ಆ್ಯಪ್ನಗರ

ಬಹುಗ್ರಾಮ ಕುಡಿಯುವ ನೀರು ಪೂರೈಕೆಗೆ ವಿಸ್ತೃತ ಯೋಜನಾ ವರದಿ: ಸಿಎಂ

ರಾಜ್ಯದಲ್ಲಿರುವ ನದಿ ಮೂಲಗಳಿಂದ ಬಹುಗ್ರಾಮ ಕುಡಿಯುವ ನೀರು ಪೂರೈಕೆ ಸಂಬಂಧ ಯೋಜನೆ ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹೇಳಿದ್ದಾರೆ.

Vijaya Karnataka Web 7 Sep 2018, 7:17 pm
ಉಡುಪಿ: ರಾಜ್ಯದಲ್ಲಿರುವ ನದಿ ಮೂಲಗಳಿಂದ ಬಹುಗ್ರಾಮ ಕುಡಿಯುವ ನೀರು ಪೂರೈಕೆಗೆ 60ರಿಂದ 70 ಸಾವಿರ ಕೋಟಿ ರೂ. ಮೊತ್ತದ ವಿಸ್ತೃತ ಯೋಜನಾ ವರದಿ ತಯಾರಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹೇಳಿದ್ದಾರೆ.
Vijaya Karnataka Web WhatsApp Image 2018-09-07 at 6.09.44 PM.


ಮಣಿಪಾಲದ ರಜತಾದ್ರಿಯಲ್ಲಿರುವ ಜಿಲ್ಲಾ ಪಂಚಾಯತ್ ನ ಡಾ. ವಿ. ಎಸ್. ಆಚಾರ್ಯ ಸಭಾಂಗಣದಲ್ಲಿ ಶುಕ್ರವಾರ ನಡೆದ ಉಡುಪಿ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಪ್ರತಿಯೊಬ್ಬರಿಗೂ ಕುಡಿಯುವ ಶುದ್ಧ ನೀರು ಪೂರೈಕೆ ಯೋಜನೆಗೆ ಹಣ ಕ್ರೋಢೀಕರಿಸಿ ನಾಲ್ಕು ವರ್ಷಗಳಲ್ಲಿ ಪೂರ್ಣಗೊಳಿಸುವ ಉದ್ದೇಶವಿದೆ ಎಂದ ಸಿಎಂ, ಆರೋಗ್ಯ ಕಾರ್ಡ್ ಸಿಗುವ ತನಕ ಬಡವರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಬಿಪಿಎಲ್ ಕಾರ್ಡ್ ಪರಿಗಣಿಸಲು ಸೂಚಿಸಲಾಗಿದೆ. ಉದ್ಯೋಗ ಖಾತ್ರಿ ಕಾಮಗಾರಿ ಸೋಶಿಯಲ್ ಆಡಿಟ್‍ನಿಂದಾಗಿ ಸ್ಥಗಿತವಾಗಿದ್ದು ನಿಯಮ ಸರಳೀಕರಣಕ್ಕೆ ಕೇಂದ್ರದ ಜತೆಗೆ ಚರ್ಚಿಸಲು ರಾಜ್ಯಮಟ್ಟದಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ಉಡುಪಿಗೆ 100 ಕೋಟಿ ರೂ

ಪ್ರಾಕೃತಿಕ ವಿಕೋಪದಿಂದ ಸಾರ್ವಜನಿಕ ಆಸ್ತಿಪಾಸ್ತಿಗೆ 141ಕೋಟಿ ರೂ. ಹಾನಿಯಾಗಿದ್ದು ಶೀಘ್ರವೇ ಬೆಂಗಳೂರಿನಲ್ಲಿ ಆರ್ಥಿಕ ಇಲಾಖೆ, ಅಕಾರಿಗಳ ಜತೆ ಚರ್ಚಿಸಿ ಕನಿಷ್ಠ 75ರಿಂದ 100 ಕೋಟಿ ರೂ. ಪರಿಹಾರ ಬಿಡುಗಡೆಗೆ ತೀರ್ಮಾನ ಕೈಗೊಳ್ಳಲಾಗುವುದು. ಬೆಳೆ ನಷ್ಟ ಪರಿಹಾರಕ್ಕೆ ಸಂಬಂಧಿಸಿದಂತೆ ಎನ್‍ಡಿಆರ್‍ಎಫ್ ಮಾರ್ಗದರ್ಶಿ ಸೂತ್ರ ಬದಿಗಿಟ್ಟು ಶೇ. 75ರಷ್ಟು ಮನೆಗೆ ಹಾನಿಯಾಗಿದ್ದರೆ 1ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದ ಅವರು ಹೊಸದಾಗಿ ಪಡಿತರ ಚೀಟಿ ನೀಡಲು ಸಿಬ್ಬಂದಿ ಕೊರತೆ ಪರಿಹಾರಕ್ಕೆ ಜಿಲ್ಲಾಧಿಕಾರಿಗೆ ಹೆಚ್ಚುವರಿ ಸಿಬ್ಬಂದಿ ನೇಮಕದ ಅಧಿಕಾರ ನೀಡಲಾಗಿದೆ ಎಂದು ಹೇಳಿದರು.

ಮಹಿಳಾ ನಿಲಯ ನಿರ್ಮಾಣ
ಉಡುಪಿಯಲ್ಲಿ ಮಹಿಳಾ ನಿಲಯಕ್ಕೆ ಬೇಡಿಕೆಯಿದ್ದು 11,000 ಕೊರಗ ಕುಟುಂಬಕ್ಕೆ ಮನೆ ನಿರ್ಮಾಣ ಸಹಿತ ಬಡತನ ಸಮಸ್ಯೆ ನಿವಾರಣೆಗೆ ಅನುದಾನ ಒದಗಿಸಲಾಗುವುದು. ಲೋಕೋಪಯೋಗಿ, ಜಿ. ಪಂ. ಗ್ರಾಮೀಣ ರಸ್ತೆ ದುರಸ್ತಿ, ಮಕ್ಕಳಿಗೆ ಸಮಸ್ಯೆಯಾಗದಂತೆ ಕಾಲು ಸೇತುವೆ ದುರಸ್ತಿ, ಗ್ರಾಮೀಣ ಸಂಪರ್ಕಕ್ಕೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ