ಆ್ಯಪ್ನಗರ

ಹಿಂದುಳಿದ ವರ್ಗದವರು ಸಿಎಂ ಆಗಿದ್ದು ಸಹಿಸಲಾಗ್ತಿಲ್ಲ: ಸಿಎಂ

ದುಬಾರಿ ವಾಚ್‌ ಪ್ರಕರಣ ಕುರಿತು ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ನಡುವಿನ ವಾಕ್ಸಮರ ತಾರಕಕ್ಕೇರಿದೆ.

ವಿಕ ಸುದ್ದಿಲೋಕ 27 Feb 2016, 1:17 pm
ಬೆಂಗಳೂರು: ದುಬಾರಿ ವಾಚ್‌ ಪ್ರಕರಣ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ನಡುವಿನ ವಾಕ್ಸಮರ ತಾರಕಕ್ಕೇರಿದೆ.
Vijaya Karnataka Web cm siddaramaiah slams kumaraswamy
ಹಿಂದುಳಿದ ವರ್ಗದವರು ಸಿಎಂ ಆಗಿದ್ದು ಸಹಿಸಲಾಗ್ತಿಲ್ಲ: ಸಿಎಂ


ಕುಮಾರಸ್ವಾಮಿ ಆರೋಪಗಳಿಂದ ಗರಂ ಆಗಿರುವ ಸಿಎಂ, 'ಅವರ ಆರೋಪದಲ್ಲಿ ಹುರುಳಿಲ್ಲ. ದುರುದ್ದೇಶ ಪೂರಿತ ಹೇಳಿಕೆಗಳಿವು. ನನ್ನ ಹೆಸರಿಗೆ ಕಳಂಕ ತರುವ ಪ್ರಯತ್ನ ಇದು. ಹಿಂದುಳಿದ ವರ್ಗದವರು ಸಿಎಂ ಆಗಿದ್ದು ಅವರಿಂದ ಸಹಿಸಲಾಗುತ್ತಿಲ್ಲ,'ಎಂದು ಗುಡುಗಿದ್ದಾರೆ.

'ಈ ಹಿಂದೆ ಬಂಗಾರಪ್ಪ, ಮೊಯಿಲಿಯವರಿಗೂ ಹೀಗೆ ಆಗಿತ್ತು. ಅವರಿಗೂ ಎರಡು ವರ್ಷ ಆಡಳಿತ ನಡೆಸಲು ಬಿಡಲಿಲ್ಲ. ಈಗಲೂ ಅದೇ ರೀತಿ ಕೆಲವರಿಗೆ ಸಹಿಸಲಾಗುತ್ತಿಲ್ಲ,'ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಸಿಎಂ ಬೆಳ್ಳಿ ತಟ್ಟೆಯಲ್ಲಿ ಊಟ ಮಾಡ್ತಾರೆ ಎಂಬ ಕುಮಾರಸ್ವಾಮಿ ಹೇಳಿಕೆ ಕುರಿತು ವಿಚಾರಿಸಿದಾಗ, 'ನಾನು ಬೆಳ್ಳಿ ತಟ್ಟೆಯಲ್ಲಿ ಊಟ ಮಾಡೋಲ್ಲ. ಬೆಳ್ಳಿತಟ್ಟೆಯನ್ನು ಯಾರಾದ್ರೂ ಬ್ಯಾಗ್‌ನಲ್ಲಿ ಇಟ್ಟುಕೊಂಡು ಓಡಾಡ್ತಾರೇನ್ರೀ...ಬುದ್ಧಿ ಬೇಡ್ವಾ ? ನೀವೇ ಅವರನ್ನ ಕೇಳಬೇಕಿತ್ತು,' ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ