ಆ್ಯಪ್ನಗರ

ವೇತನ ಹೆಚ್ಚಳ, ಸೇವೆ ಖಾಯಂ ಭರವಸೆ - ರಾಜೀನಾಮೆ ನಿರ್ಧಾರ ಹಿಂಪಡೆದ ಗುತ್ತಿಗೆ ವೈದ್ಯರು

​​ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ 507 ವೈದ್ಯರಿಗೆ ನೇರ ನೇಮಕಾತಿ ಸಂದರ್ಭದಲ್ಲಿ ಕೃಪಾಂಕ ನೀಡಲಾಗುವುದು. ಈ ಮೂಲಕ ಕಾಯಂ ನೇಮಕಕ್ಕೆ ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ಶ್ರೀರಾಮುಲು ಹೇಳಿದ್ದಾರೆ.

Vijaya Karnataka 7 Jul 2020, 11:52 pm

ಬೆಂಗಳೂರು: ಗುತ್ತಿಗೆ ಆಧಾರದ ಮೇಲೆ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರ ಸೇವೆಯನ್ನು ಖಾಯಂಗೊಳಿಸುವ ಭರವಸೆಯನ್ನು ರಾಜ್ಯ ಸರಕಾರ ನೀಡಿದೆ. ವಿಧಾನಸೌಧದಲ್ಲಿ ಮಂಗಳವಾರ ಸಂಜೆ ಗುತ್ತಿಗೆ ವೈದ್ಯರ ಜತೆ ನಡೆಸಿದ ಸಭೆಯಲ್ಲಿ ಸರಕಾರದ ಭರವಸೆಗೆ ಗುತ್ತಿಗೆ ವೈದ್ಯರು ರಾಜೀನಾಮೆ ಹಿಂಪಡೆದು ಸೇವೆ ಮುಂದುವರಿಸಲು ಒಪ್ಪಿದ್ದಾರೆ.
Vijaya Karnataka Web B Sriramulu K Sudhakar


ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ 507 ವೈದ್ಯರಿಗೆ ನೇರ ನೇಮಕಾತಿ ಸಂದರ್ಭದಲ್ಲಿ ಕೃಪಾಂಕ ನೀಡಲಾಗುವುದು. ಈ ಮೂಲಕ ಖಾಯಂ ನೇಮಕಕ್ಕೆ ಸರಕಾರ ಕ್ರಮ ಕೈಗೊಳ್ಳಲಿದೆ. ಜತೆಗೆ, ಗುತ್ತಿಗೆ ವೈದ್ಯರಿಗೆ ಮಾಸಿಕ 45 ಸಾವಿರ ಇದ್ದ ವೇತನವನ್ನು 60 ಸಾವಿರಕ್ಕೆ ಹೆಚ್ಚಳ ಮಾಡಿ ಈಗಾಗಲೇ ಸರಕಾರ ಆದೇಶ ಹೊರಡಿಸಿದೆ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ತಿಳಿಸಿದರು.

2008-09 ರಲ್ಲಿ 1,944 ಗುತ್ತಿಗೆ ವೈದ್ಯರನ್ನು ಖಾಯಂ ಮಾಡಲಾಗಿತ್ತು. ಇದೀಗ 507 ಗುತ್ತಿಗೆ ವೈದ್ಯರನ್ನೂ ಖಾಯಂ ಮಾಡಲು ಸಿಎಂ ಯಡಿಯೂರಪ್ಪ ಒಪ್ಪಿದ್ದಾರೆ ಎಂದು ಶ್ರೀರಾಮುಲು ಹೇಳಿದರು.
ಕೊರೊನಾ ಸಂಕಷ್ಟದ ನಡುವೆ ಸರ್ಕಾರಕ್ಕೆ ತಟ್ಟಲಿದೆ ಆಶಾ ಕಾರ್ಯಕರ್ತೆಯರ ಮುಷ್ಕರದ ಬಿಸಿ!

ಮುಷ್ಕರ ಬೇಡ


ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಕೊರೊನಾ ವಾರಿಯರ್ಸ್ ಆಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಆಶಾ ಕಾರ್ಯಕರ್ತೆಯರು ಮುಷ್ಕರದ ಹಾದಿ ತುಳಿಯಬಾರದು. ಸಮಸ್ಯೆ ಬಗ್ಗೆ ಸಿಎಂ ಜತೆ ಚರ್ಚಿಸಿ ಬಗೆಹರಿಸಲಾಗುವುದು ಎಂದು ಸಚಿವರು ಮನವಿ ಮಾಡಿದರು. ಸೋಂಕು 3ನೇ ಹಂತ ತಲುಪಿಲ್ಲ ರಾಜ್ಯದಲ್ಲಿಸೋಂಕು ಇದುವರೆಗೂ ಕಮ್ಯುನಿಟಿ ಹಂತಕ್ಕೆ ತಲುಪಿಲ್ಲ. ಇನ್ನು ಒಂದು ಹಾಗೂ 2ನೇ ಸ್ಟೇಜ್‌ ನಲ್ಲಿದೆ. 3ನೇ ಹಂತಕ್ಕೆ ಇನ್ನೂ ಹೋಗಿಲ್ಲಎಂದು ಸಚಿವರು ಸ್ಪಷ್ಟಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ