ಆ್ಯಪ್ನಗರ

ಮೋದಿ ಮತ್ತೆ ಪ್ರಧಾನಿಯಾದರೆ ದೇಶದಲ್ಲಿ ಗಾಂಧಿ ಪ್ರತಿಮೆ ಉಳಿಯದು

ಮೋದಿ ಪುನಃ ಪ್ರಧಾನಿಯಾದರೆ ದೇಶದಲ್ಲಿ ಎಲ್ಲೂ ಗಾಂಧಿ ಪ್ರತಿಮೆ ಉಳಿಯುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಆರೋಪಿಸಿದ್ದಾರೆ.

Vijaya Karnataka 19 May 2019, 5:00 am
ಬೆಂಗಳೂರು : ಮೋದಿ ಪುನಃ ಪ್ರಧಾನಿಯಾದರೆ ದೇಶದಲ್ಲಿ ಎಲ್ಲೂ ಗಾಂಧಿ ಪ್ರತಿಮೆ ಉಳಿಯುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಆರೋಪಿಸಿದ್ದಾರೆ.
Vijaya Karnataka Web congress protest against bjp
ಮೋದಿ ಮತ್ತೆ ಪ್ರಧಾನಿಯಾದರೆ ದೇಶದಲ್ಲಿ ಗಾಂಧಿ ಪ್ರತಿಮೆ ಉಳಿಯದು


ಗೋಡ್ಸೆ ಪರ ವಹಿಸಿ ಹೇಳಿಕೆ ನೀಡಿದ್ದ ಬಿಜೆಪಿ ಸಂಸದರ ವಿರುದ್ಧ ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರು ಗಾಂಧಿನಗರದ ಗಾಂಧಿ ಪ್ರತಿಮೆ ಬಳಿ ಶನಿವಾರ ಧರಣಿ ನಡೆಸಿದರು. ಈ ವೇಳೆ ಮಾತನಾಡಿದ ಗುಂಡೂರಾವ್‌, ''ಮೋದಿಯವರು ಮತ್ತೆ ಅಧಿಕಾರಕ್ಕೆ ಬಂದರೆ ಗಾಂಧಿ ಪ್ರತಿಮೆ ಇರುವ ಕಡೆ ಗೋಡ್ಸೆ ಪ್ರತಿಮೆ ಅನಾವರಣಗೊಳಿಸುತ್ತಾರೆ. ಸುಳ್ಳು ಭರವಸೆ ನೀಡುವುದು ಮತ್ತು ಸುಳ್ಳು ಹೇಳಿಕೊಂಡು ಹೋಗುವುದೇ ಮೋದಿ ಅಭ್ಯಾಸ. ಡಿಜಿಟಲ್‌ ಕ್ಯಾಮೆರಾ, ಇ-ಮೇಲ್‌ ವಿಚಾರದಲ್ಲೂ ಹಾಗೆಯೇ ನಡೆದುಕೊಂಡಿದ್ದಾರೆ. ಗಾಂಧೀಜಿ ಬಗ್ಗೆ ಕೆಟ್ಟದಾಗಿ ಮಾತನಾಡುವ ತಮ್ಮ ಸಂಸದರನ್ನು ನಿಯಂತ್ರಿಸುವುದಿಲ್ಲ. ಸಾಧ್ವಿ ಪ್ರಜ್ಞಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ ಮೋದಿ ಅವರೊಬ್ಬ ಡೋಂಗಿಯೆಂದು ಸಾಬೀತಾಗುತ್ತದೆ,'' ಎಂದು ತರಾಟೆಗೆ ತೆಗೆದುಕೊಂಡರು.

''ಗೋಡ್ಸೆ ಒಬ್ಬ ಹಿಂದೂ ಉಗ್ರನೆಂದಿರುವ ಕಮಲ್‌ ಹಾಸನ್‌ ಹೇಳಿಕೆ ಸರಿಯಾಗಿಯೇ ಇದೆ. ಹಿಂದುತ್ವದ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬರುವ ಬಿಜೆಪಿಯವರು ದೇಶಕ್ಕೆ ನೀಡಿದ ಕೊಡುಗೆಯೇನೆಂದು ಹೇಳಲಿ,'' ಎಂದು ಸವಾಲು ಹಾಕಿದರು.

ವಿಧಾನ ಪರಿಷತ್‌ ಸದಸ್ಯ ರಿಜ್ವಾನ್‌ ಅರ್ಷದ್‌, ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಮತ್ತಿತರರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ