ಆ್ಯಪ್ನಗರ

ಪಿಎಸ್‌ಐ ಹಗರಣ: ಬಸವರಾಜ ಬೊಮ್ಮಾಯಿ ರಾಜೀನಾಮೆ ಬೇಡಿಕೆ ಹಾಸ್ಯಾಸ್ಪದ ಎಂದ ಸಚಿವ ಅಶೋಕ್

ಅಪರಾಧಿಗಳನ್ನು ರಕ್ಷಣೆ ಮಾಡುವ ಪ್ರಶ್ನೆ ಇಲ್ಲ. ಸತ್ಯಾಸತ್ಯತೆ ತನಿಖೆ ಆಗಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಹಿಂದು ಮುಂದು ನೋಡಲ್ಲ. ಟೀಕೆ ಮೆಚ್ಚುಗೆ ಬರಲಿ ಆದರೆ ನಮ್ಮ ಸರಕಾರ ಯಾರನ್ನು ರಕ್ಷಣೆ ಮಾಡಲ್ಲ

Vijaya Karnataka Web 5 Jul 2022, 6:11 pm
ಬೆಂಗಳೂರು: ಪಿಎಸ್‌ಐ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ರಾಜೀನಾಮೆ ಬೇಡಿಕೆಯನ್ನು ಕಾಂಗ್ರೆಸ್ ಇಟ್ಟಿರುವುದು ಹಾಸ್ಯಾಸ್ಪದ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.
Vijaya Karnataka Web ಆರ್‌ ಅಶೋಕ
ಆರ್‌ ಅಶೋಕ


ವಿಧಾನಸೌಧದಲ್ಲಿ ಮಂಗಳವಾರ ಮಾತನಾಡಿದ ಅವರು, ಸಿಎಂ ಸ್ಪಷ್ಟವಾದ ನಿಲುವು ತೆಗೆದುಕೊಂಡಿದ್ದಾರೆ, ನಮ್ಮ ಸರಕಾರ ಇಲ್ಲದಿದ್ದರೆ ತನಿಖೆಯೇ ಆಗುತ್ತಿರಲಿಲ್ಲ. ಈ ಹಿಂದೆಯೂ ಹಲವು ಐಎಎಸ್, ಐಪಿ ಎಸ್ ಅಧಿಕಾರಿಗಳ ವಿರುದ್ಧ ಆರೋಪ ಇತ್ತು. ಆದರೆ ಯಾವುದೇ ತನಿಖೆ ಆಗಿರಲಿಲ್ಲ. ಎಲ್ಲವೂ ಮುಚ್ಚಿಹಾಕಲಾಗುತ್ತಿತ್ತು. ನಮ್ಮ ಸಿಎಂ ತನಿಖಾಧಿಕಾರಿಗಳಿಗೆ ಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದಾರೆ. ಆ ಕಾರಣಕ್ಕಾಗಿ ದಾಳಿ ಬಂಧನ ನಡೆಯುತ್ತಿದೆ ಎಂದು ಸಮರ್ಥಿಸಿಕೊಂಡರು.

PSI Recruitment Scam: ಗೃಹ ಸಚಿವರ ರಾಜಿನಾಮೆ ಕೇಳಲು ಕಾಂಗ್ರೆಸ್‍ಗೆ ನೈತಿಕ ಹಕ್ಕಿಲ್ಲ: ಬೊಮ್ಮಾಯಿ ತಿರುಗೇಟು

ಅಪರಾಧಿಗಳನ್ನು ರಕ್ಷಣೆ ಮಾಡುವ ಪ್ರಶ್ನೆ ಇಲ್ಲ. ಸತ್ಯಾಸತ್ಯತೆ ತನಿಖೆ ಆಗಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಹಿಂದು ಮುಂದು ನೋಡಲ್ಲ. ಟೀಕೆ ಮೆಚ್ಚುಗೆ ಬರಲಿ ಆದರೆ ನಮ್ಮ ಸರಕಾರ ಯಾರನ್ನು ರಕ್ಷಣೆ ಮಾಡಲ್ಲ ಎಂದು ಸ್ಪಷ್ಟಪಡಿಸಿದರು.

ಸಿಎಂ ರಾಜೀನಾಮೆ ಬೇಡಿಕೆ ಹಾಸ್ಯಾಸ್ಪದ ಹೇಳಿಕೆಯಾಗಿದೆ. ಭ್ರಷ್ಟಾಚಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಬೆದರಿಕೆ ಹಾಕುವವರು ಸಮಾಜದಲ್ಲಿ ಇರ್ತಾರೆ. ಆದರೆ ಬೆದರಿಕೆಗೆ ಬಗ್ಗದೆ ನಮ್ಮ ಸಿಎಂ ಕ್ರಮ ಕೈಗೊಳ್ಳುತ್ತಿದ್ದಾರೆ. ಬೇರೆಯವರು ಇದ್ದರೆ ಇದೆಲ್ಲಾ ಮುಚ್ಚಿ ಹಾಕುತ್ತಿದ್ದರು. ಸಿಎಂ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಶಾಸಕ ಜಮೀರ್ ಅಹ್ಮದ್ ಖಾನ್ ನಿವಾಸದ ಎಸಿಬಿ ದಾಳಿ ವಿಚಾರವಾಗಿ ಕೇಳಿದ ಪ್ರಶ್ನೆಗೆ, ಈ‌ ಹಿಂದೆ ಅಧಿಕಾರಿಗಳನ್ನು ಬಂಧನ ಮಾಡಿಲ್ಲ ಎಂದು ಆರೋಪ ಮಾಡಿದ್ದರು. ಇವಾಗ ದೊಡ್ಡವರನ್ನು ಹಿಡಿದಾಗ ಏಕೆ ಹಿಡಿತೀರಾ ಎಂದು ಕೇಳ್ತಾರೆ. ಪ್ರಶ್ನೆ ಮಾಡಲು ಕೋರ್ಟ್ ಇದೆ. ರಾಹುಲ್ ಗಾಂಧಿ ವಿಚಾರಣೆ ನಡೆದಾಗ ಪ್ರತಿಭಟನೆ ಮಾಡಿದ್ರು ಅವಾಗ ಇಡಿ ಯವರು ಏನಾದ್ರೂ ನಿಲ್ಲಿಸಿದ್ರಾ ಅವರು ಅವರ ಕೆಲಸ ಮಾಡಿದರು. ರಾಹುಲ್ ಗಾಂಧಿಯ ಮೇಲೆ ವಿಚಾರಣೆ ಆಗಿದೆ. ಕಾನೂನು ಎಲ್ಲರಿಗೂ ಒಂದೇ. ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಏನು ಮಾಡಿದೆ ತಿರುಗಿ ನೋಡಲಿ, ನಾವು ಅವರ ಮಟ್ಟಕ್ಕೆ ಹೋಗಲ್ಲ ಎಂದು‌ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

ಚಂದ್ರಶೇಖರ್ ಗುರೂಜಿ ಹತ್ಯೆ ಪೂರ್ವನಿಯೋಜಿತ ಕೃತ್ಯ

ವಾಸ್ತು ತಜ್ಞ ಚಂದ್ರಶೇಖರ್ ಗುರೂಜಿ ಹತ್ಯೆ ನೋವಿನ ಸಂಗತಿಯಾಗಿದೆ ಹಾಗೂ ಇದೊಂದು ಪೂರ್ವನಿಯೋಜಿತ ಕೃತ್ಯ ಎಂದು ಸಚಿವ ಆರ್. ಅಶೋಕ್ ಹೇಳಿದರು.


ಚಂದ್ರಶೇಖರ್ ಗುರೂಜಿ ವಾಸ್ತು ಬಗ್ಗೆ ಸಾಕಷ್ಟು ತಜ್ಞರಾಗಿದ್ದರು. ಬಡವರಿಗೂ ವಾಸ್ತು ಅನುಕೂಲ ನೀಡಲು ಮಾಧ್ಯಮಗಳ ಮೂಲಕ ಸಹಾಯ ಮಾಡುತ್ತಿದ್ದರು. ಚಂದ್ರಶೇಖರ್ ಗುರೂಜಿ‌ ಅವರಿಗೆ ಯಾವುದೇ ವೈರಿಗಳು ಇರಲಿಲ್ಲ. ಅಲ್ಲಿನ ಪೊಲೀಸ್ ಕಮಿಷನರ್ ಅವರ ಜೊತೆ ಮಾತನಾಡಿದ್ದೇನೆ. ಘಟನೆಯ ಕುರಿತಾಗಿ ತಿಳಿಸಿದ್ದಾರೆ. ಸದ್ಯದ ಮಾಹಿತಿಯ ಪ್ರಕಾರ ಅವರ ಜೊತೆಗಿದ್ದವರೇ ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ. ಶಂಕಿತರು ಮೊಬೈಲ್ ಸ್ವಿಚ್ಛ್ ಆಫ್ ಮಾಡಿದ್ದಾರೆ. ಪೊಲೀಸರಿಗೆ ಇನ್ನಷ್ಟು ಸಂಶಯ ಮೂಡಿ ಕಾರ್ಯ ಪ್ರವೃತ್ತರಾಗಿದ್ದಾರೆ ಎಂದರು.

PSI recruitment scam: ವಿಜಯೇಂದ್ರ, ಅಶ್ವತ್ಥನಾರಾಯಣ ಮೇಲೂ ಆರೋಪವಿದೆ!: ಸಿದ್ದರಾಮಯ್ಯ

ಆರೋಪಿಗಳನ್ನು ಕೂಡಲೇ ಬಂಧನ ಮಾಡುವಂತೆ ಸೂಚನೆ ನೀಡಲಾಗಿದೆ. ಇದು ಪೂರ್ವನಿಯೋಜಿತ ಕೃತ್ಯ. ಈ ಘಟನೆ ಖಂಡನೀಯವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥನೆ ಮಾಡುತ್ತೇನೆ ಎಂದು‌ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ