ಆ್ಯಪ್ನಗರ

ಹಿಮಾಲಯದಲ್ಲಿ ಕನ್ನಡ ಬಾವುಟ ಹಾರಿಸಿದ ಸಾಹಸಿ ವಿಕ್ರಮ್‌ಗೆ ಸಿಎಂ ಶ್ಲಾಘನೆ

ಹಿಮಾಲಯ ಪರ್ವತ ಯಶಸ್ವಿಯಾಗಿ ಏರಿ ರಾಜ್ಯದ ಕೀರ್ತಿ ಪತಾಕೆ ಹಾರಿಸಿದ ಅರಣ್ಯ ರಕ್ಷಕ ವಿಕ್ರಮ್ ಸಿ. (25) ಅವರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.

Vijaya Karnataka Web 2 Jul 2018, 6:34 pm
ಬೆಂಗಳೂರು: ಹಿಮಾಲಯ ಪರ್ವತ ಯಶಸ್ವಿಯಾಗಿ ಏರಿ ರಾಜ್ಯದ ಕೀರ್ತಿ ಪತಾಕೆ ಹಾರಿಸಿದ ಅರಣ್ಯ ರಕ್ಷಕ ವಿಕ್ರಮ್ ಸಿ. (25) ಅವರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ, ಹಿಮಾಲಯ ಪರ್ವತ ಏರಿದ ಯಶೋಗಾಥೆಯನ್ನು ವಿಕ್ರಮ್ ಅವರು ವಿವರಿಸಿದರು.
Vijaya Karnataka Web cm met youth.


ಇವರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಕುಮಾರಸ್ವಾಮಿ, ನಿಮ್ಮ ಸಾಧನೆ ಇತರರಿಗೂ ಪ್ರೇರಣೆಯಾಗಲಿ ಎಂದು ಆಶಿಸಿದರು.

ಮೂಲತಃ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ವಿಜಯಪುರ ಗ್ರಾಮದವರಾದ ವಿಕ್ರಮ್ ಅವರು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಅರಣ್ಯ ರಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಚಿಕ್ಕ ವಯಸ್ಸಿನಿಂದಲೂ ಏನಾದರೊಂದು ಸಾಧಿಸಬೇಕೆಂದು ಛಲ ಹೊಂದಿದ್ದ ಅವರು ಹಿಮಾಲಯ ಪರ್ವತವೇರುವ ಸಾಹಸಕ್ಕೆ ಕೈ ಹಾಕಿದ್ದರು.
ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ವಿಕ್ರಮ್, ಹಿಮಾಲಯ ಪರ್ವತವೇರಲು ಸಾಕಷ್ಟು ತಯಾರಿ ನಡೆಸಿದ್ದರು. ಪರ್ವತಾರೋಹಿಗಳಿಗೆ ನಡೆದ ಆಯ್ಕೆ ಸಂದರ್ಶನದಲ್ಲಿ ದೇಶದ ವಿವಿಧ ಭಾಗಗಳಿಂದ 25 ಮಂದಿ ಆಯ್ಕೆಯಾಗಿದ್ದರು.

ಅದರಲ್ಲಿ ಯಶಸ್ವಿಯಾಗಿ ಹಿಮಾಲಯ ಪರ್ವತವನ್ನು ಏರಿದ 8 ಮಂದಿಗಳ ಪೈಕಿ ವಿಕ್ರಮ್ ಕೂಡ ಒಬ್ಬರು. ಇನ್ನೂ ವಿಶೇಷವೆಂದರೆ ಕರ್ನಾಟಕದ ಪೈಕಿ ಇವರೊಬ್ಬರೇ ಈ ಕೀರ್ತಿ ಪತಾಕೆ ಹಾರಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ