ಆ್ಯಪ್ನಗರ

ಕೇಂದ್ರದ ವಿರುದ್ಧ ಇಂದಿನಿಂದ ಕಾಂಗ್ರೆಸ್‌ ಹೋರಾಟ

ಕೇಂದ್ರ ಸರಕಾರದ ಜನವಿರೋಧಿ ನೀತಿ ವಿರುದ್ಧ ಶುಕ್ರವಾರದಿಂದ ರಾಜ್ಯಾದ್ಯಂತ ಜನ ಜಾಗೃತಿ ಹೋರಾಟ ಪ್ರಾರಂಭಿಸಲಾಗುವುದು ಎಂದು ಕೆಪಿಸಿಸಿ ಉಪಾಧ್ಯಕ್ಷ ವಿ.ಆರ್‌. ಸುದರ್ಶನ್‌ ತಿಳಿಸಿದ್ದಾರೆ.

Vijaya Karnataka Web 7 Sep 2018, 4:00 am
ಬೆಂಗಳೂರು : ಕೇಂದ್ರ ಸರಕಾರದ ಜನವಿರೋಧಿ ನೀತಿ ವಿರುದ್ಧ ಶುಕ್ರವಾರದಿಂದ ರಾಜ್ಯಾದ್ಯಂತ ಜನ ಜಾಗೃತಿ ಹೋರಾಟ ಪ್ರಾರಂಭಿಸಲಾಗುವುದು ಎಂದು ಕೆಪಿಸಿಸಿ ಉಪಾಧ್ಯಕ್ಷ ವಿ.ಆರ್‌. ಸುದರ್ಶನ್‌ ತಿಳಿಸಿದ್ದಾರೆ.
Vijaya Karnataka Web congress fights against center today
ಕೇಂದ್ರದ ವಿರುದ್ಧ ಇಂದಿನಿಂದ ಕಾಂಗ್ರೆಸ್‌ ಹೋರಾಟ


ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಗುರುವಾರ ಮಾತನಾಡಿದ ಅವರು, ''ಗಣೇಶ ಚತುರ್ಥಿ ಹೊರತು ಪಡಿಸಿ ಸೆಪ್ಟೆಂಬರ್‌ 16 ರ ವರೆಗೆ ಈ ಹೋರಾಟ ನಡೆಯಲಿದೆ. ಕೇಂದ್ರದ ಎನ್‌ಡಿಎ ಸರಕಾರದ ವೈಫಲ್ಯದ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಲಾಗುವುದು,'' ಎಂದರು.

''ಚಿಕ್ಕಮಗಳೂರಿನಲ್ಲಿ ಈ ಹೋರಾಟಕ್ಕೆ ಚಾಲನೆ ನೀಡಲಾಗುತ್ತಿದ್ದು ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್‌. ಶಂಕರ್‌ ಹಾಗೂ ಸಚಿವ ಕೆ.ಜೆ. ಜಾರ್ಜ್‌ ಭಾಗಿಯಾಗುತ್ತಾರೆ. ಜತೆಗೆ ಇತರ ಜಿಲ್ಲೆಗಳಲ್ಲೂ ಕೇಂದ್ರದ ವಿರುದ್ಧದ ಆಂದೋಲನ ನಡೆಯಲಿದೆ. ಇದರ ಸಮಾರೋಪ ಬೆಂಗಳೂರಿನಲ್ಲಿ ಏರ್ಪಾಡಾಗಲಿದ್ದು ದಿನಾಂಕ ನಿಗದಿಯಾಗಬೇಕಿದೆ,'' ಎಂದು ಹೇಳಿದರು.

''ದೇಶದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಣೆಗೆ ತರುವುದರಲ್ಲಿ ವಿಫಲರಾಗಿರುವ ವಿತ್ತ ಸಚಿವ ಅರುಣ್‌ ಜೇಟ್ಲಿ ರಾಜೀನಾಮೆಗೆ ಒತ್ತಾಯಿಸಲಾಗುವುದು. ಸಾಲ ಮನ್ನಾ ಸಂಬಂಧ ರಾಷ್ಟ್ರೀಯ ನೀತಿ ತರುವುದಕ್ಕೂ ಒತ್ತಾಯಿಸಲಾಗುವುದು. ಜಿಎಸ್‌ಟಿ ಯುಪಿಎ ಸರಕಾರದ ಕನಸಿನ ಕೂಸಾಗಿತ್ತು. ಅದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಎನ್‌ಡಿಎಗೆ ಸಾಧ್ಯವಾಗಿಲ್ಲ. ರಫೇಲ್‌ ಯುದ್ಧ ವಿಮಾನ ಖರೀದಿ ಪ್ರಕ್ರಿಯೆ ದೊಡ್ಡ ಹಗರಣವಾಗಿದೆ. ಆದರೆ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಸತ್ಯಕ್ಕೆ ದೂರವಾದ ಹೇಳಿಕೆ ನೀಡುತ್ತಿದ್ದಾರೆ. ಜನ ಜಾಗೃತಿ ಹೋರಾಟದಲ್ಲಿ ಅವರ ರಾಜೀನಾಮೆಗೆ ಆಗ್ರಹಿಸಲಾಗುವುದು,'' ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ