ಆ್ಯಪ್ನಗರ

ಕೊರೊನಾ ಸೋಂಕು, ಸಾವಿನ ಸಂಖ್ಯೆಯನ್ನು ರಾಜ್ಯ ಸರ್ಕಾರ ಬಚ್ಚಿಡುತ್ತಿದ್ಯಾ? ದಾಖಲೆ ಪ್ರಕಟಿಸಿದ ಸಿದ್ದರಾಮಯ್ಯ

ಕೊರೊನಾ ಸಾವು ಹಾಗೂ ಸೋಂಕು ಮಾಹಿತಿಯನ್ನು ರಾಜ್ಯ ಸರ್ಕಾರ ಬಚ್ಚಿಡುತ್ತಿದ್ಯಾ? ಇಂತಹದೊಂದು ಆರೋಪವನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾಡಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ.

Vijaya Karnataka Web 30 Sep 2020, 2:52 pm
ಬೆಂಗಳೂರು: ಕೊರೊನಾ ಸೋಂಕು ಪ್ರಕರಣ ಹಾಗೂ ಸಾವಿನ ಸಂಖ್ಯೆಯನ್ನು ರಾಜ್ಯ ಸರ್ಕಾರ ಬಚ್ಚಿಡುತ್ತಿದ್ಯಾ ಎಂಬ ಅನುಮಾನವನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಇದಕ್ಕೆ ಪೂರಕವಾಗಿ ಕೆಲವು ದಾಖಲೆಗಳನ್ನು ಟ್ವೀಟ್ ಮಾಡುವ ಮೂಲಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
Vijaya Karnataka Web Siddaramaiah


ಕೊಲಾರದ ಆಸ್ಪತ್ರೆಯ ದಾಖಲೆ ಹಾಗೂ ಆರೋಗ್ಯ ಇಲಾಖೆ ನೀಡಿರುವ ಮಾಹಿತಿಯನ್ನು ಮುಂದಿಟ್ಟು ಟ್ವೀಟ್ ಮಾಡಿರುವ ಅವರು ಸರ್ಕಾರದ ಬಗ್ಗೆ ಜನರಿಗೆ ಇರುವ ಅನುಮಾನಕ್ಕೆ ಈ ಪುರಾವೆಗಳು ಪುಷ್ಠಿ ನೀಡುತ್ತಿವೆ ಎಂದಿದ್ದಾರೆ.


ದಿನಾಂಕ 19ರಂದು 4 ಮತ್ತು ದಿನಾಂಕ 20ರಂದು 1 ಸಾವು ಸಂಭವಿಸಿದೆ ಎಂದು ಕೋಲಾರದ ಜಾಲಪ್ಪ ಎಂಬ ಖಾಸಗಿ ಆಸ್ಪತ್ರೆ ವರದಿ ಮಾಡಿದೆ. ಆದರೆ ಆರೋಗ್ಯ ಇಲಾಖೆ ಆ ದಿನಗಳಲ್ಲಿ ಕೊರೊನಾ ಸಾವು ಸಂಭವಿಸಿಲ್ಲ ಎಂದು ಪ್ರಕಟಣೆ ಹೊರಡಿಸಿದೆ. ಇದು ಬಿಎಸ್‌ ಯಡಿಯೂರಪ್ಪ ಸರ್ಕಾರದ ಕೊರೊನಾ ನಿಯಂತ್ರಣದ ಪರಿ! ಎಂದು ಕಿಡಿಕಾರಿದ್ದಾರೆ.

ಕೊರೊನಾ ನಿಯಂತ್ರಣದಲ್ಲಿ ತನ್ನ ವೈಫಲ್ಯವನ್ನು ಮುಚ್ಚಿಡಲು ಸಿಎಂ ಬಿಎಸ್‌ವೈ ಅವರು ಸಾವು ಮತ್ತು ಸೋಂಕಿನ ಮಾಹಿತಿಯನ್ನು ಬಚ್ಚಿಡುತ್ತಿದ್ದಾರೆ ಎಂಬ ಸಾರ್ವಜನಿಕರಲ್ಲಿನ ಅನುಮಾನಕ್ಕೆ ಕೋಲಾರ ಜಿಲ್ಲೆಯ ಸಾವುಗಳ ಬಗ್ಗೆ ಆರೋಗ್ಯ ಇಲಾಖೆಯ ಸುಳ್ಳುಗಳೇ ಪುರಾವೆ ಎಂದು ಟ್ವಿಟ್ಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ