಮಾರಸ್ವಾಮಿ

ಪ್ರಕರಣದ ಬಗ್ಗೆ ವಿಶೇಷ ತಂಡದಿಂದ (ಎಸ್‌ಐಟಿ) ತನಿಖೆ ನಡೆಸುವ ತೀರ್ಮಾನ ಘೋಷಣೆಯಾಗಿ ವಾರ ಕಳೆದರೂ ಎಸ್‌ಐಟಿ ರಚನೆಯಾಗದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಸಿಎಂ ಈ ಪ್ರತಿಕ್ರಿಯೆ ನೀಡಿದರು.

Vijaya Karnataka Web 22 Feb 2019, 7:49 am
ಬೆಂಗಳೂರು: 'ಆಪರೇಷನ್‌ ಕಮಲ ಆಡಿಯೊ' ಪ್ರಕರಣದ ತನಿಖೆ ವಿಚಾರದಲ್ಲಿ ನನಗೆ ಯಾವುದೇ ಆತುರ ಇಲ್ಲ ಎಂದು ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
Vijaya Karnataka Web hdk


ಪ್ರಕರಣದ ಬಗ್ಗೆ ವಿಶೇಷ ತಂಡದಿಂದ (ಎಸ್‌ಐಟಿ) ತನಿಖೆ ನಡೆಸುವ ತೀರ್ಮಾನ ಘೋಷಣೆಯಾಗಿ ವಾರ ಕಳೆದರೂ ಎಸ್‌ಐಟಿ ರಚನೆಯಾಗದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಸಿಎಂ ಈ ಪ್ರತಿಕ್ರಿಯೆ ನೀಡಿದರು.

''ಆಡಿಯೊ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪೀಕರ್‌ ಕೆ.ಆರ್‌.ರಮೇಶ್‌ಕುಮಾರ್‌ ಆರೋಪಮುಕ್ತರಾಗಿದ್ದಾರೆ. ಮೈತ್ರಿ ಸರಕಾರ ಪತನಕ್ಕೆ ಬಿಜೆಪಿಯವರು ಆಡಳಿತ ಪಕ್ಷದ ಶಾಸಕರಿಗೆ ಏನೇನು ಆಮಿಷವೊಡ್ಡಿದ್ದಾರೆ ಎಂಬ ವಿಚಾರಗಳ ಬಗ್ಗೆ ಸಮಗ್ರವಾಗಿ ತನಿಖೆ ಆಗಬೇಕಿದೆ. ಯಾರನ್ನೋ ಹೆದರಿಸಲು ಅಲ್ಲ, ವಿಧಾನಸಭೆಯಲ್ಲಿ ಚರ್ಚೆಯಾದಂತೆ ವ್ಯವಸ್ಥೆ ಸರಿಮಾಡಲು ಏನೆಲ್ಲಾ ಕ್ರಮ ಆಗಬೇಕೋ ಅದನ್ನು ಮಾಡಬೇಕಿದೆ. ಹೀಗಾಗಿ, ತನಿಖೆ ವಿಚಾರದಲ್ಲಿ ಆತುರದ ಅಗತ್ಯವಿಲ್ಲ'' ಎಂದು ಪ್ರತಿಪಾದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ