ಆ್ಯಪ್ನಗರ

ಬಿಜೆಪಿಯಂತೆ ಆಪರೇಷನ್‌ ಮಾಡಲ್ಲ, ರೋಷನ್‌ ಬೇಗ್ ಜತೆ ಸಂಧಾನ ಇಲ್ಲ: ಸಿದ್ದರಾಮಯ್ಯ

ಸರಕಾರ ಉಳಿಯುತ್ತದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಅತೃಪ್ತರಲ್ಲಿ ಕೆಲವರು ವಾಪಸ್‌ ಬರುತ್ತಾರೆ. ಎಲ್ಲವನ್ನೂ ಕಾದು ನೋಡಿ ಎಂದು ಸಿದ್ದರಾಮಯ್ಯ ತಿಳಿಸಿದರು.

Vijaya Karnataka Web 12 Jul 2019, 5:51 pm
ಬೆಂಗಳೂರು: ಸರಕಾರವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ವಿಶ್ವಾಸ ಮತಯಾಚನೆ ಮಾಡುವುದಾಗಿ ಮುಖ್ಯಮಂತ್ರಿ ಘೋಷಣೆ ಮಾಡಿದ್ದಾರೆ. ವಿಶ್ವಾಸ ಇದ್ದರಿಂದಲೇ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
Vijaya Karnataka Web ಸಿದ್ದರಾಮಯ್ಯ
ಸಿದ್ದರಾಮಯ್ಯ


ಬೆಂಗಳೂರಿನಲ್ಲಿ ವಿಧಾನಸಭಾ ಕಲಾಪದ ನಂತರ ವಿಧಾನಸೌಧ ಆವರಣದಲ್ಲಿ ಸುದ್ದಿಗಾರರೊಂದಿಗೆ ಸಿದ್ದರಾಮಯ್ಯ ಮಾತನಾಡಿದರು.

ರಾಜಕಾರಣಕ್ಕೆ ನಾವು ಸ್ವಯಂ ಪ್ರೇರಿತರಾಗಿ ಬಂದಿದ್ದೇವೆ. ಹೀಗಾಗಿ ಖುಷಿ ಖುಷಿಯಾಗಿ ರಾಜಕಾರಣ ಮಾಡಬೇಕು. ಇದನ್ನೇ ನಾನು ಮಾಡಿಕೊಂಡು ಬಂದಿದ್ದೇನೆ, ಹೀಗಾಗಿಯೇ ನಾನು ಆರಾಮಾಗಿ ಇದ್ದೇನೆ ಎಂದರು.

ನಮಗೆ ಸಂಪೂರ್ಣ ವಿಶ್ವಾಸವಿದೆ. ಹೀಗಾಗಿಯೇ ವಿಶ್ವಾಸಮತ ಯಾಚನೆಗೆ ಮುಂದಾಗಿದ್ದೇವೆ. ಇದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಿದರು.

ಸರಕಾರದ ಬಳಿ ಸಂಖ್ಯಾಬಲವೇ ಇಲ್ಲ ಹೇಗೆ ವಿಶ್ವಾಸಮತ ಯಾಚಿಸುತ್ತೀರಿ ಎಂಬ ಪ್ರಶ್ನೆಗೆ ಖಡಕ್ಕಾಗಿ ಸಿದ್ದರಾಮಯ್ಯ ಉತ್ತರಿಸಿದರು.

ಯಾವ ರೀತಿ ವಿಶ್ವಾಸಮತ ಯಾಚಿಸುತ್ತೇವೆ. ನಮ್ಮ ಯೋಜನೆಗಳು, ಕಾರ್ಯತಂತ್ರಗಳೇನು ಎಂಬುದನ್ನು ಬಹಿರಂಗವಾಗಿ ಹೇಳಿಕೊಳ್ಳಲು ಆಗುವುದಿಲ್ಲ ಎಂದು ತಿಳಿಸಿದರು.

ರಾಜೀನಾಮೆ ನೀಡಿದ ಎಲ್ಲ ಶಾಸಕರು ಮುಂಬಯಿಗೆ ಹಾರಿಲ್ಲ. ಕೇವಲ 10 ಶಾಸಕರು. ರಾಮಲಿಂಗಾರೆಡ್ಡಿ ಇಲ್ಲೇ ಇದ್ದಾರೆ. ಆನಂದ್‌ ಸಿಂಗ್ ಹೋಗಿಲ್ಲ ಎಂದರು.

ರಾಮಲಿಂಗಾರೆಡ್ಡಿ ಜತೆ ಸಂಧಾನ ನಡೆಯುತ್ತಿದೆ. ಆನಂದ್ ಸಿಂಗ್‌ ಜತೆ ಚರ್ಚಿಸಲಾಗಿದೆ. ರೋಷನ್‌ ಬೇಗ್‌ ಜತೆ ಮಾತುಕತೆ ಸಾಧ್ಯವಿಲ್ಲ. ಏಕೆಂದರೆ ಅವರನ್ನು ಅಮಾನತು ಮಾಡಲಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ