ಆ್ಯಪ್ನಗರ

ಸಭಾಪತಿ ರಾಜೀನಾಮೆ ನೀಡಲಿ, ಕಾಂಗ್ರೆಸ್‌ ಸದಸ್ಯರು ಸಂಯಮ ತೋರಲಿ: ಯಡಿಯೂರಪ್ಪ

ಉಪ ಸಭಾಪತಿ ಕತ್ತು ಹಿಡಿದು ಎಳೆದು ಅಪಮಾನ ಮಾಡಿರುವುದು ದೇಶದ ಇತಿಹಾಸದಲ್ಲಿ ಎಂದೂ ನಡೆದಿರಲಿಲ್ಲ. ಇದು ಕಾಂಗ್ರೆಸ್‌ನ ಸಂಸ್ಕೃತಿಯನ್ನು ತೋರಿಸುತ್ತದೆ. ಈಗಲಾದರೂ ಸಭಾಪತಿ ಅವರಿಗೆ ರಾಜೀನಾಮೆ ಬಿಸಾಕಲು ಕಾಂಗ್ರೆಸ್‌ನವರು ಹೇಳಲಿ.

Vijaya Karnataka Web 15 Dec 2020, 9:37 pm
ಬೆಂಗಳೂರು: ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್‌ ಸದಸ್ಯರು ನಡೆದುಕೊಂಡಿರುವ ರೀತಿ ಪ್ರಜಾಪ್ರಭುತ್ವಕ್ಕೆ ಶೋಭೆ ತರುವುದಿಲ್ಲ. ಬಹುಮತ ಇಲ್ಲದೇ ಇರುವುದರಿಂದ ಸಭಾಪತಿ ಈಗಲಾದರೂ ರಾಜೀನಾಮೆ ನೀಡಲಿ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
Vijaya Karnataka Web ಬಿಎಸ್‌ ಯಡಿಯೂರಪ್ಪ
ಬಿಎಸ್‌ ಯಡಿಯೂರಪ್ಪ


''ಉಪ ಸಭಾಪತಿ ಅವರು ಬಂದು ಪೀಠದಲ್ಲಿ ಕುಳಿತುಕೊಳ್ಳುತ್ತಾರೆ ಎಂದು ಸೋಮವಾರವೇ ತಿಳಿಸಲಾಗಿತ್ತು. ಅದರಂತೆ ಅವರು ಬಂದು ಕುಳಿತು ಅವಿಶ್ವಾಸ ನಿರ್ಣಯ ಮಂಡಿಸುತ್ತಿದ್ದರು. ಆಮೇಲೆ ನಿರ್ಣಯದ ಪರ ಬಹುಮತವಿಲ್ಲ ಎಂದಾದರೆ ಸಭಾಪತಿಗಳೇ ಮುಂದುವರಿಯಬಹುದಿತ್ತು. ಬೆಲ್‌ ಹೊಡೆದ ಮೇಲೆ ಬಂದರೋ ಅಥವಾ ಬೆಲ್‌ ನಿಂತ ಮೇಲೆ ಬಂದರೋ ಎನ್ನುವುದು ಮುಖ್ಯವಲ್ಲ. ಇಲ್ಲಿ ಬಹುಮತಕ್ಕೆ ಪ್ರಾಶಸ್ತ್ಯ. ಕಾಂಗ್ರೆಸ್‌ನವರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಬಹುಮತವಿದೆಯಾ ಎನ್ನುವುದನ್ನು ಕಾಂಗ್ರೆಸ್‌ನವರು ಹೇಳಲಿ'' ಎಂದು ಸವಾಲೆಸೆದರು.

''ಉಪ ಸಭಾಪತಿ ಕತ್ತು ಹಿಡಿದು ಎಳೆದು ಅಪಮಾನ ಮಾಡಿರುವುದು ದೇಶದ ಇತಿಹಾಸದಲ್ಲಿ ಎಂದೂ ನಡೆದಿರಲಿಲ್ಲ. ಇದು ಕಾಂಗ್ರೆಸ್‌ನ ಸಂಸ್ಕೃತಿಯನ್ನು ತೋರಿಸುತ್ತದೆ. ಈಗಲಾದರೂ ಸಭಾಪತಿ ಅವರಿಗೆ ರಾಜೀನಾಮೆ ಬಿಸಾಕಲು ಕಾಂಗ್ರೆಸ್‌ನವರು ಹೇಳಲಿ. ಈ ಮೂಲಕ ಸಭಾಪತಿ ಸ್ಥಾನಕ್ಕೆ ಗೌರವ ತರುವ ಕೆಲಸ ಮಾಡಲಿ'' ಎಂದು ಬಿಎಸ್‌ ಯಡಿಯೂರಪ್ಪ ಬುದ್ಧಿವಾದ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ