ಆ್ಯಪ್ನಗರ

ವಿಪಕ್ಷದ ನಾಯಕರೊಂದಿಗೆ ಸೋನಿಯಾ ಗಾಂಧಿ ವಿಡಿಯೋ ಸಂವಾದದಲ್ಲಿ ಭಾಗಿಯಾದ ದೇವೇಗೌಡ

ವಿಪಕ್ಷಗಳ ಪ್ರಮುಖ ನಾಯಕ ಜೊತೆಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನಡೆಸಿದ ವಿಡಿಯೋ ಸಂವಾದದಲ್ಲಿ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಭಾಗಿಯಾದರು. ಕೇಂದ್ರ ಸರ್ಕಾರದಿಂದ ಕೊರೊನಾ ನಿರ್ವಹಣೆ, ವಲಸೆ ಕಾರ್ಮಿಕರ ಸಮಸ್ಯೆ ಸೇರಿದಂತೆ ಹಲವಾರು ವಿಚಾರಗಳ ಕುರಿತಾಗಿ ಚರ್ಚೆ ನಡೆಯಿತು.

Vijaya Karnataka Web 22 May 2020, 4:31 pm
ಬೆಂಗಳೂರು: ದೇಶದ 18 ಪಕ್ಷಗಳ ನಾಯಕರೊಂದಿಗೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ವಿಡಿಯೋ ಸಂವಾದ ನಡೆಸಿದ್ದು ರಾಜ್ಯದಿಂದ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಭಾಗಿಯಾಗುವ ಮೂಲಕ ಚರ್ಚೆ ನಡೆಸಿದರು.
Vijaya Karnataka Web sonia video confarence


ಕೊರೊನಾ ಸೋಂಕು ಹಾಗೂ ಅದರ ಪರಿಣಾಮಗಳ ಕುರಿತಾಗಿ ವಿಪಕ್ಷಗಳ ಮುಖಂಡರ ಜೊತೆಗೆ ಸೋನಿಯಾ ಗಾಂಧಿ ಸುದೀರ್ಘವಾಗಿ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಕರ್ನಾಟಕದ ಸ್ಥಿತಿಗತಿಗಳ ಕುರಿತಾಗಿ ದೇವೇಗೌಡರ ಜೊತೆಗೆ ಸೋನಿಯಾ ಚರ್ಚೆ ನಡೆಸಿದರು.

ಪಿಎಂ ಕೇರ್ಸ್ ನಿಧಿ ಕುರಿತಾಗಿ ಟ್ವೀಟ್, ಸೋನಿಯಾ ಗಾಂಧಿ ವಿರುದ್ಧ ಮತ್ತೊಂದು ದೂರು

ವಿಡಿಯೋ ಸಂವಾದಲ್ಲಿ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರಿಗೆ ಮೊದಲ ಪ್ರಾಶಸ್ತ್ಯವನ್ನು ನೀಡಲಾಗಿತ್ತು. ಸಂವಾದದ ಸಂದರ್ಭದಲ್ಲಿ ಸೋನಿಯಾ ಗಾಂಧಿ ಅವರಿಗೆ ಎದ್ದು ನಿಂತು ದೇವೇಗೌಡರು ವಂದಿಸಿದರು. ಈ ವೇಳೆ ಸೋನಿಯಾ ಗಾಂಧಿಯವರು ಕೈಮುಗಿದು ದೇವೇಗೌಡರ ಆರೋಗ್ಯ ವಿಚಾರಿಸಿದರು.

ಕೊರೊನಾ ಪರಿಹಾರವಾಗಿ ಕೇಂದ್ರ ಸರ್ಕಾರ 2 ಲಕ್ಷ ಕೋಟಿ ಪ್ಯಾಕೇಜ್, ವಲಸೆ ಕಾರ್ಮಿಕರ ಸಮಸ್ಯೆ, ರಾಜ್ಯಗಳಿಗೆ ಹಣ ಬಿಡುಗಡೆಗೊಳಿಸದ ವಿಚಾರಗಳು ಹಾಗೂ ದೇಶಾದ್ಯಂತ ಹೆಚ್ಚಾಗುತ್ತಿರುವ ಕೊರೊನಾ ಸೋಂಕು ಸೇರಿದಂತೆ ಹಲವಾರು ವಿಚಾರಗಳ ಕುರಿತಾಗಿ ವಿಡಿಯೋ ಸಂವಾದಲ್ಲಿ ಚರ್ಚೆ ನಡೆಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ