ಆ್ಯಪ್ನಗರ

KGF Release Controversy: ಚಿತ್ರ ಬಿಡುಗಡೆಗೆ ಮಧ್ಯಂತರ ತಡೆ, ಬಿಡುಗಡೆಯಾಗುತ್ತಾ? ಇಲ್ಲವಾ?

ಇದು ರೌಡಿ ತಂಗಂ ಜೀವನಾಧಾರಿತ ಸಿನಿಮಾ ಎಂದು ಆರೋಪಿಸಲಾಗಿದೆ. ಇದರ ಹಕ್ಕು ಪಡೆದಿದ್ದ ವೆಂಕಟೇಶ್‌ ಎಂಬವರು ಮೊಕದ್ದಮೆ ಹೂಡಿದ್ದು, ನ್ಯಾಯಾಲಯ ಈಗ ಮಧ್ಯಂತರ ತಡೆಯಾಜ್ಞೆ ನೀಡಿದೆ.

Vijaya Karnataka Web 20 Dec 2018, 9:50 pm
ಬೆಂಗಳೂರು: ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಕೆಜಿಎಫ್‌ ಚಿತ್ರ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಕರ್ನಾಟಕದಲ್ಲಿ ಮಾತ್ರವಲ್ಲ, ದೇಶ-ವಿದೇಶದಲ್ಲೂ ಕೆಜಿಎಫ್‌ ಕ್ರೇಜ್‌ ಹೆಚ್ಚಾಗಿದೆ. ಆದರೆ ಇದಕ್ಕೆ ಈಗ ವಿಘ್ನ ಎದುರಾಗಿದೆ.

ಕೆಜಿಎಫ್‌ ಚಿತ್ರ ಬಿಡುಗಡೆಗೆ ತಡೆಯಾಜ್ಞೆ ಬಂದಿದೆ. ಈಗ ಚಿತ್ರ ಬಿಡುಗಡೆಯಾಗುತ್ತದೋ ಇಲ್ಲವೋ ಎಂಬ ಅನುಮಾನ ವ್ಯಕ್ತವಾಗಿದೆ. ಭಾರಿ ಖುಷಿಯಲ್ಲಿದ್ದ ಕನ್ನಡ ಚಿತ್ರ ರಸಿಕರಿಗೆ ಈಗ ತೀವ್ರ ನಿರಾಸೆಯಾಗಿದೆ.

ಬೆಂಗಳೂರಿನ 10ನೇ ಸಿಟಿ ಸಿವಿಲ್‌ ಕೋರ್ಟ್‌ನಿಂದ ತಡೆಯಾಜ್ಞೆ ನೀಡಲಾಗಿದೆ.

ಅರ್ಜಿ 1


ಅರ್ಜಿ 2


ಇದು ರೌಡಿ ತಂಗಂ ಜೀವನಾಧಾರಿತ ಸಿನಿಮಾ ಎಂದು ಆರೋಪಿಸಲಾಗಿದೆ. ಇದರ ಹಕ್ಕು ಪಡೆದಿದ್ದ ವೆಂಕಟೇಶ್‌ ಎಂಬವರು ಮೊಕದ್ದಮೆ ಹೂಡಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಈಗ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಆದರೆ ಚಿತ್ರ ನಿರ್ಮಾಣ ಮಾಡಿರುವ ಹೊಂಬಾಳೆ ಫಿಲಂಸ್‌ ಪರವಾಗಿ ಪ್ರಕಟಣೆ ನೀಡಲಾಗಿದೆ.

ನಿರ್ಮಾಪಕ ವಿಜಯಕುಮಾರ್ ತಿಳಿಸಿದಂತೆ ಕೋರ್ಟ್ ನಿಂದ ಯಾವುದೇ ಅಡತಡೆಯ ಕಾನೂನಾತ್ಮಕ ಪತ್ರಗಳು ನಮಗೆ ಬಂದಿರುವುದಿಲ್ಲ. ನಾಳೆ ಎಂದಿನಂತೆ ಪ್ರದರ್ಶನ ವಿರುತ್ತದೆ. ದೇಶದಾದ್ಯಂತ ಚಿತ್ರ ಬಿಡುಗಡೆಯಾಗಲಿದೆ.ಪ್ರೇಕ್ಷಕರಲ್ಲಿ ಯಾವುದೇ ರೀತಿಯ ಗೊಂದಲ ಬೇಡ ಎಂದು ಹೊಂಬಾಳೆ ಫಿಲಂಸ್ ಪರವಾಗಿ ವಿಜಯಕುಮಾರ್ ಪ್ರಕಟಣೆ ಹೊರಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ