ಆ್ಯಪ್ನಗರ

ಪದತ್ಯಾಗದ ವೇಳೆಯಲ್ಲಿ ಎಚ್ಡಿಕೆಗೆ ದೋಸ್ತಿಗಳ ಸಾಥ್‌

ಎಚ್‌. ಡಿ. ಕುಮಾರಸ್ವಾಮಿ ಅವರ ರಾಜೀನಾಮೆ ಸಲ್ಲಿಕೆ ವೇಳೆ ಸರಕಾರದಲ್ಲಿ ದೋಸ್ತಿ ಪಕ್ಷಕ್ಕೆ ಸೇರಿದ ಡಾ.ಜಿ.ಪರಮೇಶ್ವರ ಹಾಗೂ ಡಿ.ಕೆ.ಶಿವಕುಮಾರ್‌ ಹಾಜರಿ ಗಮನ ಸೆಳೆಯಿತು.

Vijaya Karnataka 24 Jul 2019, 5:00 am
ಬೆಂಗಳೂರು : ಎಚ್‌. ಡಿ. ಕುಮಾರಸ್ವಾಮಿ ಅವರ ರಾಜೀನಾಮೆ ಸಲ್ಲಿಕೆ ವೇಳೆ ಸರಕಾರದಲ್ಲಿ ದೋಸ್ತಿ ಪಕ್ಷಕ್ಕೆ ಸೇರಿದ ಡಾ.ಜಿ.ಪರಮೇಶ್ವರ ಹಾಗೂ ಡಿ.ಕೆ.ಶಿವಕುಮಾರ್‌ ಹಾಜರಿ ಗಮನ ಸೆಳೆಯಿತು.
Vijaya Karnataka Web congress leaders gave company to cm in rajabhavan
ಪದತ್ಯಾಗದ ವೇಳೆಯಲ್ಲಿ ಎಚ್ಡಿಕೆಗೆ ದೋಸ್ತಿಗಳ ಸಾಥ್‌


ವಿಧಾನಸೌಧದಿಂದ ನೇರವಾಗಿ ರಾಜಭವನಕ್ಕೆ ತೆರಳಿದ ಸಿಎಂ ಕುಮಾರಸ್ವಾಮಿ ಜತೆ ದೋಸ್ತಿ ಪಕ್ಷದ ಈ ಇಬ್ಬರೂ ಮುಖಂಡರು ಜತೆಗಿದ್ದರು. ಸರಕಾರದಲ್ಲಿ ಕಾಂಗ್ರೆಸ್‌ ಪ್ರತಿನಿಧಿಸಿದ್ದ ಡಾ.ಪರಮೇಶ್ವರ ಹಾಗೂ ಶಿವಕುಮಾರ್‌ ಕೊನೆವರೆಗೂ ಸಿಎಂ ಜತೆಗಿದ್ದರು. ಸರಕಾರ ಉಳಿಸಿಕೊಳ್ಳಲು ಎರಡೂ ಪಕ್ಷಗಳ ಮುಖಂಡರು ಕಸರತ್ತು ನಡೆಸಿದ್ದರೆ, ಶಿವಕುಮಾರ್‌ ವಿಶೇಷ ಕಾಳಜಿ ವಹಿಸಿದ್ದರು.

ಸಿಎಂ ಸಂಪುಟದಲ್ಲಿದ್ದ ಸಾ.ರಾ.ಮಹೇಶ್‌, ಎಚ್‌.ಡಿ.ರೇವಣ್ಣ, ವೆಂಕಟರಾವ್‌ ನಾಡಗೌಡ, ಶಾಸಕ ಶಿವಲಿಂಗೇಗೌಡ, ಮೇಲ್ಮನೆ ಸದಸ್ಯ ಚೌಡರೆಡ್ಡಿ ತೂಪಲ್ಲಿ ಕೂಡ ಕುಮಾರಸ್ವಾಮಿ ಜತೆಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ